ಸಾರಾಂಶ
ವಿಚಾರ ಕ್ರಾಂತಿ ಮೂಡಿಸಿದ ಸಂತ ಸೇವಾಲಾಲರು ಭಗವಂತನ ಒಲುಮೆ ಹಾಗೂ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಪುರಸ್ಕಾರ ಬೇಕಾಗಿಲ್ಲ. ನಿಕ್ಷಲ್ಮಶವಾದ ಭಕ್ತಿ ಪೂಜೆಯಿಂದ ದೇವರ ಸ್ಮರಣೆ ಮಾಡಿದರೆ ಸಾಕು ಮೋಕ್ಷ ಹೊಂದಬಹುದು ಎಂಬ ಸಂದೇಶ ನೀಡಿದ ಮಹಾ ಪುರುಷರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಾಮಾಜಿಕ ಅಸಮಾನತೆ ಹಾಗೂ ಮೌಢ್ಯಗಳ ವಿರುದ್ಧ ಹೋರಾಟ ನಡೆಸಿ ಸಾಮಾಜಿಕ ಜಾಗೃತಿ ಮೂಡಿಸಿದ ಸಂತ ಸೇವಾಲಾಲ್ ಮಹಾರಾಜರ ಜೀವನದ ಆದರ್ಶ ಪಾಲಿಸುವ ಮೂಲಕ ಯುವ ಜನರು ಬದಲಾವಣೆ ದಿಕ್ಕಿನತ್ತ ಸಾಗಬೇಕು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಕರೆ ನೀಡಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಸಂತ ಸೇವಾಲಾಲರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಜ್ಞಾನದ ಬೆಳಕಿನ ಮೂಲಕ ಸಾಮಾಜಿಕ ಅಸಮಾನತೆ ತೊಲಗಿಸಲು, ಶಿಕ್ಷಣವೇ ಬದುಕಿನ ಬದಲಾವಣೆಗೆ ಇರುವ ಮಹತ್ತರ ಶಕ್ತಿ ಎನ್ನುವುದನ್ನು ಸಂತ ಸೇವಾಲಾಲ ಅರಿತ್ತಿದ್ದರು ಎಂದರು.
ವಿಚಾರ ಕ್ರಾಂತಿ ಮೂಡಿಸಿದ ಸಂತ ಸೇವಾಲಾಲರು ಭಗವಂತನ ಒಲುಮೆ ಹಾಗೂ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಪುರಸ್ಕಾರ ಬೇಕಾಗಿಲ್ಲ. ನಿಕ್ಷಲ್ಮಶವಾದ ಭಕ್ತಿ ಪೂಜೆಯಿಂದ ದೇವರ ಸ್ಮರಣೆ ಮಾಡಿದರೆ ಸಾಕು ಮೋಕ್ಷ ಹೊಂದಬಹುದು ಎಂಬ ಸಂದೇಶ ನೀಡಿದ ಮಹಾ ಪುರುಷರು ಎಂದರು.ಸಮಾಜದ ಮುಖಂಡ ಶಿಕ್ಷಕ ಕೃಷ್ಣಕುಮಾರ್ ಮಾತನಾಡಿ, ವೈಚಾರಿಕ ಕ್ರಾಂತಿ ಮಾಡಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ಸಂತ ಸೇವಾಲಾಲ್ ಮಹಾರಾಜರ ಜೀವನದ ಆದರ್ಶ ಪಾಲಿಸುವ ಮೂಲಕ ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದರು.
ಸಮಾರಂಭದಲ್ಲಿ ಬಿಇಒ ಸೀತಾರಾಮ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಶಿಧರ್, ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ದೇವರಾಜ್, ಶಿಕ್ಷಕ ಯೋಗೇಶ್, ರಾಜಶ್ವ ನಿರೀಕ್ಷಕರಾದ ರಾಜಮೂರ್ತಿ, ಚಂದ್ರಕಲಾ, ನರೇಂದ್ರ, ಶಿರಸ್ತೇದಾರ್ ರವಿ ಹಲವರು ಇದ್ದರು.