ಬುದ್ಧನ ಅಷ್ಟಾಂಗ ಮಾರ್ಗವನ್ನು ಅನುಸರಿಸಿ

| Published : May 13 2025, 01:24 AM IST

ಸಾರಾಂಶ

ಅಧಿಕಾರ, ಆಸ್ತಿಗಾಗಿ ಇಂದು ಎಲ್ಲೆಡೆ ಘರ್ಷಣೆಗಳು ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ತನಗಿದ್ದ ರಾಜ್ಯಾಧಿಕಾರ, ಹೆಂಡತಿ, ಮಕ್ಕಳನ್ನು ತೊರೆದು, ಮೋಕ್ಷ ಹುಡುಕುತ್ತಾ ಹೊರಟ ಬುದ್ಧ, ಜನರ ನಮ್ಮೆದಿ, ಶಾಂತಿ ಜೀವನಕ್ಕಾಗಿ ಕಂಡುಕೊಂಡಿದ್ದು ಅಷ್ಠಾಂಗ ಮಾರ್ಗ, ಅದನ್ನು ಜನರು ಅನುಸರಿಸಿದರೆ ಜಗತ್ತಿನಲ್ಲಿ, ನೆಮ್ಮದಿ, ಶಾಂತಿ ನೆಲೆಸಲಿದೆ ಎಂದು ತಹಸೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಅಧಿಕಾರ, ಆಸ್ತಿಗಾಗಿ ಇಂದು ಎಲ್ಲೆಡೆ ಘರ್ಷಣೆಗಳು ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ತನಗಿದ್ದ ರಾಜ್ಯಾಧಿಕಾರ, ಹೆಂಡತಿ, ಮಕ್ಕಳನ್ನು ತೊರೆದು, ಮೋಕ್ಷ ಹುಡುಕುತ್ತಾ ಹೊರಟ ಬುದ್ಧ, ಜನರ ನಮ್ಮೆದಿ, ಶಾಂತಿ ಜೀವನಕ್ಕಾಗಿ ಕಂಡುಕೊಂಡಿದ್ದು ಅಷ್ಠಾಂಗ ಮಾರ್ಗ, ಅದನ್ನು ಜನರು ಅನುಸರಿಸಿದರೆ ಜಗತ್ತಿನಲ್ಲಿ, ನೆಮ್ಮದಿ, ಶಾಂತಿ ನೆಲೆಸಲಿದೆ ಎಂದು ತಹಸೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕಸಾಪ, ಬುದ್ಧದಮ್ಮ ಪ್ರತಿಷ್ಠಾನ ತುಮಕೂರು ಹಾಗೂ ಧಮ್ಮ ಲೋಕ ಬುದ್ಧ ವಿಹಾರ ತುಮಕೂರು ಆಯೋಜಿಸಿದ್ದ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತಿಹಾಸ ನಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ಪ್ರತಿಯೊಬ್ಬರು ಯೋಚಿಸಬೇಕಾಗಿದೆ. ನಮ್ಮ ದೇಶದಲ್ಲಿಯೇ ಹುಟ್ಟಿದ ಭೌದ್ಧಧರ್ಮವನ್ನು ಇಂದು ನಾವು ಬೇರೆಯವರಿಂದ ಕಲಿಯಬೇಕಾಗಿದೆ. ಬುದ್ಧನ ಆಷ್ಠಾಂಗ ಮಾರ್ಗಗಳಾದ ಒಳ್ಳೆಯ ನಡೆ, ನುಡಿ, ಯೋಜನೆ, ಪ್ರಯತ್ನ ಇವೆಲ್ಲವೂ ಮನುಷ್ಯನನ್ನು ಮುಕ್ತಿಯ ಕಡೆಗೆ ತೆಗೆದುಕೊಂಡು ಹೋಗುತ್ತವೆ. ಈಶಾನ್ಯ ದೇಶಗಳಾದ ಜಪಾನ್ ಮತ್ತಿತರರ ರಾಷ್ಟ್ರಗಳೂ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರೆದಿದ್ದರೆ ಅದಕ್ಕೆ ಬುದ್ಧಧಮ್ಮದ ಪರಿಪಾಲನೆಯೇ ಕಾರಣ ಎಂದರು.ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಬುದ್ಧ ಅರಿವಿನ ಸಂಕೇತ, ಬುದ್ಧನಿದ್ದಡೆ ಯುದ್ದಕ್ಕೆ ಅವಕಾಶವಿಲ್ಲ ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ ಅವರೆಲ್ಲರೂ ರಾಜಾಶ್ರಯವನ್ನು ತೊರೆದು ಜನರೆಡೆಗೆ ಬಂದ ಪರಿಣಾಮವಾಗಿ ಲೋಕವಿಖ್ಯಾತರಾಗಲು ಕಾರಣ ಎಂದರು.ಭಗವಾನ್ ಬುದ್ಧರ ಕುರಿತು ವಿಶೇಷ ಉಪನ್ಯಾಸ ನೀಡಿದ ವಿಶ್ರಾಂತ ನ್ಯಾಯಾಧೀಶರು ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕಾನೂನು ಸಲಹೆಗಾರ ಡಾ.ಬಾಬಾ ಸಾಹೇಬ್ ಜಿನರಾಳ್ಕರ್, ಬುದ್ಧ ಈ ಜಗತ್ತು ಕಂಡ ಮಹಾಬೆಳಕು. ಆತ ಶೋಧಿಸಿದ ಬುದ್ಧಧರ್ಮ ವೈಚಾರಿಕ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ ಎಂದರು.ಬುದ್ಧಧಮ್ಮದಲ್ಲಿ ಮೂಲಭೂತ ವಾದವಿಲ್ಲ. ಪ್ರಶ್ನಿಸುವ ಹಕ್ಕು ಇದೆ. ಬುದ್ಧ ಎಂದೂ ಆತ್ಮ, ಪರಮಾತ್ಮ,ಸ್ವರ್ಗ ನರಕಗಳ ಬಗ್ಗೆ ಮಾತನಾಡಲಿಲ್ಲ. ನಮ್ಮ ಕಣ್ಮುಂದೆ ಕಾಣುವ ಸತ್ಯಗಳನ್ನೇ ಪ್ರಶ್ನಿಸಿದ,. ಅವುಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ, ತಾನು ಕಂಡುಕೊಂಡು ಸತ್ಯವನ್ನು ಜನರಿಗೆ ತಿಳಿಸುತ್ತಾ, ಅದನ್ನು ಪರೀಕ್ಷಿಸಿ, ಅನುಸರಿಸುವಂತೆ ಸಲಹೆ ನೀಡಿದ, ಒತ್ತಡ ಹೇರಲಿಲ್ಲ. ಬುದ್ಧನಿದ್ದಡೆ ಯುದ್ದವಿಲ್ಲ. ಬುದ್ಧ ನಿದ್ದರೆ ಶಾಂತಿ, ನೆಮ್ಮದಿ, ಪ್ರೀತಿ, ಯುದ್ದದಿಂದ ಸಾವು, ನೋವು, ನಷ್ಟ. ನಮಗೆ ಯಾವುದು ಬೇಕು ಎಂಬುದನ್ನುಜನತೆ ಆರಿಸಿಕೊಳ್ಳಬೇಕಿದೆ ಎಂದರು.ಮಹಾಭೋದಿ ಸಂಸ್ಥೆಯ ನ್ಯಾನನಂದ ಬಂತೇಜಿ ವಿಶೇಷ ಉಪನ್ಯಾಸ ನೀಡಿ, ಬುದ್ಧನೆಂದರೆ ಶಾಂತಿ, ಬುದ್ಧನೆಂದರೆ ಪ್ರಜ್ಞೆ. ಧರ್ಮದಲ್ಲಿನ ಅಂಧಕಾರ, ಮೌಡ್ಯದಿಂದ ತತ್ತರಿಸಿ ಹೋಗಿದ್ದ ಜನತೆಗೆ ತಮ್ಮ ಪಂಚಶೀಲ ತತ್ವಗಳು ಮತ್ತು ಆಷ್ಠಾಂಗ ಮಾರ್ಗಗಳ ಮೂಲಕ ಮೋಕ್ಷದೆಡೆಗೆ ದಾರಿ ತೋರಿದ ಬುದ್ಧ,ಭಾತೃತ್ವ, ಪ್ರೀತಿ, ಕರುಣೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಕಲ ಪ್ರಾಣಿಗಳಿಗೆ ಲೇಸು ಬಯಸುವಂತೆ ಕರೆ ನೀಡಿದರು ಎಂದರು.ವೇದಿಕೆಯಲ್ಲಿ ಬುದ್ಧಧಮ್ಮ ಪ್ರತಿಷ್ಠಾನದ ಉಪಾಧ್ಯಕ್ಷ ಬಿಕ್ಕ ಪನ್ಯಾಚಿತ್ತೋ ಬಂತೇಜಿ ಬುದ್ಧ ಪರಿತ್ತ ಪಠಣ ನಡೆಸಿಕೊಟ್ಟರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸುರೇಶಕುಮಾರ್, ಬೌದ್ದಉಪಾಸಕರಾದ ಹನುಮಂತರಾಯಪ್ಪ, ಎಂ.ವಾಸುದೇವ್, ಕಲಾಶ್ರೀ ಡಾ.ಲಕ್ಷ್ಮಣದಾಸ್,ಡಾ.ಪಿ.ಚಂದ್ರಪ್ಪ,ಅಪ್ಪಾಜಯ್ಯ, ಧಮ್ಮಉಪಾಸಕರಾದಸಿ.ಭಾನುಪ್ರಕಾಶ್,ಸೌಭಾಗ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.