ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನೌಕರರು ಒಟ್ಟಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಶ್ಯಕತೆ ಇದೆ. ಹಾಗಾಗಿ ಸಂಘಟನೆ ಅನಿವಾರ್ಯವಾಗಿದ್ದು, ನೂತನ ಶಿಗ್ಗಾಂವಿ ತಾಲೂಕು ಹೊರಗುತ್ತಿಗೆ ನೌಕರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ಜಿಲ್ಲಾಧ್ಯಕ್ಷ ಗುರುರಾಜ ಕಂಬಳಿ ಹೇಳಿದರು.

ಶಿಗ್ಗಾಂವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನೌಕರರು ಒಟ್ಟಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಶ್ಯಕತೆ ಇದೆ. ಹಾಗಾಗಿ ಸಂಘಟನೆ ಅನಿವಾರ್ಯವಾಗಿದ್ದು, ನೂತನ ಶಿಗ್ಗಾಂವಿ ತಾಲೂಕು ಹೊರಗುತ್ತಿಗೆ ನೌಕರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ಜಿಲ್ಲಾಧ್ಯಕ್ಷ ಗುರುರಾಜ ಕಂಬಳಿ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೊರಗುತ್ತಿಗೆ ನೌಕರರ ಸಭೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಂಘದ ನೂತನ ಶಿಗ್ಗಾಂವಿ ತಾಲೂಕಾಧ್ಯಕ್ಷ ಮಹೇಶ ಕಳಸದ ಅವರನ್ನ ಸನ್ಮಾನಿಸಿ ಅವರು ಮಾತನಾಡಿದರು.ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ದುರ್ಗೇಶಿ ವಂದಬಾಗಿಲು ಮಾತನಾಡಿ, ಶಿಗ್ಗಾಂವಿ ತಾಲೂಕು ಹೊರಗುತ್ತಿಗೆ ನೌಕರರ ಸಂಘವನ್ನು ಸಲಹಾ ಸಮಿತಿ ಹಾಗೂ ಎಲ್ಲ ನೌಕರರ ಒಪ್ಪಿಗೆ ಪಡೆದು ತಾಲೂಕು ಘಟಕವನ್ನು ರಚಿಸಲಾಗಿದೆ. ಹಾಗಾಗಿ ನೌಕರರ ಹಿತ ಕಾಯಲು ತಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಸಭೆಯಲ್ಲಿ ಶಿಗ್ಗಾಂವಿ ತಾಲೂಕು ಹೊರಗುತ್ತಿಗೆ ನೌಕರರ ಸಂಘದ ತಾಲೂಕಾಧ್ಯಕ್ಷರನ್ನಾಗಿ ಮಹೇಶ ಕಳಸದ, ಉಪಾಧ್ಯಕ್ಷರಾಗಿ ಬ್ರಹ್ಮಾನಂದ ಬಡಿಗೇರ ಹಾಗೂ ಸುನಿತಾ ಹೆಬ್ಬಾಳ್ಕರ, ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ಕುಂದರಗಿ, ಖಜಾಂಚಿಯಾಗಿ ಬಸವರಾಜಿ ಗೌಳಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ಹರಿಗೊಂಡ, ಅನಿತಾ ಯಂಕಪ್ಪನವರ, ಸಂಚಾಲಕರಾಗಿ ಓಂಪ್ರಕಾಶ ಮೇದಾರ, ತಾಲೂಕು ನಿರ್ದೇಶಕರಾಗಿ ಮನೋಹರ ದೊಡ್ಡಮನಿ, ವೀರಣ್ಣಾ ಕಮ್ಮಾರ, ಮಾರುತಿ ಹರಿಜನ, ದಾದಾಪೀರ ಶರೀಫನವರ, ಹುಸೇನಸಾಬ ಜಿಗಳೂರು, ಚಿದಾನಂದ ತಳವಾರ, ಗಿರೀಶ ಮರ್ಜಿ, ಅಬ್ದುಲ್ ಲಕ್ಷ್ಮೇಶ್ವರ, ರಾಜು ಕುರಗೋಡಿ, ಶಿವರಾಜ ಪಾಟೀಲ, ಸಂತೋಷ ತಿರಕಣ್ಣನವರ, ಗಿರೀಶ ಸಮಗೊಂಡ ರವರನ್ನು ಆಯ್ಕೆ ಮಾಡಲಾಯಿತು.ಈ ಸಂಧರ್ಭದಲ್ಲಿ ಸಲಹಾ ಸಮಿತಿಯ ಸದಸ್ಯರಾದ ಬಸವರಾಜ ಬೆಲ್ಲದ, ಚಂಪಾವತಿ ವಿ.ಎನ್., ಕಾವ್ಯ ಬಗಾಡೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೌಕರರು ಹಾಜರಿದ್ದರು.