ಮಾಗಡಿ: ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದ ತಿಮ್ಮಕ್ಕ ಅವರು ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದ ಕಾರಣಕ್ಕೆ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಮಕ್ಕಳು ಅಳವಡಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಹೆಜ್ಜೆ ಇಡಬೇಕು ಎಂದು ಸಮಾಜ ಸೇವಕರು ಆದ ಬೆಸ್ಕಾಂ ಮಾಜಿ ನಿರ್ದೇಶಕ ಜಿ.ವಿ.ಜಯರಾಂ ಕಿವಿಮಾತು ಹೇಳಿದರು.
ಮಾಗಡಿ: ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದ ತಿಮ್ಮಕ್ಕ ಅವರು ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದ ಕಾರಣಕ್ಕೆ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಮಕ್ಕಳು ಅಳವಡಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಹೆಜ್ಜೆ ಇಡಬೇಕು ಎಂದು ಸಮಾಜ ಸೇವಕರು ಆದ ಬೆಸ್ಕಾಂ ಮಾಜಿ ನಿರ್ದೇಶಕ ಜಿ.ವಿ.ಜಯರಾಂ ಕಿವಿಮಾತು ಹೇಳಿದರು.
ಪಟ್ಟಣದ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ರೋಟರಿ ಮಾಗಡಿ ಸೆಂಟ್ರಲ್, ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ-2025ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಿಮ್ಮಕ್ಕ ಅವರು ಮಕ್ಕಳು ಇಲ್ಲ ಎಂಬ ಕೊರಗನ್ನು ಗಿಡ ನೆಟ್ಟು ಬೆಳೆಸಿ ಮರೆತರು. ಸುಮಾರು 9 ಕಿ.ಮೀ ವರೆಗೆ ಗಿಡಗಳನ್ನು ನೆಟ್ಟು, ಅದಕ್ಕೆ ನೀರು ಹಾಕಿ ಮಕ್ಕಳಂತೆ ಸಾಕಿದರು. ಬಾನೆತ್ತರಕ್ಕೆ ಬೆಳೆದಿರುವ ಆ ಮರಗಳು ಸಹಸ್ರಾರು ಪಶು ಪಕ್ಷಿಗಳಿಗೆ ಆಸರೆಯಾಗಿ ನಿಂತಿವೆ ಎಂದರು.ಸಾಲುಮರದ ತಿಮ್ಮಕ್ಕನವರ ಪರಿಸರ ಪ್ರೇಮಿ ಕಾರ್ಯಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಗೌರವ ಸಮ್ಮಾನಗಳು ಸಂದಿವೆ. ಅವರಂತೆ ನಿಮ್ಮ ಹೆಸರೂ ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಮನೆ ಮತ್ತು ರಸ್ತೆ ಪಕ್ಕ ಗಿಡಗಳನ್ನು ನೆಡುವ ಜೊತೆಗೆ ಅವುಗಳನ್ನು ಪೋಷಿಸಬೇಕು. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಉತ್ತಮ ಕಾರ್ಯ ಮಾಡಿದೆ. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ವೇದಿಕೆ ಕಲ್ಪಿಸಿದೆ. ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂದು ಜಯರಾಂ ಹೇಳಿದರು.
ರೈತಸಂಘ ತಾಲೂಕು ಅಧ್ಯಕ್ಷ ಲೋಕೇಶ್ ಮಾತನಾಡಿ, ಪರಿಸರಕ್ಕೆ ಅನನ್ಯ ಕೊಡುಗೆ ನೀಡಿದ ಸಾಲುಮರದ ತಿಮ್ಮಕ್ಕ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿಸಲು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಸಂತಸದ ವಿಷಯ. ಇದು ಬೇರೆ ಮಾಧ್ಯಮಗಳಿಗೂ ಮಾದರಿ ಕಾರ್ಯ ಎಂದು ಶ್ಲಾಘಿಸಿದರು.ಪ್ರತಿಯೊಬ್ಬ ವಿದ್ಯಾರ್ಥಿ ಮನೆ ಬಳಿ ಎರಡು ಗಿಡ ನೆಟ್ಟು ತಿಮ್ಮಕ್ಕ ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ ಪರಿಸರ ಉಳಿಸಿದಂತಾಗುತ್ತದೆ. ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಮನುಷ್ಯರು ಅರಣ್ಯ ಪ್ರದೇಶ ನಾಶ ಮಾಡುತ್ತಿರುವುದರಿಂದ ವನ್ಯಜೀವಿಗಳು ನಾಡಿನತ್ತ ಲಗ್ಗೆ ಇಡುತ್ತಿವೆ. ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ತಗ್ಗೀಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷೆ ತೇಜಸ್ವಿನಿ ರಮೇಶ್‌ಗೌಡ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಸುಪ್ತ ಪ್ರತಿಭೆ ಇದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅರಳಿ ವಿಕಸಿಸಲು ಅಗತ್ಯ ವೇದಿಕೆ ಅಗತ್ಯ. ಮಕ್ಕಳು ತಮ್ಮೊಳಗಿನ ಕೀಳರಿಮೆ ತೊಡೆದು ಹಾಕಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪಠ್ಯ ಕಲಿಕೆಗೆ ನೀಡುವಷ್ಟೇ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು ಎಂದರು.ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಡಾ.ಮಂಜುನಾಥ್ ಬೆಟಗೇರಿ, ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ನಿರ್ದೇಶಕರಾದ ಜಿ.ಸುದರ್ಶನ್ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಚಂದ್ರಮ್ಮ ನಂಜಯ್ಯ, ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ವಿ.ಶೀತಲ್ , ರೋಟರಿ ಮಾಗಡಿ ಸೆಂಟ್ರಲ್ ಎಚ್.ವಿನೋದ್ , ಕನ್ನಡಪ್ರಭ ಹಿರಿಯ ವರದಿಗಾರ ಎಂ.ಅಫ್ರೋಜ್ ಖಾನ್, ತಾಲೂಕು ವರದಿಗಾರ ಎಚ್.ಆರ್.ಮಾದೇಶ್ , ಕುದೂರು ವರದಿಗಾರ ಗಂ.ದಯಾನಂದ್ ಉಪಸ್ಥಿತರಿದ್ದರು.
(ಈ ಕೋಟ್ ಪ್ಯಾನಲ್ನಲ್ಲಿ ಬಳಸಿ)ಕೋಟ್...........
ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರತಿ ವರ್ಷ ಓರ್ವ ಪರಿಸರ ಪ್ರೇಮಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ರಾಜ್ಯ ಸರ್ಕಾರದಿಂದಲೇ ವಿತರಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಕೂಡ ಸರ್ಕಾರದೊಂದಿಗೆ ಚರ್ಚೆ ನಡೆಸಿದ್ದಾರೆ.-ಜಿ.ವಿ.ಜಯರಾಂ, ಮಾಜಿ ನಿರ್ದೇಶಕರು, ಬೆಸ್ಕಾಂ
ಬಾಕ್ಸ್.................ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳ ಕಲರವ
ಕನ್ನಡಪ್ರಭ ವಾರ್ತೆ ಮಾಗಡಿರೋಟರಿ ಮಾಗಡಿ ಸೆಂಟ್ರಲ್, ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಹಯೋಗದೊಂದಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ -2025ರಲ್ಲಿ ಪ್ರೌಢಶಾಲಾ ಮಕ್ಕಳು ಪಾಲ್ಗೊಂಡು ಚಿತ್ರಕಲೆಯನ್ನು ಅಭಿವ್ಯಕ್ತಿಗೊಳಿಸಿದರು.
ಸಾಲುಮರದ ತಿಮ್ಮಕ್ಕ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ವಿಷಯದ ಮೇಲೆ ವಿದ್ಯಾರ್ಥಿಗಳು ತಮ್ಮದೇ ಆದ ಕಲ್ಪನೆಯ ಮೇಲೆ ಭಿನ್ನವಾದ ಚಿತ್ರಗಳನ್ನು ಬಿಡಿಸಿ, ಅದಕ್ಕೆ ಬಣ್ಣದ ಮೆರುಗು ನೀಡಿ ಗಮನ ಸೆಳೆದರು.ಪಟ್ಟಣದ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಒಳಾಂಗಣ ಕ್ರೀಡಾಂಗಣಕ್ಕೆ ಆಗಮಿಸಿದ ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ತಮ್ಮ ಮನದಲ್ಲಿ ಮೂಡಿದ ರೇಖಾಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮೊಳಗಿನ ಪ್ರತಿಭೆ ಅನಾವರಣಗೊಳಿಸಿದರು.
ಬಾಕ್ಸ್...........ಮಕ್ಕಳ ಕೈಯಲ್ಲಿ ಅರಳಿದ ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕ ಮೂಲತಃ ಮಾಗಡಿ ತಾಲೂಕು ಹುಲಿಕಲ್ ಗ್ರಾಮದವರು. ತಿಮ್ಮಕ್ಕರವರ ಪರಿಸರ ಪ್ರೇಮ, ಕಾಳಜಿ ಬಿಂಬಿಸುವಂತೆ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವನ್ನು ಪರಿಸರದೊಂದಿಗೆ ಜೋಡಿಸಿ ಬರೆದ ಚಿತ್ರಗಳು ಗಮನ ಸೆಳೆದವು. ಚಿತ್ರಕಲಾ ಸ್ಪರ್ಧೆಯಲ್ಲಿ 8,9,10ನೇ ತರಗತಿಯಲ್ಲಿ ಅತ್ಯುತ್ತಮ ಚಿತ್ರಗಳನ್ನು ಬರೆದ ವಿದ್ಯಾರ್ಥಿಗಳಿಗೆ ವಿಭಾಗವಾರು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಗಣ್ಯರು ವಿತರಿಸಿದರು. ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಚಿತ್ರಕಲಾ ಶಿಕ್ಷಕರಾದ ಚಂದ್ರಶೇಖರ್, ಶೀತಲ್ ಹಾಗೂ ಶೋಭಾ ಪಾಲ್ಗೊಂಡಿದ್ದರು.ಬಹುಮಾನ ವಿಜೇತರು:
8ನೇ ತರಗತಿ ವಿಭಾಗದಲ್ಲಿ ವಾಸವಿ ಶಾಲೆಯ ಮದೀಹಾ ಸದಾಫ್(ಪ್ರಥಮ), ಬಾಣವಾಡಿ ಗ್ರಾಮದ ಕೆಆರ್‌ಸಿಆರ್‌ಎಸ್ ಶಾಲೆಯ ಭಾವನ (ದ್ವಿತೀಯ), ಎಂಎಎಂಎಸ್ ಶಾಲೆಯ ಸುಮಂತ್ (ತೃತೀಯ) ಬಹುಮಾನ ಪಡೆದುಕೊಂಡರು.9ನೇ ತರಗತಿ ವಿಭಾಗದಲ್ಲಿ ಹುಲಿಕಟ್ಟೆ ಎಂಡಿಆರ್‌ಎಸ್ ಶಾಲೆಯ ಹನುಮೇಶ್(ಪ್ರಥಮ), ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಲಕ್ಷ್ಮಿ(ದ್ವಿತೀಯ), ಬಾಣವಾಡಿ ಕೆಆರ್‌ಸಿಆರ್‌ಎಸ್ ಶಾಲೆಯ ಕೀರ್ತಿಶ್ರೀ (ತೃತೀಯ) ಬಹುಮಾನ ಗಳಿಸಿದರು.
10ನೇ ತರಗತಿ ವಿಭಾಗದಲ್ಲಿ ಮಾಗಡಿ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ತೇಜಲ್(ಪ್ರಥಮ), ಬಾಣವಾಡಿ ಕೆಆರ್‌ಸಿಆರ್‌ಎಸ್ ಶಾಲೆಯ ಧನಲಕ್ಷ್ಮಿ(ದ್ವಿತೀಯ), ಹುಲಿಕಟ್ಟೆ ಎಂಡಿಆರ್‌ಎಸ್ ಶಾಲೆಯ ರೇಖಾ(ತೃತೀಯ) ಬಹುಮಾನ ಪಡೆದರು.3ಕೆಆರ್ ಎಂಎನ್ .ಜೆಪಿಜಿ
ಮಾಗಡಿ ಪಟ್ಟಣದ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ರೋಟರಿ ಮಾಗಡಿ ಸೆಂಟ್ರಲ್ ಸ್ಕೂಲ್ ಸಹಯೋಗದೊಂದಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ -2025ಕ್ಕೆ ಗಣ್ಯರು ದೀಪ ಬೆಳಗಿ ಚಾಲನೆ ನೀಡಿದರು.4.
ಮಾಗಡಿ ಪಟ್ಟಣದ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಾವು ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಿದರು.5.ಮಾಗಡಿ ಪಟ್ಟಣದ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು ಗಣ್ಯರೊಂದಿಗೆ ಇರುವುದು.
6.ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳು.