ಸಾರಾಂಶ
ರಾಜ್ಯಮಟ್ಟದ 14 ವರ್ಷದೊಳಗಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಮ್ಯಾಜಿಕ್ ಫೀಟ್ ತಂಡ ಪ್ರಥಮ ಸ್ಥಾನ ಪಡೆದಿದೆ. ಪಂದ್ಯಾವಳಿಯಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸುಮಾರು 12 ತಂಡಗಳು ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡವು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಚಿತ್ರದುರ್ಗ ತಂಡ ಹಾಗೂ ತೃತೀಯ ಸ್ಥಾನ ಚಿಕ್ಕಮಗಳೂರು ಫುಟ್ಬಾಲ್ ತಂಡವು ಪಡೆದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಭಾನುವಾರ ನಗರದ ನೆಹರು ಕ್ರೀಡಾಂಗಣದಲ್ಲಿ ದಿ.ಸುಂದರ್ ಸಿಂಗ್ ಸ್ಮರಣಾರ್ಥ ನಡೆದ ರಾಜ್ಯಮಟ್ಟದ 14 ವರ್ಷದೊಳಗಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಮ್ಯಾಜಿಕ್ ಫೀಟ್ ತಂಡ ಪ್ರಥಮ ಸ್ಥಾನ ಪಡೆದಿದೆ.
ಪಂದ್ಯಾವಳಿಯಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸುಮಾರು 12 ತಂಡಗಳು ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡವು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಚಿತ್ರದುರ್ಗ ತಂಡ ಹಾಗೂ ತೃತೀಯ ಸ್ಥಾನ ಚಿಕ್ಕಮಗಳೂರು ಫುಟ್ಬಾಲ್ ತಂಡವು ಪಡೆದಿದೆ.ಇನ್ನು 12 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಫುಟ್ಬಾಲ್ ಅಸೋಸಿಯೇಷನ್ ತಂಡ ಪ್ರಥಮ ಸ್ಥಾನ ಪಡೆದಿದೆ. ಎರಡನೇ ಸ್ಥಾನ ಶಿವಮೊಗ್ಗದ ಮ್ಯಾಜಿಕ್ ಫೀಟ್ ತಂಡ ಪಡೆದರೆ, ತೃತೀಯ ಸ್ಥಾನ ಶಿವಮೊಗ್ಗದ ಕಾಸ್ಮೋಸ್ ತಂಡಕ್ಕೆ ಲಭಿಸಿದೆ. ಈ ಪಂದ್ಯಾವಳಿಯ ಉಸ್ತುವಾರಿ ಸುಂದರ್ ಸಿಂಗ್ ಅಕಾಡೆಮಿಯ ತರಬೇತುದಾರ ದೀಪಕ್ ಸಿಂಗ್ , ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಿರಿಯ ತರಬೇತುದಾರ ನಾದನ್, ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡದ ತರಬೇತುದಾರ ಸುನಿಲ್ ಡಿಸೋಜಾ ಹಾಗೂ ಜೈ ಭಾರತ್ ಎಫ್ ಸಿ ತಂಡದ ತರಬೇತುದಾರ ರಾಮಣ್ಣ ವಹಿಸಿದ್ದರು.
--------------------