ಕೆಸಿಸಿ ಬ್ಯಾಂಕಿಗೆ ಶಿವಕುಮಾರಗೌಡ ಅಧ್ಯಕ್ಷ, ನಿಂಗನಗೌಡ ಉಪಾಧ್ಯಕ್ಷ

| Published : Nov 24 2023, 01:30 AM IST

ಕೆಸಿಸಿ ಬ್ಯಾಂಕಿಗೆ ಶಿವಕುಮಾರಗೌಡ ಅಧ್ಯಕ್ಷ, ನಿಂಗನಗೌಡ ಉಪಾಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ಅವಿಭಜಿತ ಧಾರವಾಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಇಲ್ಲಿಯ ಕೆಸಿಸಿ ಬ್ಯಾಂಕ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸುಸೂತ್ರವಾಗಿ ಮುಕ್ತಾಯವಾಗಿದ್ದು, ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮುಖಂಡ ಶಿವಕುಮಾರಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಹುಬ್ಬಳ್ಳಿ ಕ್ಷೇತ್ರದ ನಿಂಗನಗೌಡ ಮರಿಗೌಡರ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಧಾರವಾಡ

ಗುರುವಾರ ಇಲ್ಲಿಯ ಸುಭಾಸ ರಸ್ತೆಯಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ ಇಬ್ಬರೂ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ, ಉಪವಿಭಾಗಾಧಿಕಾರಿಯೂ ಆದ ಶಾಅಲಂ ಹುಸೇನ ಪ್ರಕಟಿಸಿದರು.

ಸಹಾಯಕ‌ ಚುನಾವಣಾಧಿಕಾರಿ, ತಹಸೀಲ್ದಾರ್‌ ಡಾ. ದೊಡ್ಡಪ್ಪ ಹೂಗಾರ, ಬ್ಯಾಂಕ್ ‌ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ ಇದ್ದರು. ಕಳೆದ ಸೆ. 20ರಂದು ಬ್ಯಾಂಕ್‌ನ ಆಡಳಿತ ಮಂಡಳಿಯ 20 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 20 ಸ್ಥಾನ ಪೈಕಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದ ಕಾರಣ 14 ಸ್ಥಾನಗಳ ಫಲಿತಾಂಶ ಮಾತ್ರ ಪ್ರಕಟಗೊಂಡಿತ್ತು. ಇತ್ತೀಚೆಗೆ ಉಳಿದ ಆರು ಸ್ಥಾನಗಳ ಫಲಿತಾಂಶ ಬಂದಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆಡಳಿತ ಪಕ್ಷ ಕಾಂಗ್ರೆಸ್‌ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬೆಂಬಲಿತರ ಮಧ್ಯೆ ಮೊದಲು ಪೈಪೋಟಿ ನಡೆದಿತ್ತು. ತದ ನಂತರ ಬ್ಯಾಂಕ್‌ನ ಹಿತದೃಷ್ಟಿಯಿಂದ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಚರ್ಚಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದ ಬಂದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಸಿಸಿ ಬ್ಯಾಂಕ್‌ಗೆ ಆಯ್ಕೆಯಾಗಿರುವ ಶಿವಕುಮಾರಗೌಡ ಪಾಟೀಲ, ಕೋರ್‌ ಬ್ಯಾಂಕ್‌ ವ್ಯವಸ್ಥೆ ಸೇರಿದಂತೆ ಮತ್ತಿತರೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೆಸಿಸಿ ಬ್ಯಾಂಕ್‌ ಸದೃಢವಾಗಿದೆ. ಅಧಿಕ ಪ್ರಮಾಣದಲ್ಲಿ ಜಂಟಿ ಬಾದ್ಯತಾ ಗುಂಪುಗಳನ್ನು ರಚಿಸಿ ಸಾಲಗಳನ್ನು ಒದಗಿಸುತ್ತಿದೆ. ಸಾಲ ವಸೂಲಾತಿಯಲ್ಲೂ ಗಣನೀಯ ಸಾಧನೆ ಮಾಡಿದೆ. ಒಟ್ಟಾರೆ ಆರ್ಥಿಕ ಸಬಲವಾಗಿದ್ದು ಅಧ್ಯಕ್ಷರಾಗಿ ತಾವು ಮತ್ತಷ್ಟು ಅಭಿವೃದ್ಧಿ ಹಿನ್ನೆಲೆಯಲ್ಲಿ ಕಾರ್ಯ ಮಾಡಲಾಗುವುದು ಎಂದು ಅವರು ಪ್ರತಿಕ್ರಯಿಸಿದರು.