ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನಪದ ಮುಂದಿನ ಪೀಳಿಗೆಗೆ ಉಳಿಯಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟರೆಡ್ಡಿ ರಾಮರೆಡ್ಡಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2025-26ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪದಲ್ಲಿ ಅವರು ಮಾತನಾಡಿದರು.

ಬೆಳೆಯುತ್ತಿರುವ ತಂತ್ರಜ್ಞಾನ, ಜಾಗತಿಕರಣದ ನಡುವೆ ನಮ್ಮ ಹಳೆಯ ಪರಂಪರೆ, ಗೀತೆ, ಹಾಡು, ಹಬ್ಬ, ಆಚರಣೆಗಳು ಉಳಿಯಬೇಕು. ಈ ನೆಲ ಜಾನಪದಕ್ಕೆ ಹೆಚ್ಚು ಒತ್ತು ಕೊಟ್ಟ ಭೂಮಿ. ನವೋದಯ ಕಾಲೇಜು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಶೈಕ್ಷಣಿಕವಾಗಿ, ಸಾoಸ್ಕೃತಿಕವಾಗಿ ತನ್ನದೇ ಸ್ಥಾನಗಳಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಾಲೇಜು ವರದಾನ ಆಗಿದೆ. ನಮ್ಮ ಆಹಾರ ಕ್ರಮ ನಮ್ಮ ಬದುಕಿನ ಶೈಲಿಯನ್ನು ಹೊಸದಾಗಿ ರೂಪಿಸಬೇಕು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳುಮೊಬೈಲ್ ಗಿಳು ಬಿಟ್ಟು ಪುಸ್ತಕ, ಕಲೆ, ಜನಪದದ ಕಡೆ ಗಮನ ಹರಿಸಬೇಕು. ಪದವಿ ಜೊತೆಗೆ ಸುಸ್ಥಿರ ಕೃಷಿಯನ್ನು ಬೆಳೆಸುವಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದರು. ಈ ನೆಲ ಸಿರಿಧಾನ್ಯಕ್ಕೆ ಹೆಚ್ಚು ಕೊಡುಗೆ ನೀಡಿದ್ದು ಅದರತ್ತ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಅಂಕಗಳೇ ಮನದಂಡ ವಾಗದೆ ಸಂಸ್ಕಾರಯುತ ಬದುಕು ನಿಮ್ಮದಾಗಲಿ ಎಂದು ಹೇಳಿದರು.ಬಹುಮಾನ ವಿತರಿಸಿ ಮಾತನಾಡಿದ ನವೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್, ವಿದ್ಯಾರ್ಥಿಗಳು ಕೇವಲ ಓದಿನಲ್ಲಷ್ಟೇ ಅಲ್ಲ ಕ್ರೀಡೆ, ಬೇರೆ ಬೇರೆ ಚಟುವಟಿಯಿಕೆಯಲ್ಲಿ ಭಾಗಿಯಾಗಬೇಕು. ಪುಸ್ತಕ ಓದುವ ಸoಸ್ಕೃತಿ ಬೆಳೆಸಿಕೊಳ್ಳಿ. ಶ್ರಮ ಪಟ್ಟರೆ ಯಶಸ್ಸು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಬಿ. ಕೆ. ಚಂದ್ರಶೇಖರ್ ಮಾತನಾಡಿ, ಹಿಂದಿನಿಂದ ನಡೆದು ಬಂದಿರುವ ಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಅಂದಿನ ಜೀವನ ಕ್ರಮದಿಂದ ಉತ್ತಮ ಆರೋಗ್ಯ ಲಭಿಸಲು ಸಾಧ್ಯ. ಅಂತಿಮ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅಂಕವಷ್ಟೇ ಅಲ್ಲದೇ ಸ್ವಾವಲಂಬಿ ಬದುಕಿನ ಕಡೆ ಹೆಜ್ಜೆ ಇಡಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ. ರವಿಕುಮಾರ್. ಸಿ,ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಕುಮಾರ. ಪಿ. ಉಪನ್ಯಾಸಕರಾದ ಸದಾನಂದ ಸ್ವಾಮಿ, ಸಿದ್ದಲಿಂಗಮೂರ್ತಿ. ಸತೀಶ್, ಧನ್ಯ, ಮಾನ್ಯಶ್ರೀ , ಸಿಂಧು, ಯಶಸ್ವಿನಿ, ಬೇಬಿ ಇತರರಿದ್ದರು.