ಕುಣಿಗಲ್‌ನಲ್ಲಿ ಪುಟ್ಪಾತ್‌ ತೆರವು ಕಾರ್ಯಾಚರಣೆ

| Published : Mar 14 2025, 12:33 AM IST

ಸಾರಾಂಶ

ಪಟ್ಟಣದಲ್ಲಿ ಪುಟ್‌ಪಾತ್‌ ಸೇರಿದಂತೆ ಅನೇಕ ಕಡೆ ಒತ್ತುವರಿಯಾಗಿದ್ದ ರಸ್ತೆಯನ್ನು ಪುರಸಭೆ, ಪಿಡಬ್ಲುಡಿ ಮತ್ತು ಪೊಲೀಸ್‌ ಅಧಿಕಾರಿಗಳು ತೆರವುಗೊಳಿಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ಪಟ್ಟಣದಲ್ಲಿ ಪುಟ್‌ಪಾತ್‌ ಸೇರಿದಂತೆ ಅನೇಕ ಕಡೆ ಒತ್ತುವರಿಯಾಗಿದ್ದ ರಸ್ತೆಯನ್ನು ಪುರಸಭೆ, ಪಿಡಬ್ಲುಡಿ ಮತ್ತು ಪೊಲೀಸ್‌ ಅಧಿಕಾರಿಗಳು ತೆರವುಗೊಳಿಸಿದರು.

ಪಟ್ಟಣದ ಆರಂಭವಾದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ವಿವಿಧ ಕಡೆ ನೋಟಿಸ್‌ ನೀಡಿದರು ಒತ್ತುವರಿ ತೆರವು ಮಾಡದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಜೆಸಿಬಿಯಿಂದ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ಕೆಲವು ಪ್ರಭಾವಿ ವ್ಯಾಪಾರಸ್ಥರು ಆರಂಭದಲ್ಲಿ ವಿರೋಧಿಸಿದರೂ ಸಹ ಯಾವುದಕ್ಕೂ ಮಣಯದ ಅಧಿಕಾರಿಗಳು ಪೊಲೀಸ್‌ ರಕ್ಷಣೆಯಲ್ಲಿ ಕಾರ್ಯ ಪೂರ್ಣಗೊಳಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಪುರಸಭಾ ಸದಸ್ಯ ರಂಗಸ್ವಾಮಿ ಹಾಗೂ ಮುಖ್ಯ ಅಧಿಕಾರಿ ಮಂಜುಳಾ ಅವರ ಜೊತೆಗೆ ವಾಗ್ವಾದ ನಡೆಸಿದ ಘಟನೆ ಸಹ ನಡೆಯಿತು. ಇನ್ನೂ ನಂದಿನಿ ಡೈರಿ ಬಳಿ ಕಟ್ಟೆಯನ್ನು ತೆಗೆಯುವ ವಿಚಾರದಲ್ಲಿ ಸ್ಥಳೀಯರು ಅದನ್ನು ವಿರೋಧ ವ್ಯಕ್ತಪಡಿಸಿ ನಾವು ಜನರು ಕುಳಿತುಕೊಳ್ಳಲು ಹಾಗೂ ಅವರಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಕಟ್ಟೆ ಕಟ್ಟಿಸಿದ್ದೇವೆ ಪುರಸಭೆ ಮಾಡಲಾಗದ ಕೆಲಸವನ್ನು ನಾವು ಮಾಡಿದ್ದು ನಮ್ಮನ್ನು ಅಭಿನಂದಿಸುವ ಬದಲು ಕಟ್ಟೆಯನ್ನು ತೆರೆವುಗೊಳಿಸುವುದು ಸರಿ ಇಲ್ಲ ಎಂದು ವಾಗ್ವಾದ ಕ್ಕಿಳಿದರು. ಮಲ್ಲಿಪಾಳ್ಯದಿಂದ ಕುಣಿಗಲ್ ಪುರಸಭಾ ಮುಂಭಾಗದ ಎರಡು ಬದಿಯಲ್ಲಿ ಒತ್ತುವರಿಯಾಗಿದ್ದರಸ್ತೆ ಹಾಗೂ ಪುಟ್‌ಪಾತ್‌ನ್ನು ತೆರವುಗೊಳಸಲಾಗಿದೆ. ಶುಕ್ರವಾರ ಹುಚ್ಚಮಾಸ್ತಿಗೌಡ ವೃತ್ತದಿಂದ ಪ್ರವಾಸಿ ಮಂದಿರ ಸೇರಿದಂತೆ ಮಲ್ಲಾಘಟ್ಟದವರೆಗೂ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ಅಂಗವಿಕಲ ನಡೆಸುತ್ತಿದ್ದ ಸೈಬರ್ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ವಿರೋಧದ ನಡುವೆ ಅಧಿಕಾರಿಗಳು ತಹಸೀಲ್ದಾರ್ ಕಚೇರಿಯ ಒಳಭಾಗದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರು. ಪಟ್ಟಣದಲ್ಲಿ ವಾಹನ ನಿಲ್ದಾಣ, ನಿಗದಿತ ಫುಡ್ ಕೋರ್ಟ್ ಗಳನ್ನು ಪುರಸಭೆ ನಿಗದಿಗೊಳಿಸಬೇಕಿದೆ ಮತ್ತು ಸಂಚಾರಿ ನಿಯಂತ್ರಣ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.