ಸಾರಾಂಶ
ಮಾರುಕಟ್ಟೆಯಲ್ಲಿ ಬರಿ ಅಂಗಡಿ ಇಟ್ಟರೆ ಸಾಲದು, ಗ್ರಾಹಕರನ್ನು ಹೇಗೆ ಆಕರ್ಷಣೆ ಮಾಡಬೇಕು. ಯಾವ ವಸ್ತುಗಳು ಯಾವ ಪ್ರದೇಶದಲ್ಲಿ ಮಾರಾಟ ಮಾಡಬಹುದು, ಅಂಗಡಿಗೆ ಆಗಮಿಸುವ ಪ್ರತಿ ಗ್ರಾಹಕರೊಂದಿಗೆ ಮಾಲೀಕರು ಹೇಗೆ ವರ್ತಿಸಬೇಕು
ಗದಗ: ವಿದ್ಯಾರ್ಥಿ ದಿಸೆಯಲ್ಲಿಯೇ ಆಹಾರ ಮೇಳಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಅವರ ಬದುಕಿಗೆ ದಾರಿದೀಪವಾಗಲಿದೆ ಎಂದು ಹಿರಿಯ ವೈದ್ಯಾಧಿಕಾರಿ ಡಾ. ಸಿ.ಬಿ.ಹಿರೇಗೌಡರ ಹೇಳಿದರು.
ಅವರು ಬೆಟಗೇರಿಯ ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್.ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐಕ್ಯೂಎಸಿ ಅಡಿಯಲ್ಲಿ ವಾಣಿಜ್ಯ ವಿಭಾಗದಿಂದ ಪ್ರತ್ಯಾಗ್ರ-2024 ವಾಣಿಜ್ಯ ಆಹಾರ ಮೇಳ ಹಬ್ಬ ಉದ್ಘಾಟಿಸಿ ಮಾತನಾಡಿದರು.ಮೇಳಗಳು ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆಗಳ ಮಹತ್ವ ತಿಳಿಸುತ್ತದೆ. ಮಾರುಕಟ್ಟೆಯಲ್ಲಿ ಬರಿ ಅಂಗಡಿ ಇಟ್ಟರೆ ಸಾಲದು, ಗ್ರಾಹಕರನ್ನು ಹೇಗೆ ಆಕರ್ಷಣೆ ಮಾಡಬೇಕು. ಯಾವ ವಸ್ತುಗಳು ಯಾವ ಪ್ರದೇಶದಲ್ಲಿ ಮಾರಾಟ ಮಾಡಬಹುದು, ಅಂಗಡಿಗೆ ಆಗಮಿಸುವ ಪ್ರತಿ ಗ್ರಾಹಕರೊಂದಿಗೆ ಮಾಲೀಕರು ಹೇಗೆ ವರ್ತಿಸಬೇಕು ಗ್ರಾಹಕ ಮತ್ತು ಮಾಲೀಕರ ಸಂಬಂಧಗಳು ಹೇಗೆ ಇರಬೇಕು ಎಂಬುದು ಈ ಒಂದು ವಾಣಿಜ್ಯ ಆಹಾರ ಮೇಳದಿಂದ ವಿದ್ಯಾರ್ಥಿಗಳು ಕಲಿಯಲು ಸಾಧ್ಯ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಅಭಿಜಿತ್ ಪೋತ್ನಿಸ್ ಮುಂತಾದವರು ಮಾತನಾಡಿದರು. ನಿರ್ಣಾಯಕರಾಗಿ ಮುಂಡರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಜಿ.ಬಿ. ಹುಲ್ಲೂರು, ನರೇಗಲ್ಲ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ರವಿ.ಸಿ.ಎಸ್, ಅಕ್ಷತಾ ಶೇಟ್, ಅಲ್ವಿನಾ ದಲ್ಬಂಜನ್, ಆನಂದ್, ಶರೀಫ್ ಬೆನಕಲ್ ಮುಂತಾದವರು ಆಗಮಿಸಿದ್ದರು.ಪ್ರಾಚಾರ್ಯ ಕೆ. ಗಿರಿರಾಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಐ ಕ್ಯು ಎ ಸಿ ಕೋ -ಆರ್ಡಿನೇಟರ ಡಾ.ವಿ.ಟಿ. ನಾಯ್ಕರ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಒಟ್ಟು 15ತಂಡಗಳು, 150 ಸ್ಪರ್ಧಾಳುಗಳು ಭಾಗವಹಿಸಿದ್ದರು. ಎಸ್.ಬಿ. ಜಾಧವ, ಪಪೂ ಪ್ರಾಚಾರ್ಯ ರವಿ ಕುಲಕರ್ಣಿ, ಬಿಬಿಎ, ಬಿಸಿಎ ಪ್ರಾಚಾರ್ಯ ಲಿಂಗರಾಜ್ ರಶ್ಮಿ, ಡಾ. ಸವಿತಾ ಬಂಡಾರ್ಕರ್.ಎಸ್.ಎಂ. ಬೆಲ್ಗಾಂ. ಫಿರೋಜ್ ಖಾನ್ ಯು ಎಂ, ಪ್ರಿಯಾಂಕ ಕಬಾಡಿ, ಸುನೀತಾ ತಿರುಲಪುರ, ಈಶ್ವರ ಯಾವುಗಲ, ಮೋಹನ್ ಡಿ, ಪ್ರಶಾಂತ ಹೊಂಬಾಳಿ, ಆದಿತ್ಯ ಜೋಶಿ ಮುಂತಾದವರು ಹಾಜರಿದ್ದರು.