ಸಾರಾಂಶ
For protection women association established in challakere
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಮಹಿಳಾ ಸಮುದಾಯದ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ ನಿಯಂತ್ರಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ರಕ್ಷಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಕಿತ್ತೂರುರಾಣಿ ಚನ್ನಮ್ಮ ಮಹಿಳಾ ಸಂಘದ ಅಧ್ಯಕ್ಷೆ ಡಿ.ಸಿ.ಮಂಜುಳಾ ತಿಳಿಸಿದರು.ಅವರು, ತಾಲೂಕು ಕಚೇರಿ ಮುಂಭಾಗದಲ್ಲಿ ಮಹಿಳಾ ಬಲವರ್ಧನೆ ಹಾಗೂ ಮಹಿಳೆಯರನ್ನು ಸಂಘಟಿಸಿ ದೌರ್ಜನ್ಯ ನಡೆಯುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು ಎಂಬ ದೃಷ್ಠಿಯಿಂದ ನೂತನವಾಗಿ ಕಿತ್ತೂರು ರಾಣಿಚನ್ನಮ್ಮ ಮಹಿಳಾ ಸಂಘವನ್ನು ಸ್ಥಾಪಿಸಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಂಘದ ಪದಾಧಿಕಾರಿಗಳಾದ ಎಂ.ಪ್ರಮೀಳಾ, ಪ್ರೇಮಾ ಮಂಜುನಾಥ, ಅಂಬಿಕಾ, ಶೋಭಾ ಜಗದೀಶ್, ಮಧುಮತಿ, ಸುಮಾ, ತಿಪ್ಪಮ್ಮ ಮುಂಖಡರಾದ ಕೆ.ಟಿ. ಶಿವಕುಮಾರ್, ನಾಗೇಂದ್ರಪ್ಪ, ಎಚ್. ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.------
ಪೋಟೋ:೧೮ಸಿಎಲ್ಕೆ೪ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಕಿತ್ತೂರು ರಾಣಿಚನ್ನಮ್ಮ ಮಹಿಳಾ ಸಂಘದಿಂದ ಮಹಿಳಾ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಿದರು.