ಸಂಚಾರಿ ನಿಯಮಗಳನ್ನು ಪಾಲಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಿ: ಬಿ.ಮಹೇಂದ್ರ

| Published : Nov 07 2024, 11:46 PM IST

ಸಂಚಾರಿ ನಿಯಮಗಳನ್ನು ಪಾಲಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಿ: ಬಿ.ಮಹೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಾಹನ ಸವಾರರು ಸಂಚಾರ ನಿಯಮ ಪಾಲಿಸದೆ ಅತಿ ವೇಗದಿಂದ ವಾಹನ ಚಲಾಯಿಸಿ ತಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳುವ ಜೊತೆಗೆ ತಮ್ಮ ಕುಟುಂಬವನ್ನು ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದಾರೆ. ಸವಾರರು ಕಟ್ಟುನಿಟ್ಟಾಗಿ ನಮ್ಮ ಸಂಚಾರಿ ನಿಯಮ ಪಾಲಿಸಿ ಅಮೂಲ್ಯ ಪ್ರಾಣ ಉಳಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಹಲಗೂರು

ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತ ಪ್ರಕರಣಗಳು ಹೆಚ್ಚಳವಾಗಿ ಸಾವು, ನೋವು ಸಂಭವಿಸುತ್ತಿವೆ ಎಂದು ಸಬ್‌ಇನ್ಸ್ ಪೆಕ್ಟರ್ ಬಿ.ಮಹೇಂದ್ರ ತಿಳಿಸಿದರು.

ನೂತನ ಬೈಪಾಸ್ ಆಗಿರುವ ಚಿಲ್ಲಾಪುರ ಬಳಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಹಲಗೂರು ಕಡೆಯಿಂದ ಮಳವಳ್ಳಿಗೆ ಹೋಗುವ ರಸ್ತೆಗೆ ನಾಲ್ಕು ಬ್ಯಾರಿಕೇಟ್ ಅಳವಡಿಸಿರುವ ಬಗ್ಗೆ ಮಾಹಿತಿ ನೀಡಿದರು.

ವಾಹನ ಸವಾರರು ಸಂಚಾರ ನಿಯಮ ಪಾಲಿಸದೆ ಅತಿ ವೇಗದಿಂದ ವಾಹನ ಚಲಾಯಿಸಿ ತಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳುವ ಜೊತೆಗೆ ತಮ್ಮ ಕುಟುಂಬವನ್ನು ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದಾರೆ. ಸವಾರರು ಕಟ್ಟುನಿಟ್ಟಾಗಿ ನಮ್ಮ ಸಂಚಾರಿ ನಿಯಮ ಪಾಲಿಸಿ ಅಮೂಲ್ಯ ಪ್ರಾಣ ಉಳಿಸಿಕೊಳ್ಳಿ ಎಂದರು.

ಕೆಲವು ದಿನಗಳ ಹಿಂದೆ ದ್ವಿಚಕ್ರ ವಾಹನ ಅಪಘಾತಕ್ಕಾಡಾಗಿ ಹೆಲ್ಮೆಟ್ ಧರಿಸಿದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವ ವೇಳೆ ಮೊಬೈಲ್ ಫೋನ್ ಬಳಸಬಾರದು. ಮಿತಿ ವೇಗದಿಂದ ವಾಹನ ಚಲಾಯಿಸಬೇಕು ಎಂದರು.

ನೂತನವಾಗಿ ರಾಷ್ಟ್ರೀಯ ಹೆದ್ದಾರಿ 209ರ ಬೈಪಾಸ್ ರಸ್ತೆ ಮಾಡಿರುವುದು ಸರಿಯಷ್ಟೇ ಮಳವಳ್ಳಿ ಕಡೆಯಿಂದ ಮತ್ತು ಬೆಂಗಳೂರು ಕಡೆಯಿಂದ ಬರುವ ವಾಹನ ಸವಾರರಿಗೆ ಹಲಗೂರು ಪಟ್ಟಣಕ್ಕೆ ಹೋಗುವ ದಾರಿ ಎಂಬ ಸೂಚನಾ ಫಲಕಗಳು ಇಲ್ಲ ಎಂದು ಸಾರ್ವಜನಿಕರು ಇದೇ ವೇಳೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಮೇಲೆ ನೂರಾರು ವಾಹನಗಳು ಸಂಚರಿಸುತ್ತವೆ. ಹೊಸದಾಗಿ ಬರುವ ವಾಹನ ಸವಾರರಿಗೆ ಯಾವ ಕಡೆ ಹೋಗಬೇಕು ಎಂಬುದು ಅರಿಯದೆ ನಿಂತು ಬೇರೆಯವರನ್ನು ಕೇಳಿಕೊಂಡು ಹೋಗುವ ಪರಿಸ್ಥಿತಿ ಇದೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಲಗೂರು ಪಟ್ಟಣಕ್ಕೆ ಹೋಗುವ ದಾರಿ ಎಂಬ ಸೂಚನೆ ಫಲಕವನ್ನು ಬೆಂಗಳೂರು ಕಡೆಯಿಂದ ಮತ್ತು ಮಳವಳ್ಳಿ ಕಡೆಯಿಂದ ಬರುವ ವಾಹನಗಳಿಗೆ ಸೂಚನಾ ಫಲಕಗಳನ್ನು ಹಾಕಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಪೊಲೀಸರಲ್ಲಿ ಮನವಿ ಮಾಡಿದರು.