ಸಾರಾಂಶ
ಕಡೂರು, ಪಟ್ಟಣದ ಪುರಸಭೆ ಆಡಳಿತದಿಂದ 2025-26ನೇ ಸಾಲಿನ ಫುಟ್‍ಪಾತ್ ನೆಲಬಾಡಿಗೆ ವಸೂಲಿಗೆ ನಡೆದ ಬಹಿರಂಗ ಹರಾಜಿನಲ್ಲಿ ₹17.55 ಲಕ್ಷಕ್ಕೆ ಬಿಡ್ ನಡೆಯಿತು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಪುರಸಭೆ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆಕನ್ನಡಪ್ರಭ ವಾರ್ತೆ ಕಡೂರು
ಪಟ್ಟಣದ ಪುರಸಭೆ ಆಡಳಿತದಿಂದ 2025-26ನೇ ಸಾಲಿನ ಫುಟ್‍ಪಾತ್ ನೆಲಬಾಡಿಗೆ ವಸೂಲಿಗೆ ನಡೆದ ಬಹಿರಂಗ ಹರಾಜಿನಲ್ಲಿ ₹17.55 ಲಕ್ಷಕ್ಕೆ ಬಿಡ್ ನಡೆಯಿತು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.ಸೋಮವಾರ ಪುರಸಭೆ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿ, ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರುವ ಫುಟ್‍ಪಾತ್ ನಲ್ಲಿ ಗೂಡಂಗಡಿ, ತಳ್ಳುವಗಾಡಿ, ಅಂಗಡಿ, ಬೀದಿ ಬದಿಗಳಲ್ಲಿನ ಟೀ, ಕಾಫಿ, ಜ್ಯೂಸ್, ಆಹಾರ ಪದಾರ್ಥ, ತರಕಾರಿ, ಹಣ್ಣು ಮತ್ತಿತರ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ವ್ಯಾಪಾರಿಗಳಿಂದ ಸುಂಕದ ರೂಪ ದಲ್ಲಿ ಹಣ ವಸೂಲಿ ಮಾಡುವ ಹರಾಜು ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಕಳೆದ ವರ್ಷ 10,50,000 ಲಕ್ಷಕ್ಕೆ ಹರಾಜು ನಡೆದಿತ್ತು. ಈ ಬಾರಿ ₹ 17,55,000 ಲಕ್ಷ ಕ್ಕೆ ಅಂದರೆ ಕಳೆದ ಬಾರಿಗಿಂತ ಸುಮಾರು ₹7ಲಕ್ಷ ಹೆಚ್ಚಿಗೆ ಬಿಡ್‍ದಾರರು ಕೂಗಿರುವುದರಿಂದ ಪುರಸಭೆ ಆದಾಯ ಕೂಡ ಹೆಚ್ಚಾಗಲಿದೆ ಎಂದರು.ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 11 ಜನರು ಭಾಗವಹಿಸಿದ್ದು ಅವರಲ್ಲಿ ಕೋಳಿ ವ್ಯಾಪಾರಿ ಕುಮಾರ್ ತಂದೆ ಶ್ರೀನಿವಾಸ್ ಎಂಬುವರು ₹ 17.55 ಲಕ್ಷಕ್ಕೆ ಹರಾಜು ಪಡೆದಿದ್ದಾರೆ. ಈ ಬಗ್ಗೆ ಮುಂಬರುವ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚಿಸಿದ ಬಳಿಕ ಅಂಗೀಕರಿಸುವ ಭರವಸೆ ನೀಡಿದರು.ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಸದಸ್ಯರು, ಸಾರ್ವಜನಿಕರು, ಬಿಡ್‍ದಾರರು ಹಾಜರಿದ್ದರು, ಚಿನ್ನರಾಜು, ಜಿಮ್‍ರಾಜ್, ಮಂಜುನಾಥ್, ಕಾಂತರಾಜು, ಸಿಬ್ಬಂದಿ ತಿಮ್ಮಯ್ಯ, ವಾಸು ಮತ್ತಿತರರು ಇದ್ದರು.10ಕೆಕೆೆಡಿಯು1.
ಕಡೂರು ಪುರಸಭೆಯಲ್ಲಿ ಪುಟ್‍ಪಾತ್ ಸುಂಕ ವಸೂಲಿಯ ಟೆಂಡರ್ ಹರಾಜು ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖ್ಯಧಿಕಾರಿ ಮಂಜುನಾಥ್, ಬಿಡ್ ಪಡೆದ ಕುಮಾರ್ ಮತ್ತಿತರರು ಇದ್ದರು.