ಜ್ಞಾನ ಸರೋವರ ಪದವಿ ಕಾಲೇಜಲ್ಲಿ ಆಹಾರ ಹಬ್ಬ

| Published : May 18 2024, 12:33 AM IST

ಸಾರಾಂಶ

ಚನ್ನಪಟ್ಟಣ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿ, ಪರಂಪರೆ ತಿಳಿದುಕೊಳ್ಳಬೇಕು. ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಸಲಹೆ ನೀಡಿದರು.

ಚನ್ನಪಟ್ಟಣ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿ, ಪರಂಪರೆ ತಿಳಿದುಕೊಳ್ಳಬೇಕು. ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಸಲಹೆ ನೀಡಿದರು.

ನಗರದ ಜ್ಞಾನ ಸರೋವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೆಂಕಿ ರಹಿತ ಆಹಾರ ಹಬ್ಬ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವೆಂಬುದು ಬಹಳ ಪ್ರಮುಖ ಘಟ್ಟವಾಗಿದೆ. ಇಲ್ಲಿ ಏನನ್ನು ಕಲಿಯುತ್ತೀರೋ ಅದು ಜೀವನ ಪರ್ಯಂತ ನಿಮ್ಮ ಜತೆಗೆ ಇರುತ್ತದೆ. ಆದ್ದರಿಂದ ಉತ್ತಮ ಅಂಶಗಳನ್ನು ಕಲಿಯುವುದರತ್ತ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು ಎಂದರು.

ವಿದ್ಯಾರ್ಥಿಗಳು ಆಲಸ್ಯ ಮನೋಭಾವನೆ ತೊರೆದು ಸದಾ ಕ್ರೀಯಾಶೀಲತೆ ಮೈಗೂಡಿಕೊಳ್ಳಬೇಕು. ಆಹಾರದ ಮಹತ್ವ ಹಾಗೂ ಆರೋಗ್ಯಕ್ಕಾಗಿ ಆಹಾರ ಎಂಬ ವಿಚಾರವಾಗಿ ಮಾತನಾಡಿ, ವಿವಿಧ ರುಚಿಯ ಖಾದ್ಯಗಳ ತಯಾರಿಕೆ ಮತ್ತು ಪ್ರಸ್ತುತ ಪಡಿಸುವಿಕೆ ಮಹತ್ವವನ್ನು ತಿಳಿಸಿದರು.

ಪ್ರಾಂಶುಪಾಲರಾದ ಬಿ.ಎಸ್.ಹೇಮಲತಾ ಮಾತನಾಡಿ, ಪ್ರತಿವರ್ಷವೂ ನಮ್ಮ ಸಂಸ್ಥೆಯು ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ ಉದ್ದೇಶದಿಂದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಪ್ರಸ್ತುತ ವಿದ್ಯಮಾನಕ್ಕೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ವೃದ್ಧಿಪಡಿಸುವ ಹಲವು ವೈವಿಧ್ಯಮಯ ಕಾರ್ಯಕ್ರಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ರೂಢಿಸಿ, ಪರಿಪೂರ್ಣರನ್ನಾಗಿಸಲು ಹಲವು ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶ್ರೀ ಮಹದೇಶ್ವರ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಆರ್.ಆದರ್ಶಕುಮಾರ್, ಭೂಗೋಳಶಾಸ್ತ್ರ ಉಪನ್ಯಾಸಕ ಎಚ್.ಸಿ ಹೊಳಸಾಲಯ್ಯ, ಪ್ರಾಧ್ಯಾಪಕರಾದ ಪ್ರವೀಣ್ ಎಂ.ಆರ್, ಚನ್ನಂಕೇಗೌಡ, ವಿನಯ್ ಕುಮಾರ್.ವಿ, ಜಾಕೀರ್ ಹುಸೇನ್, ಕೆ.ಶೃತಿ, ಭಾವನ, ಚಂದನಾ ಪಿ.ಎಸ್, ಕಚೇರಿ ಸಿಬ್ಬಂದಿಗಳಾದ ರೂಪಾ, ಅಭಿಲಾಷ್ ಕುಮಾರ್, ಸುಂದ್ರಮ್ಮ ಉಪಸ್ಥಿತರಿದ್ದರು. ಪೊಟೋ೧೭ಸಿಪಿಟಿ೨: ಚನ್ನಪಟ್ಟಣದ ಜ್ಞಾನ ಸರೋವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೆಂಕಿ ರಹಿತ ಆಹಾರ ಹಬ್ಬವನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಉದ್ಘಾಟಿಸಿದರು.