ಸಾರಾಂಶ
ಮನೆ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಅವಘಡ ನಡೆಯದಂತೆ ಎಚ್ಚರ ವಹಿಸಬೇಕು. ಮಳೆಗಾಲದಲ್ಲಿ ವಿದ್ಯುತ್ ಕಂಬಗಳ ಹತ್ತಿರ ಮನುಷ್ಯರು ಮತ್ತು ಜಾನುವಾರು ಹೋಗಬಾರದು, ಮನೆಗಳ ಮೇಲ್ಛಾವಣಿ ಮೇಲೆ ವಿದ್ಯುತ್ ತಂತಿ ಹಾಯ್ದು ಹೋಗದಂತೆ ಮುಚ್ಚರಿಕೆ ವಿಧಾನ ಪಾಲಿಸಬೇಕು.
ಕುಷ್ಟಗಿ:
ವಿದ್ಯುತ್ ಅವಘಡ ತಪ್ಪಿಸಲು ಜೆಸ್ಕಾಂ ಇಲಾಖೆಯ ಸುರಕ್ಷತಾ ಕ್ರಮ ಪಾಲಿಸಿದರೆ ಯಾವ ಅಪಾಯ ಆಗುವುದಿಲ್ಲ ಎಂದು ಲಿಂಗಸೂಗೂರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೆಂಕಟರಾವ ಹೇಳಿದರು.ತಾಲೂಕಿನ ತಾವರಗೇರಾ ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಜೆಸ್ಕಾಂ ಆಶ್ರಯದಲ್ಲಿ ನಡೆದ ವಿದ್ಯುತ್ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನೆ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಅವಘಡ ನಡೆಯದಂತೆ ಎಚ್ಚರ ವಹಿಸಬೇಕು. ಮಳೆಗಾಲದಲ್ಲಿ ವಿದ್ಯುತ್ ಕಂಬಗಳ ಹತ್ತಿರ ಮನುಷ್ಯರು ಮತ್ತು ಜಾನುವಾರು ಹೋಗಬಾರದು, ಮನೆಗಳ ಮೇಲ್ಛಾವಣಿ ಮೇಲೆ ವಿದ್ಯುತ್ ತಂತಿ ಹಾಯ್ದು ಹೋಗದಂತೆ ಮುಚ್ಚರಿಕೆ ವಿಧಾನ ಪಾಲಿಸಬೇಕು ಎಂದ ಅವರು, ಕೊಪ್ಪಳ ಮತ್ತು ಲಿಂಗಸೂಗೂರು ಉಪಕೇಂದ್ರಗಳ ವತಿಯಿಂದ ಅಭಿಯಾನ ಆರಂಭಿಸಿದ್ದು ಸಾರ್ವಜನಿಕರಿಗೆ ಮುಂಜಾಗೃತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ನಿಗಮದ ಸಿಬ್ಬಂದಿ ಮಳೆಗಾಲದಲ್ಲಿ ಜನರಿಗೆ ಸುರಕ್ಷತೆ, ಅನಾಹುತ ಸಂಭವಿಸದಂತೆ ಕರ್ತವ್ಯ ನಿರ್ವಹಿಸಿದರು ಸಹ ಜನರ ಅಜಾಗರೂಕತೆಯಿಂದ ಘಟನೆಗಳು ನಡೆಯುತ್ತಿವೆ. ಇದರಿಂದ ಅನಾಹುತಗಳು ಸಂಭವಿಸುತ್ತಿದ್ದು ಈ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ತಾವರಗೇರಾ ಜೆಸ್ಕಾಂ ಇಲಾಖೆ ಶಾಖಾಧಿಕಾರಿ ರಶ್ಮಿ ಮಾತನಾಡಿ, ಇಲಾಖೆ ಜಾಗೃತಿಯ ಭಿತ್ತಿಚಿತ್ರಗಳ ಪ್ರದರ್ಶನ ಮೂಲಕ ಜಾಗೃತಿ ಮೂಡಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಜೆಸ್ಕಾಂ ಕಿರಿಯ ಅಭಿಯಂತರ ಜಂಬುನಾಥ, ಶಿವರುದ್ರಪ್ಪ, ತಾವರಗೇರಾ ಜೆಸ್ಕಾಂ ಇಲಾಖೆ ಸಿಬ್ಬಂದಿ ಮಹಿಬೂಬಸಾಬ್, ನವೀನ್ ಸಿಂಗ್, ರಾಚಯ್ಯ ಹಿರೇಮಠ, ಶರಣಪ್ಪ, ಬೀರಪ್ಪ, ಮುಖ್ಯ ಶಿಕ್ಷಕರು, ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.