ಹೊಸದುರ್ಗ ಪಟ್ಟಣದ ಇಂದಿರಾಗಾಂಧಿ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಬುಡಕಟ್ಟು ಶತಮಾನೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಜನಪದ ಎಸ್ ಬಾಲಾಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಜನಪದವೆಂಬುದು ಮೌಖಿಕ ಪರಂಪರೆ ಮತ್ತು ನಮ್ಮ ಸಂಸ್ಕೃತಿ ಎಂದು ಕನಾ೯ಟಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಜನಪದ ಎಸ್.ಬಾಲಾಜಿ ತಿಳಿಸಿದರು.

ಪಟ್ಟಣದ ಇಂದಿರಾಗಾಂಧಿ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ನಿಜಲಿಂಗಪ್ಪ ವಿದ್ಯಾಸಂಸ್ಥೆ, ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬುಡಕಟ್ಟು ಶಮಾನೋತ್ಸವ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನೆಲದಲ್ಲಿ ಮಲೆಯ ಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಯಲ್ಲಮ್ಮನ ಕಾವ್ಯಗಳು ಹೀಗೆ 5 ಮಹಾಕಾವ್ಯಗಳು, ಕರಾವಳಿ, ಉತ್ತರ ಮತ್ತು ದಕ್ಷಿಣ ಭಾಗವನ್ನೊಳಗೊಂಡ ಬುಡಕಟ್ಟು ಸಂಸ್ಕೃತಿ 78 ಖಂಡ ಕಾವ್ಯಗಳು ಕಲೆಗಳು ಸಾಕಷ್ಟಿವೆ. ಬುಡಕಟ್ಟು ಸಂಸ್ಕೃತಿಯನ್ನು ಬಿಳಿಗಿರಿ ರಂಗನ ಬೆಟ್ಟದ ಸೋಲಿಗರಲ್ಲಿ ಕಾಣಬಹುದು. ಜಾನಪದಕ್ಕೆ ಯಾವುದೇ ಜಾತಿ, ಧರ್ಮದ ಚೌಕಟ್ಟುಗಳು ಇಲ್ಲ ನಮ್ಮ ನೆಲದ ಸಂಸ್ಕೃತಿ, ಆಚರಣೆಗಳು, ಪರಂಪರೆಯಿಂದ ಪರಂಪರೆಗೆ ಹರಿದು ಬಂದಿದೆ ಆಧುನಿಕ ಯುಗದಲ್ಲಿ ಇವೆಲ್ಲವು ಮೂಲೆ ಗುಂಪಾಗಿವೆ ಅವುಗಳನ್ನು ಉಳಿಸಿ ಪೋಷಣೆ ಮಾಡಿ ಕೊಂಡು ಬರುತ್ತಿರುವ ಕಲಾವಿದರಿಗೆ ಮನ್ನಣೆ ಸಿಗಬೇಕು,

ಈ ನಿಟ್ಟಿನಲ್ಲಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಜನಪದ ಕಟ್ಟುವ ಕೆಲಸ ಮಾಡುತ್ತಿದ್ದೆವೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಬಿ.ಮೈಲಾರಪ್ಪ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಜಾನಪದ ಕಲೆಗಳು, ಕಲಾವಿದರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಈ ಜಾನಪದ ಸಾಂಸ್ಕ್ರತಿಕ ಕಲೆ ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ಡಾ.ಬಾಲಾಜಿ ಅವರೊಂದಿಗೆ ಕೈ ಜೋಡಿಸೋಣ ಎಂದು ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ತಿಪ್ಪೇಸ್ವಾಮಿ ಮಾತನಾಡಿ, ಆಧುನಿಕತೆಯಿಂದ ಬುಡಕಟ್ಟು ಕಲೆ ಮತ್ತು ಸಂಸ್ಕೃತಿ ಕಣ್ಮರೆಯಾಗುತ್ತಿರುವು ವಿಷಾದನೀಯ ಇವುಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ನಮ್ಮೆಲರ ಮೇಲೆ ಜವಬ್ದಾರಿಗಳು ಇವೆ ಎಂದರು.

ನಿಜಲಿಂಗಪ್ಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಂದಿರಾಗಾಂಧಿ ಕಾಲೇಜಿನಲ್ಲಿ ಪ್ರಾಚಾರ್ಯ ಡಾ.ಟಿ.ಬಸಪ್ಪ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಸಂಚಾಲಕ ಪೀಲಾಪುರ ಆರ್ ಕಂಠೇಶ್, ಕಾರ್ಯದರ್ಶಿ ಕಲಾವಿದ ಚಂದ್ರು ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ್, ಜಿಲ್ಲಾ ಕನ್ನಡ ಜಾನಪದ ಪರಿಷತ್ ಕೋಶಾಧಿಕಾರಿ ಎಚ್.ಎಸ್.ರುದ್ರಸ್ವಾಮಿ, ಹೊಳಲ್ಕೆರೆ ತಾ.ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ರಾ.ಸು.ತಿಮ್ಮಯ್ಯ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬುಡಕಟ್ಟು ಕಲಾವಿದರನ್ನು ಸನ್ಮಾನ ನೀಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸೋಮನಹಳ್ಳಿ ಎಚ್.ಎಸ್.ಸ್ವಾಮಿ, ಬಾಗೂರು ನಿ.ಶಿ.ಎಂ.ಎಚ್.ನೀಲಕಂಠಯ್ಯ, ಪತ್ರಕರ್ತ ನೀರಗುಂದ ಸುರೇಶ್, ಕೆ.ಬಿ.ಚಂದ್ರಯ್ಯ, ಚಿತ್ರಕಲಾವಿದ ಕುಮಾರಸ್ವಾಮಿ, ಪ್ರತಿಭಾವಂತ ವಿದ್ಯಾರ್ತಿಗಳಾದ ಪ್ರತಿಭಾ, ಪರಶುರಾಮ್, ಫರಿದಭಾನು ಇವರನ್ನು ಸನ್ಮಾನಿಸಲಾಯಿತು.