ಸಾರಾಂಶ
-ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸಿದ್ರಾಮ ಚನಗೊಂಡ ವಿಷಾದ
----ಕನ್ನಡಪ್ರಭವಾರ್ತೆ ಚಿತ್ರದುರ್ಗ
ಜಾಗತೀಕರಣ, ಖಾಸಗೀಕರಣದ ಪ್ರಭಾವದಿಂದಾಗಿ ಜಾನಪದ ಸೊಗಡು ಮಾಯವಾಗುತ್ತಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸಿದ್ರಾಮ ಚನಗೊಂಡ ವಿಷಾದ ವ್ಯಕ್ತಪಡಿಸಿದರು.ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ನಮ್ಮ ಸಂಸ್ಕೃತಿ ಮತ್ತು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಜ್ಞಾನದ ವಿದ್ಯಾರ್ಥಿಗಳು ಓದಿನ ಜೊತೆಗೆ ಜಾನಪದದ ಮಹತ್ವ, ನೃತ್ಯ ಗೀತೆಗಳು, ಸಾಹಿತ್ಯ, ವೇಷಭೂಷಣಗಳು ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಅರಿವಿಟ್ಟುಕೊಂಡು ಜೀವನ ಮಾಡಬೇಕು ಎಂದರು.
ಕನ್ನಡ ಉಪನ್ಯಾಸಕ ಪ್ರೊ. ಫೈರೋಜಾ ಮಾತನಾಡಿ, ಗೂಗಲ್ ಸಂಸ್ಕೃತಿಯಲ್ಲಿ ನಮ್ಮ ಜಾನಪದ ನೃತ್ಯ ಗೀತೆಗಳು, ಗಾಯನಗಳು, ವೇಷಭೂಷಣಗಳ ಬಗ್ಗೆ ವಿದ್ಯಾರ್ಥಿಗಳು ಮರೆಯುತ್ತಿದ್ದಾರೆ. ಯಾವುದನ್ನೂ ಸಹ ನೆನಪಿನಲ್ಲಿ ಇಟ್ಟುಕೊಂಡಿಲ್ಲ. ಕುಟ್ಟುವಾಗ, ಬೀಸುವಾಗ, ಮಕ್ಕಳನ್ನು ತೂಗುವಾಗ, ಧಾನ್ಯ ಸಂಗ್ರಹ ಮಾಡುವಾಗ ಹಾಡುವ ಹಾಡುಗಳ ಪರಿಚಯ ಮಾಡಿಕೊಡುವ ಸಂದರ್ಭ ಸೃಷ್ಟಿಯಾಗಿದೆ ಎಂದರು.ಕಾಲೇಜು ಶಿಕ್ಷಣ ಇಲಾಖೆ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಹೆಮ್ಮೆ ಎಂದು ಈ ವರ್ಷದಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ರಾಷ್ಟ್ರೀಯ ಮಟ್ಟಕ್ಕೆ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೂ ಸಹ ತಮ್ಮ ಪ್ರತಿಭೆಗಳನ್ನು ಬೆಳೆಸಬಹುದು. ಡೊಳ್ಳು ಕುಣಿತ, ಕಂಸಾಳೆ, ನಂದಿ ಕುಣಿತ, ನೆನಪಿನಲ್ಲಿ ಉಳಿಯುತ್ತದೆ. ಇಲ್ಲದಿದ್ದರೆ ವಿದ್ಯಾರ್ಥಿಗಳು ಇವುಗಳನ್ನ ಮರೆಯುತ್ತಾರೆ ಎಂದರು.
ಇಂಗ್ಲಿಷ್ ಪ್ರಾಧ್ಯಾಪಕ ಮಹೇಶ್ ಮಾತನಾಡಿ, ನಮ್ಮ ರಾಷ್ಟ್ರೀಯ ಸಂಸ್ಕೃತಿ, ಜಾನಪದ ಸೊಗಡನ್ನ ಅರಿತುಕೊಂಡು, ಅವುಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕು, ಇದರಿಂದ ನಾವು ಮರೆಯುತ್ತಿರುವ ಜಾನಪದ ಸೊಗಡು ಮತ್ತು ಪರಿಕಲ್ಪನೆ ಮರು ಸ್ಥಾಪನೆ ಆಗಬೇಕು ಎಂದರು.ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ.ನಾಗರಾಜ್ ಮಾತನಾಡಿ, ಜಾನಪದ ಕಲೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಕಡಿಮೆಗೊಳಿಸಿಕೊಳ್ಳುತ್ತಿದ್ದಾರೆ. ಓದಿನ ಜೊತೆಗೆ ಈ ರೀತಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು. ವಿದ್ಯಾರ್ಥಿಗಳು ಬರಿ ಐಟಿಬಿಟಿ ಕಂಪನಿಗಳಲ್ಲಿ ಉದ್ಯೋಗ ಗಳಿಸುವುದಕಷ್ಟೇ ತಮ್ಮ ಪ್ರತಿಭೆಯನ್ನ ಮೀಸಲಾಗಿಡಬಾರದು ಎಂದರು.
ಉಪನ್ಯಾಸಕಿ ರಶ್ಮಿಯವರು ಸ್ವಾಗತಿಸಿದರು. ಸೃಷ್ಟಿ ನಿರೂಪಣೆ ಮಾಡಿದದರು. ಬಿ ಎಸ್ ಸಿ ಎರಡನೇ ವರ್ಷದ ಎಚ್.ಎಸ್ ಪ್ರೇರಣ ಜಾನಪದ ಗೀತೆಯಲ್ಲಿ ಪ್ರಥಮ, ಜಾನಪದ ನೃತ್ಯದಲ್ಲಿ ರಚನಾ ಪ್ರಥಮ, ವೇಷಭೂಷಣ ಸ್ಪರ್ಧೆಯಲ್ಲಿ ಪ್ರಾರ್ಥನಾ ಕೆ ಪ್ರಥಮ ಬಹುಮಾನ ಗಳಿಸಿದರು.---------------
ಪೋಟೋ: ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ನಮ್ಮ ಸಂಸ್ಕೃತಿ ಮತ್ತು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇಷ ಭೂಷಣ ತೊಟ್ಟು ಗಮನ ಸೆಳೆದರು.---
ಫೋಟೋ22 ಸಿಟಿಡಿ2