ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಆಹಾರ ಸುರಕ್ಷತೆ ಆಂದೋಲನ ಹಿನ್ನಲೆಯಲ್ಲಿ ಬಾಗಲಕೋಟೆ ನಗರಸಭೆ ವ್ಯಾಪ್ತಿಯಲ್ಲಿನ ಹೋಟೆಲ್, ರೆಸ್ಟೋರೆಂಟ್, ಖಾನಾವಳಿ ಹಾಗೂ ಬೀದಿಬದಿ ಎಗ್ ರೈಸ್ ಅಂಗಡಿಗಳಿಗೆ ಜಿಲ್ಲಾ ಆಹಾರ ಸುರಕ್ಷತಾ ಪರಿಶೀಲನಾ ತಂಡ ದಾಳಿ ನಡೆಸಿ ಆಹಾರ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ:ಆಹಾರ ಸುರಕ್ಷತೆ ಆಂದೋಲನ ಹಿನ್ನಲೆಯಲ್ಲಿ ಬಾಗಲಕೋಟೆ ನಗರಸಭೆ ವ್ಯಾಪ್ತಿಯಲ್ಲಿನ ಹೋಟೆಲ್, ರೆಸ್ಟೋರೆಂಟ್, ಖಾನಾವಳಿ ಹಾಗೂ ಬೀದಿಬದಿ ಎಗ್ ರೈಸ್ ಅಂಗಡಿಗಳಿಗೆ ಜಿಲ್ಲಾ ಆಹಾರ ಸುರಕ್ಷತಾ ಪರಿಶೀಲನಾ ತಂಡ ದಾಳಿ ನಡೆಸಿ ಆಹಾರ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿತು.
ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ ಸಾಳಗುಂದ, ಬಸವರಾಜ ಮೊಳೆಗಾಂವಿ, ಇಮಾಮ ಹಸನ್ ಡೋನೂರ, ಶರಣು ರೇವಡಿ ಒಳಗೊಂಡ ತಂಡ ದಾಳಿ ನಡೆಸಿ ರೈಸ್ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ್, ಆಹಾರದಲ್ಲಿ ಬೆರೆಸುತ್ತಿರುವ ಕಲರ್‌ಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೆಲವೊಂದು ಅಂಗಡಿಗಳಿಗೆ ನೋಟಿಸ್ ಸಹ ನೀಡಲಾಯಿತು. ಅಲ್ಲದೇ ವ್ಯಾಪಾಸ್ಥರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಜಾಗೃತಿ ಸಹ ಮೂಡಿಸಲಾಯಿತು.