ಸಾರಾಂಶ
ದಾವಣಗೆರೆ: ಆಟೋದಲ್ಲಿಯೇ ಸುಮಾರು 1.50 ಲಕ್ಷ ರು. ಮೌಲ್ಯದ ಚಿನ್ನಾಭರಣ ಇರುವ ಬ್ಯಾಗನ್ನು ಬಿಟ್ಟು ಇಳಿದಿದ್ದ ಮಹಿಳೆಗೆ ಆಕೆಯ ಸ್ವತ್ತನ್ನು ಪತ್ತೆ ಮಾಡಿ ಪೊಲೀಸರು ಶನಿವಾರ ಹಸ್ತಾಂತರಿಸಿದ್ದಾರೆ.
ದಾವಣಗೆರೆ: ಆಟೋದಲ್ಲಿಯೇ ಸುಮಾರು 1.50 ಲಕ್ಷ ರು. ಮೌಲ್ಯದ ಚಿನ್ನಾಭರಣ ಇರುವ ಬ್ಯಾಗನ್ನು ಬಿಟ್ಟು ಇಳಿದಿದ್ದ ಮಹಿಳೆಗೆ ಆಕೆಯ ಸ್ವತ್ತನ್ನು ಪತ್ತೆ ಮಾಡಿ ಪೊಲೀಸರು ಶನಿವಾರ ಹಸ್ತಾಂತರಿಸಿದ್ದಾರೆ.
ಜಗಳೂರು ತಾಲೂಕಿನ ಸಿದ್ದಯ್ಯನ ಕೋಡೆ ನಿವಾಸಿ ಅಂಜುಬಾನು ಎನ್ನುವ ಮಹಿಳೆ ನ.20 ರಂದು ದಾವಣಗೆರೆಗೆ ಬಂದು ಆಟೋದಿಂದ ಇಳಿಯುವಾಗ ಚಿನ್ನಾಭರಣ, ಮೊಬೈಲ್ ಇರುವ ಬ್ಯಾಗನ್ನು ಕಳೆದುಕೊಂಡಿದ್ದರು. ಈ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲಕ್ಷ್ಮಣನಾಯ್ಕ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸ್ ತಂಡವು ಅಂಜುಬಾನು ಅವರು ಪ್ರಯಾಣಿಸಿದ ಆಟೋವನ್ನು ದಾವಣಗೆರೆ ಪೊಲೀಸ್ ಕಮಾಂಡ್ ಸೆಂಟರ್ ಸಿಬ್ಬಂದಿಯವರ ಸಹಾಯದಿಂದ ಪತ್ತೆ ಮಾಡಿ, ಇಲ್ಲಿನ ಎಸ್ಸೆಸ್ಸೆಂ ನಗರದ ನಿವಾಸಿಯಾಗಿರುವ ಆಟೋ ಚಾಲಕ ಮಹಮ್ಮದ್ ಹುಸೇನ್ ಶೇಕ್ ನ್ನು ಪತ್ತೆ ಮಾಡಿದೆ. ಸ್ವತ್ತನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಅಂಜುಬಾನು ಅವರು ಕಳೆದುಕೊಂಡಿದ್ದ ಸುಮಾರು 20 ಗ್ರಾಂ ಬಂಗಾರ ಹಾಗೂ ಇತರೆ ಬೆಳ್ಳಿಯ ಆಭರಣ, 10,000 ನಗದು ಹಾಗೂ ಮೊಬೈಲ್ ಫೋನ್ ಸೇರಿ ಒಟ್ಟು 1,50,000 ರು. ಮೌಲ್ಯದ ಸ್ವತ್ತನ್ನು ಪತ್ತೆ ಮಾಡಿ, ಸ್ವತ್ತಿನ ವಾರಸುದಾರರಾದ ಅಂಜುಬಾನು ಅವರಿಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.
;Resize=(128,128))
;Resize=(128,128))
;Resize=(128,128))