ಕ್ಷಯ ರೋಗಿಗಳಿಗೆ ಹೈ ಟೆನ್ ಫಾಸ್ಟ್ ನರ್ ಕಂಪನಿಯಿಂದ ಫುಡ್ ಕಿಟ್ ವಿತರಣೆ

| Published : Mar 13 2025, 12:45 AM IST

ಸಾರಾಂಶ

ಕ್ಷಯ ರೋಗಿಗಳು ಪ್ರತಿದಿನ ರೋಗ ನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದು, ರೋಗಿಗಳಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಆದ್ದರಿಂದ ಪ್ರತಿ ತಿಂಗಳು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ಷಯ ರೋಗಿಗಳಿಗೆ ಅವಶ್ಯಕತೆ ಇರುವ ಪ್ರಯೋಗಶಾಲಾ ಪರೀಕ್ಷೆಗಳನ್ನು ಮಾಡಿಸಿ ರೋಗಿಯನ್ನು ತಪಾಸಣೆ ನಡೆಸಿ ಫುಡ್ ಕಿಟ್ ಕೊಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಸೋಮನಹಳ್ಳಿ ಹೈಟೆನ್ ಫಾಸ್ಟ್‌ ನರ್ ಕಂಪನಿಯಿಂದ ತಾಲೂಕಿನ ಸುಮಾರು 50 ಮಂದಿ ಕ್ಷಯ ರೋಗಿಗಳಿಗೆ ಫುಡ್ ಕಿಟ್‌ಗಳನ್ನು ವಿತರಿಸಲಾಯಿತು.

ಕಂಪನಿಯು ಕಳೆದ ಎರಡು ವರ್ಷಗಳಿಂದ ಫುಡ್ ಕಿಟ್ ಕೊಡುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೂಲಕ ಕ್ಷಯರೋಗಿಗಳಿಗೆ ಫುಡ್ ಕಿಟ್ ತಲುಪಿಸಲಾಗುತ್ತಿದೆ. ಕ್ಷಯ ರೋಗಿಗಳು ಪ್ರತಿದಿನ ರೋಗ ನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದು, ರೋಗಿಗಳಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಆದ್ದರಿಂದ ಪ್ರತಿ ತಿಂಗಳು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ಷಯ ರೋಗಿಗಳಿಗೆ ಅವಶ್ಯಕತೆ ಇರುವ ಪ್ರಯೋಗಶಾಲಾ ಪರೀಕ್ಷೆಗಳನ್ನು ಮಾಡಿಸಿ ರೋಗಿಯನ್ನು ತಪಾಸಣೆ ನಡೆಸಿ ಫುಡ್ ಕಿಟ್ ಕೊಡಲಾಗುತ್ತಿದೆ.

ಹೈ ಟೆನ್ ಫಾಸ್ಟ್ ನರ್ ಕಂಪನಿಯವರು ಫುಡ್ ಕಿಟ್ ಕೊಡುತ್ತಿರುವ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ ಮೆಚ್ಚುಗೆ ವ್ಯಕ್ತಪಡಿಸಿ, ತಾಲೂಕಿನಲ್ಲಿ ಇನ್ನೂ ಹೆಚ್ಚಿನ ದಾನಿಗಳು ಕ್ಷಯ ರೋಗಿಗಳನ್ನು ದತ್ತು ಪಡೆದು ಫುಡ್ ಕಿಟ್ ಗಳನ್ನು ನೀಡುವಂತೆ ಕೋರಿದರು.

ಈ ವೇಳೆ ವೈದ್ಯಾಧಿಕಾರಿಗಳಾದ ಡಾ.ಕಿರಣ್ ಕುಮಾರ್ ಡಾ.ಧನುಷ್ , ಎಸ್ ಟಿಎಸ್ ಕೆಂಪೇಗೌಡ ಹಾಜರಿದ್ದರು.

17 ರಂದು ಪುತಿನ ಜನ್ಮದಿನೋತ್ಸವ

ಮಂಡ್ಯ: ಡಾ.ಪು.ತಿ.ನ ಟ್ರಸ್ಟ್ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 120ನೇ ಪುತಿನ ಜನ್ಮದಿನೋತ್ಸವವನ್ನು ಮಾ.17ರಂದು ಸಂಜೆ ಬೆಂಗಳೂರಿನ ಮಲ್ಲೇಶ್ವರಂನ ಸೇವಾಸದನದಲ್ಲಿ ಆಯೋಜಿಸಲಾಗಿದೆ.

ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಲೇಖಕರು, ಪತ್ರಕರ್ತ ಹಾಗೂ ಪ್ರಾಧ್ಯಾಪಕರಾದ ಎನ್.ಎಸ್.ಶ್ರೀಧರಮೂರ್ತಿ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಾ. ಪು.ತಿ.ನ. ಟ್ರಸ್ಟ್ ಮಾಜಿ ಅಧ್ಯಕ್ಷ ವಿದ್ವಾನ್ ಡಿ.ಬಾಲಕೃಷ್ಣ ಹಾಗೂ ಮಾಜಿ ಕಾರ್ಯದರ್ಶಿ ಡಾ. ಸಿ.ಆನಂದರಾಮ ಉಪಾಧ್ಯ , ಸದಸ್ಯರು ಭಾಗವಹಿಸಲಿದ್ದಾರೆ.