ಮಡಿಕೇರಿಯ 3 ಆಶ್ರಮಗಳಲ್ಲಿ ಆಶಾಕಿರಣ ಗೆಳೆಯರ ಬಳಗದಿಂದ ಅನ್ನದಾನ

| Published : Aug 28 2024, 12:52 AM IST

ಮಡಿಕೇರಿಯ 3 ಆಶ್ರಮಗಳಲ್ಲಿ ಆಶಾಕಿರಣ ಗೆಳೆಯರ ಬಳಗದಿಂದ ಅನ್ನದಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯ ತನಲ್‌, ವಿಕಾಸ್‌ ಮತ್ತು ಶಿವದೂತ ಆಶ್ರಮದಲ್ಲಿ ಬಳಗದ ಪ್ರಮುಖರು ಅನ್ನದಾನ ಮಾಡಿದರು. ಬಳಗದ ಕಾರ್ಯದರ್ಶಿ ಎಂ.ಎ. ಅಬ್ದುಲ್‌ ರಜಾಕ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತರರಿಗೆ ಮಾದರಿಯಾಗಿರುವ ‘ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗ’ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಶ್ರಮದಲ್ಲಿರುವ ನೊಂದ ಹಿರಿಯರಿಗೆ ಅನ್ನದಾನ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.

ಈ ಬಾರಿ ಮಡಿಕೇರಿಯ ತನಲ್, ವಿಕಾಸ್ ಮತ್ತು ಶಿವದೂತ ಆಶ್ರಮದಲ್ಲಿ ಬಳಗದ ಪ್ರಮುಖರು ಅನ್ನದಾನ ಮಾಡಿದರು.

ಬಳಗದ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ಅವರು ಮಾತನಾಡಿ ಸದಸ್ಯ ನಾಬಿನ್ ಕೆವಿನ್ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆ ರಸಮಂಜರಿ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ ಎಂದರು.

ಪ್ರತಿ ತಿಂಗಳ ಕೊನೆಯ ಭಾನುವಾರ ನೊಂದವರೊಂದಿಗೆ ಬೆರೆತು ಮನಸ್ಸಿಗೆ ಕೊಂಚ ನೆಮ್ಮದಿ ನೀಡುವ ಅಳಿಲು ಸೇವೆಯಲ್ಲಿ ಬಳಗ ತೊಡಗಿಸಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಬಳಗದ ಅಧ್ಯಕ್ಷ ಮಹಮ್ಮದ್ ಆಲಿ, ಉಪಾಧ್ಯಕ್ಷ ಸುಲೈಮಾನ್, ಖಜಾಂಚಿ ಶಿವಣ್ಣ, ಸದಸ್ಯ ಗಿಲ್ಬರ್ಟ್ ಮತ್ತಿತರರು ಉಪಸ್ಥಿತರಿದ್ದರು. ನಾಬಿನ್ ಕೆವಿನ್ ಅವರ ನಿಧನಕ್ಕೆ ಬಳಗದ ಪ್ರಮುಖರು ಹಾಗೂ ಆಶ್ರಮವಾಸಿಗಳು ಇದೇ ಸಂದರ್ಭ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿದರು.