ಸಾರಾಂಶ
ಹೊರ ರಾಜ್ಯಗಳಿಗೆ ಹೋಗಿ ಬರುವ ಚಾಲಕರು ಮತ್ತು ನಿರ್ವಾಹಕರು ಪ್ರತಿ ತಿಂಗಳು ರಕ್ತದೊತ್ತಡ, ಸಕ್ಕರೆ ಮತ್ತು ರಕ್ತ ಪರೀಕ್ಷೆ ಮಾಡಿಸಿ ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಹೊರ ರಾಜ್ಯಗಳಿಗೆ ಹೋಗಿ ಬರುವ ಚಾಲಕರು ಮತ್ತು ನಿರ್ವಾಹಕರು ಪ್ರತಿ ತಿಂಗಳು ರಕ್ತದೊತ್ತಡ, ಸಕ್ಕರೆ ಮತ್ತು ರಕ್ತ ಪರೀಕ್ಷೆ ಮಾಡಿಸಿ ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು ಹೇಳಿದರು.ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಘಟಕಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ವ್ಯವಸ್ಥಾಪಕರು, ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಗಳ ಆರೋಗ್ಯ ಮಾಹಿತಿ ಪಡೆದು ಮಾತನಾಡಿದರು.
ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವ ಚಾಲಕರು, ನಿರ್ವಾಹರನ್ನು ಹೊರ ರಾಜ್ಯ ಮತ್ತು 699 ಕಿ.ಮೀ ದೂರದ ಪ್ರಯಾಣಕ್ಕೆ ಹೋಗುವ ಮತ್ತು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಬಸ್ ಚಾಲಕರು, ನಿರ್ವಾಹಕರಿಗೆ ಕಡ್ಡಾಯವಾಗಿ ವಿನಾಯಿತಿ ನೀಡಿ ಎಂದು ಸಲಹೆ ನೀಡಿದ ಆರೋಗ್ಯಾಧಿಕಾರಿಗಳು ಪ್ರತಿ ತಿಂಗಳು ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿ ಎಂದು ಘಟಕದ ವ್ಯವಸ್ಥಾಪಕರಿಗೆ ತಿಳಿಸಿದರು.ರಾತ್ರಿ ಪಾಳಿಯಲ್ಲಿ ಬಸ್ ಚಾಲನೆ ಮಾಡುವ ಚಾಲಕರು, ನಿರ್ವಾಹಕರು ಕಡ್ಡಾಯವಾಗಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಜೊತೆಯಲ್ಲಿ ಕೊಂಡೊಯ್ಯಲು ಮಾಹಿತಿ ನೀಡಿದ ಅವರು, ಜ್ವರದ ಚಿಹ್ನೆಗಳು ಕಾಣಿಸಿಕೊಂಡರೆ, ತಕ್ಷಣವೇ ಆರೋಗ್ಯ ಇಲಾಖೆಯಲ್ಲಿ ಉಚಿತ ಪಾಸಣೆ ಮಾಡಿಸಲು ತಿಳಿಸಲಾಯಿತು.
ಡೆಂಘೀ, ಚಿಕನ್ ಗುನ್ಯ, ಮಲೇರಿಯಾ, ಫೈಲೇರಿಯಾ ಇತ್ಯಾದಿ ಕಾಯಿಲೆಗಳು ನಮ್ಮ ತಾಲೂಕಿನಲ್ಲಿ ಹರಡದಂತೆ ಮುನ್ನಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.ಘಟಕದ ವ್ಯವಸ್ಥಾಪಕ ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ. ರಮೇಶ್, ಮಹೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ. ರೇಖಾ, ಸುರಕ್ಷಣಾಧಿಕಾರಿ ಪಾರ್ವತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹೆಚ್.ಎಂ.ಗಂಗಾಧರ, ಅಂಬರೀಶ್, ಭರತ್ ರಾವ್, ಎಸ್.ಜೆ.ಮಹೇಶ್, ಮಂಜುನಾಥ್, ಹೆಮೇಶ್ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.