ಸಾರಾಂಶ
ಹೊಸಕೋಟೆ: ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಭಗವಾನ್ ಗೌತಮ ಬುದ್ದನ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅನುಕರಣೀಯ ಎಂದು ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜ್ ತಿಳಿಸಿದರು.
ಹೊಸಕೋಟೆ: ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಭಗವಾನ್ ಗೌತಮ ಬುದ್ದನ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅನುಕರಣೀಯ ಎಂದು ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜ್ ತಿಳಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಬುದ್ಧ ಪೌರ್ಣಿಮೆ ಕಾರ್ಯಕ್ರಮದಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭಗವಾನ್ ಗೌತಮ ಬುದ್ಧನ ಜನ್ಮ ದಿನವನ್ನು ಬುದ್ದಪೌರ್ಣಿಮೆಯಾಗಿ ಆಚರಣೆ ಮಾಡುವ ಮೂಲಕ ಬುದ್ದನ ಸಂದೇಶಗಳನ್ನು ಸ್ಮರಿಸುವ ಕಾರ್ಯ ದೇಶಾದ್ಯಂತ ಮಾಡಲಾಗುತ್ತಿದೆ. ಆಸೆಯೇ ದುಃಖಕ್ಕೆ ಮೂಲ. ಆದ್ದರಿಂದ ಆಸೆಯನ್ನು ತ್ಯಜಿಸಿ ಎಂಬ ಮನುಕುಲಕ್ಕೆ ಸಂದೇಶವನ್ನು ಕೊಟ್ಟಿರುವ ಬುದ್ದನ ಆದರ್ಶಗಳು ಸದಾಕಾಲಕ್ಕೆ ಸಲ್ಲುವಂತಹುದು. ಪ್ರಸ್ತುತ ಪ್ರಪಂಚದಲ್ಲಿ ದ್ವೇಷ, ಅಸೂಯೆ, ಅತಿಯಾಸೆಯನ್ನೆ ಮೈಗೂಡಿಸಿಕೊಂಡಿರುವ ಮನುಷ್ಯ ಬುದ್ದನ ಸಂದೇಶಗಳನ್ನು ನಿತ್ಯ ಓದಿ ಅರಿತುಕೊಂದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಪ್ರತಿ ವರ್ಷ ಬುದ್ದ ಪೌರ್ಣಿಮೆಯನ್ನು ವೈಶಾಖ ಮಾಸದ ಹುಣ್ಣಿಮೆಯಂದು ದೇಶಾದ್ಯಂತ ಆಚರಿಸಲಾಗುತ್ತದೆ. ಜಗಕ್ಕೆಲ್ಲಾ ಅರಿವಿನ ಬೆಳಕನ್ನು ಕೊಟ್ಟ ಗೌತಮ ಬುದ್ಧ ಸರ್ವರಿಗೂ ಸಲ್ಲುವ ಸಂತ ಎಂದರೆ ತಪ್ಪಾಗಲಾರದು. ಅಂತಹ ಮಹಾಸಂತನ ಸ್ಮರಣೆ ನಿತ್ಯ ಮಾಡಬೇಕು ಎಂದರು. ಮುಖಂಡರಾದ ಗುಟ್ಟಹಳ್ಳಿ ನಾಗರಾಜ್, ಶಿವಾನಂದ್ ಸೇರಿದಂತೆ ಹಲವಾರು ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದರು.ಫೋಟೋ: 24 ಹೆಚ್‌ಎಸ್‌ಕೆ 4
ಹೊಸಕೋಟೆ ತಾಲೂಕು ಕಚೇರಿಯಲ್ಲಿ ಬುದ್ದ ಪೌರ್ಣಿಮೆ ಕಾರ್ಯಕ್ರಮದಲ್ಲಿ ಬಿಎಂಆರ್‌ಡಿಎ ಸದಸ್ಯ ಹೆಚ್.ಎಂ.ಸುಬ್ಬರಾಜು ಗೌತಮ ಬುದ್ದನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.