ಸಾರಾಂಶ
ಮೈಸೂರಿನಲ್ಲಿ ಕಳೆದ ವರ್ಷ 161 ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಾಳುಗಳಾಗಿ ಅವರ ಕುಟುಂಬ ಅತಂತ್ರವಾಗಿವೆ. ಸಂಚಾರಿ ನಿಯಮ ಪಾಲಿಸಿದ್ದರೆ ಆ ಜೀವಗಳು ಬದುಕುಳಿಯುತ್ತಿದ್ದವು, ಹೀಗಾಗಿ ನಿಮ್ಮ ಜೀವ ಉಳಿವಿಗೆ ಸಂಚಾರ ನಿಯಮ ಪಾಲಿಸಿ. ನಿಮ್ಮ ಒಬ್ಬರ ಮರಣ ನಿಮ್ಮ ಕುಟುಂಬಕ್ಕೆ ದೊಡ್ಡ ಅಘಾತವಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಿಮ್ಮ ಜೀವ ಉಳಿವಿಗೆ ಸಂಚಾರ ನಿಯಮ ಪಾಲಿಸಿ ಎಂದು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಚ್. ಪರಶುರಾಮಪ್ಪ ಹೇಳಿದರು.ನೆಹರು ಯುವಕೇಂದ್ರ, ನಗರ ಸಂಚಾರ ಪೊಲೀಸ್ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್, ಎನ್.ಎಸ್.ಎಸ್ ಹಾಗೂ ಎನ್.ಸಿಸಿ ಘಟಕದ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ 2024ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ವರ್ಷ 161 ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಾಳುಗಳಾಗಿ ಅವರ ಕುಟುಂಬ ಅತಂತ್ರವಾಗಿವೆ. ಸಂಚಾರಿ ನಿಯಮ ಪಾಲಿಸಿದ್ದರೆ ಆ ಜೀವಗಳು ಬದುಕುಳಿಯುತ್ತಿದ್ದವು, ಹೀಗಾಗಿ ನಿಮ್ಮ ಜೀವ ಉಳಿವಿಗೆ ಸಂಚಾರ ನಿಯಮ ಪಾಲಿಸಿ ಎಂದು ಅವರು ತಿಳಿಸಿದರು.17 ಕೋಟಿ ರು. ದಂಡ ಸಂಗ್ರಹ ಮಾಡಲಾಗಿದೆ. ನಿಮ್ಮ ಒಬ್ಬರ ಮರಣ ನಿಮ್ಮ ಕುಟುಂಬಕ್ಕೆ ದೊಡ್ಡ ಅಘಾತವಾಗಿದೆ. ಹಾಗಾಗಿ ಪೊಲೀಸರ ಭಯದಿಂದ ಹೆಲ್ಮೆಟ್ಧರಿಸದೇ ನಿಮ್ಮ ಕುಟುಂಬಕ್ಕಾಗಿ ಹೆಲ್ಮೆಟ್ಧರಿಸಿ ಸಂಚಾರ ನಿಯಮ ಪಾಲಿಸಿ ಎಂದು ಸಲಹೆ ನೀಡಿದರು.
ಸಂಚಾರಿ ಕಾನೂನುಗಳು ಇರುವುದು ಜನ ರಕ್ಷಣೆಗೆ ಹೊರತು ಜನರಿಗೆ ತೊಂದರೆ ಕೊಡುವುದಕ್ಕಲ್ಲ ನೀವೂ ಇದನ್ನು ಅರಿತು ನಿಮ್ಮ ಕುಟುಂಬದವರಿಗೂ ಸಂಚಾರಿ ಅರಿವು ಮೂಡಿಸಿ ಎಂದರು.ಪಿಸಿ ಪಾಲಿಟೆಕ್ನಿಕ್ಕಾಲೇಜಿನಿಂದ ಫೈಲೆಟ್ಸರ್ಕಲ್ಮುಖಾಂತರ ಅಂಬೇಡ್ಕರ್ ವೃತ್ತ, ಸರ್ಕಾರಿ ಅತಿಥಿಗೃಹದ ಮೂಲಕ ಗ್ರಾಮಾಂತರ ಬಸ್ನಿಲ್ದಾಣದ ಮೂಲಕ ಸಿಪಿಸಿ ಪಾಲಿಟೆಕ್ನಿಕ್ಕಾಲೇಜಿಗೆ ಸಂಚಾರಿ ಅರಿವು ಜಾಥಾ ಕಾರ್ಯಕ್ರಮ ಗಮನ ಸೆಳೆಯಿತು. ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಿದರು.
ಕಾಲೇಜಿನ ಪ್ರಾಂಶುಪಾಲ ಎಂ. ಪ್ರಕಾಶ್, ಲಷ್ಕರ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಕೆ.ಆರ್. ಪ್ರಸಾದ್, ಪೊಲೀಸ್ನಿರೀಕ್ಷೆಯ ರೇಖಾಬಾಯಿ, ಎಸ್ಐ ಅನಿಲ್ ಕುಮಾರ್, ಎಎಸ್ ಐ ದೊಡ್ಡಯ್ಯ, ಕಾಲೇಜಿನ ಮೆಕ್ಯಾನಿಕಲ್ಎಂಜಿನಿಯರಿಂಗ್ವಿಭಾಗದ ಮುಖ್ಯಸ್ಥ ಪಿ. ಮಾಲೆಮಾದಪ್ಪ, ಸಿಪಿ ವಿಭಾಗದ ಮುಖ್ಯಸ್ಥ ಅರಸುಕುಮಾರ್, ಎನ್ಸಿಸಿ ವಿಭಾಗದ ಲೆಫ್ಟಿನೆಂಟ್ಟಿ.ಕೆ. ಮಹೇಂದ್ರ, ಎನ್.ಎಸ್.ಎಸ್. ಅಧಿಕಾರಿ ಕೆ. ಶ್ರೀನಿವಾಸ್, ಎಚ್.ಎಂ. ಮಧುಸೂದನ್, ನೆಹರು ಯುವಕೇಂದ್ರದ ಜಿಲ್ಲಾ ಯುವ ಅಧಿಕಾರಿ ಅಭಿಷೇಕ ಚವರೆ ಇದ್ದರು.