ಮಹಾವೀರರ ತತ್ವಾದರ್ಶ ನಿತ್ಯ ಜೀವನದಲ್ಲಿ ಪಾಲಿಸಿ

| Published : Apr 15 2025, 01:02 AM IST

ಸಾರಾಂಶ

ಮಹಾವೀರರ ತತ್ವಗಳಾದ ಅಹಿಂಸೆ, ಅಪರಿಗ್ರಹ, ಸತ್ಯ, ಬ್ರಹ್ಮಚರ್ಯ, ಅಸ್ತೇಯಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಇಡೀ ವಿಶ್ವಕ್ಕೆ ಅಹಿಂಸಾ ಸಂದೇಶ ಸಾರಿದ ಜೈನ ಧರ್ಮ ಮತ್ತು ಅದರ ಆಚರಣೆ ಮುಂದುವರಿಯಲು ಮಹಿಳೆಯರಿಂದ ಮಾತ್ರ ಸಾಧ್ಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ನಿಕಟ ಪೂರ್ವ ಸದಸ್ಯರು ಕೇಂದ್ರ ಸಾಹಿತ್ಯ ಅಕಾಡಮಿ ದೆಹಲಿ ಡಾ.ಬಾಳಾಸಾಹೇಬ ಲೋಕಾಪೂರ ಹೇಳಿದರು.

ತಾಲೂಕಿನ ಆಸಂಗಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ತೇರದಾಳ, ರಬಕವಿ-ಬನಹಟ್ಟಿ ಸಹಯೋಗದಲ್ಲಿ ಆಯೋಜಿಸಿದ ಜೈನ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಯಂದಿರು ಧರ್ಮ ಪಾಲನೆ ಮಾಡಿದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಇಂದಿನ ತಾಂತ್ರಿಕ ಜಗತ್ತಿನಲ್ಲಿ ಧರ್ಮದ ಪಾಲನೆಗೆ ಸಮಯ ಬಹಳಷ್ಟು ಕಡಿಮೆಯಾಗಿರುವುದರಿಂದ ಸಮಾಜದಲ್ಲಿ ಅಸಹಜ ಬದಲಾವಣೆಗಳಾಗುತ್ತಿವೆ. ಅದನ್ನು ಸರಿಪಡಿಸಲು ಮಹಾವೀರರ ತತ್ವಗಳಾದ ಅಹಿಂಸೆ, ಅಪರಿಗ್ರಹ, ಸತ್ಯ, ಬ್ರಹ್ಮಚರ್ಯ, ಅಸ್ತೇಯಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಖ್ಯ ಅಥಿತಿಗಳಾಗಿ ಬೆಳಗಾವಿ ಆಯುಕ್ತ ಭರಮಪ್ಪ ಲೋಕಾಪೂರ ಮಾತನಾಡಿ, ಸಾಧಕರಾಗಲು ಅಂಕಗಳು ಮುಖ್ಯವಲ್ಲ ಬದಲಾಗಿ ಸರ್ವಾಂಗೀಣ ವಿಕಾಸ ಮುಖ್ಯ ಪ್ರತಿಯೊಬ್ಬರು ತಮ್ಮ ಕಾಯಕದಲ್ಲಿ ಶ್ರದ್ಧೆ ಅಳವಡಿಸಿಕೊಂಡು ದುಶ್ಚಟಗಳಿಗೆ ಬಲಿಯಾಗದೆ ಧರ್ಮ ಮಾರ್ಗದಲ್ಲಿ ಸಾಗಿ ತಂದೆ ತಾಯಿಗಳಿಗೆ, ಸಮಾಜಕ್ಕೆ ಆದರ್ಶವಾಗಿ ಎಂದರು.

ಅತಿಥಿಗಳಾಗಿ ಆಗಮಿಸಿದ ಮುಖ್ಯಮಂತ್ರಿ ಪದಕ ಪಡೆದ ಸಿಪಿಐ ಭರತೇಶ ವೆಂಕಟಾಪೂರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಆಶಕ್ತಿ ಕಡಿಮೆಯಾಗುತ್ತಿದ್ದು ಅವರನ್ನು ಪ್ರೇರೆಪಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಒದಗಿಸಿ ಕೊಡುವ ಕೆಲಸವಾಗಬೇಕು. ಅದಕ್ಕೆ ನೌಕರರ ಸಂಘ ಮುಂದಾದಲ್ಲಿ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷರಾದ ಧರೇಪ್ಪ ಕವಟಕೊಪ್ಪ ಸಂಘ ನಡೆದು ಬಂದ ಬಗ್ಗೆ ತಿಳಿಸಿ, ದಾನಿಗಳ ಸಹಾಯದಿಂದ ಇಲ್ಲಿಯವರೆಗೆ ೪ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇವತ್ತಿನ ೫ನೇ ಕಾರ್ಯಕ್ರಮದಲ್ಲಿ ೬೫ ವಿದ್ಯಾರ್ಥಿಗಳು ಮತ್ತು ೧೬ ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಗೌರವಿಸಲಾಗಿದೆಯೆಂದರು.

ವರ್ಧಮಾನ ಕೋರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮಾಜಿ ಜಿಪಂ ಸದಸ್ಯ ದೇವಲ ದೇಸಾಯಿ, ಪ್ರವೀಣ ನಾಡಗೌಡ, ಸುರೇಶ ಅಕ್ಕಿವಾಟ, ಅಜಿತ ಕಾಸಾರ, ಸುನಿಲ ಆಳಗೊಂಡ, ಸಚಿನ ಮುರಗುಂಡಿ, ನಿಲೇಶ ದೇಸಾಯಿ ಪ್ರಭು ಹಾಡಕಾರ, ಅಲ್ಲಪ್ಪ ಸೌದತ್ತಿ, ಆದಿನಾಥ ಸಿದ್ದನ್ನವರ, ಮುತ್ತು ಶಿರಹಟ್ಟಿ ನೌಕರರ ಸಂಘದ ಮಹಾವೀರ ಜಮಖಂಡಿ ಅಭಯ ಶಿರಗಾರ, ಗಂಗಪ್ಪ ಖೇಮನ್ನವರ, ಅಜೀತ ಶಿರಹಟ್ಟಿ, ಲಕ್ಕಪ್ಪ ಸಂಕಾರ, ಅಮಿತ ಯಾಬನ್ನವರ, ಮಹಾವೀರ ಪಾಟೀಲ, ಅನಿಲ ಶಿರಗಾರ ಸೇರಿದಂತೆ ನೂರಾರು ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.

ಸಂಘದ ಪದಾಧಿಕಾರಿ ಎನ್.ಬಿ.ಜಮಖಂಡಿ ಸ್ವಾಗತಿಸಿ ವಂದಿಸಿದರು. ಭರತೇಶ ಲೋಕಾಪುರ ನಿರೂಪಿಸಿದರು. ಶೀತಲ ನಂದೆಪ್ಪನವರ, ಮಹಾವೀರ ಸೌದತ್ತಿ ಸತ್ಕಾರ ನೆರವೇರಿಸಿದರು.