: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ನೇತೃತ್ವದಲ್ಲಿ, ಬಳಗದ ಅಧ್ಯಕ್ಷ ಪ್ರಸಾದ್ ಜಿ.ಆರ್. ಅಧ್ಯಕ್ಷತೆಯಲ್ಲಿ ‘ಭರವಸೆಯ ಆರೋಗ್ಯಕರ ಆಹಾರ’ ಮತ್ತು ‘ಫ್ರುಟ್ ಎನ್ಜೈಮ್ - ಪರಿಸರ ಸ್ನೇಹಿ ಸ್ವಚ್ಛತೆ’ ಉಭಯ ವಿಚಾರಗಳ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ನೇತೃತ್ವದಲ್ಲಿ, ಬಳಗದ ಅಧ್ಯಕ್ಷ ಪ್ರಸಾದ್ ಜಿ.ಆರ್. ಅಧ್ಯಕ್ಷತೆಯಲ್ಲಿ ‘ಭರವಸೆಯ ಆರೋಗ್ಯಕರ ಆಹಾರ’ ಮತ್ತು ‘ಫ್ರುಟ್ ಎನ್ಜೈಮ್ - ಪರಿಸರ ಸ್ನೇಹಿ ಸ್ವಚ್ಛತೆ’ ಉಭಯ ವಿಚಾರಗಳ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.ಮೈಕ್ರೋ ಗ್ರೀನ್ಸ್-ಆರೋಗ್ಯ ರಕ್ಷಣೆಯಲ್ಲಿ ನೀಡುವ ಮಹತ್ತರ ಕೊಡುಗೆಗಳನ್ನು, ಪೌಷ್ಟಿಕ ಆಹಾರವಾಗಿ ಅದು ನೀಡುವ ಫಲಿತಾಂಶಗಳನ್ನು ಸಂಪನ್ಮೂಲ ವ್ಯಕ್ತಿ ಡಾ.ಎಸ್.ಮೀರಾ ಮಂಗಳೂರು ಹಂಚಿಕೊಂಡರು. ದೋಷ ರಹಿತವಾಗಿ ಮೈಕ್ರೋ ಗ್ರೀನ್ಸ್ ಬೆಳೆ ಬೆಳೆಸುವ ವಿವಿಧ ಹಂತಗಳು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಮೈಕ್ರೋ ಗ್ರೀನ್ಸ್ ಬಳಕೆಯ ಸೂಕ್ತ ವಿಧಾನ ಪರಿಚಯಿಸಿದರು. ಅರುಣಾಂಬಿಕಾ ಎಕ್ಕೂರು, ಪರಿಸರ ಸ್ನೇಹಿ ಸ್ವಚ್ಛತೆಯಲ್ಲಿ ಫ್ರುಟ್ ಎನ್ಜೈಮ್‌ಗಳ ಅದ್ಭುತ ಕಾರ್ಯ ವ್ಯಾಪ್ತಿ, ಅದರ ಸಿದ್ಧತೆ ಮತ್ತು ಬಳಕೆಯ ವಿಧಾನವನ್ನು, ತರಕಾರಿಗಳು, ಹಣ್ಣು ಹಂಪಲುಗಳ ಸ್ವಚ್ಛತೆ, ನೆಲದ ಸ್ವಚ್ಛತೆ, ಬಟ್ಟೆಬರೆಗಳ ಸ್ವಚ್ಛತೆ, ಶಾರೀರಿರ ಸ್ವಚ್ಛತೆ, ಅಲಂಕಾರಿಕ ಗಿಡಗಳು ಹಾಗೂ ತರಕಾರಿ ಸಸ್ಯಗಳ ಸಂರಕ್ಷಣೆಲ್ಲಿ ಫ್ರುಟ್ ಎನ್ಜೈಮ್‌ಗಳ ಕಾರ್ಯ ಬಾಹುಳ್ಯದ ವಿಶೇಷತೆ ತಿಳಿಸಿದರು.
ಶೀಲಾ ತಿಲಕ್ ಸ್ವಾಗತಿಸಿದರು. ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ರಾಮಚಂದ್ರ ಭಟ್ ವಂದಿಸಿದರು. ಗಂಗಾ ನಿರೂಪಿಸಿದರು.