ರಾಣಿ ಚನ್ನಮ್ಮ ಬ್ಯಾಂಕ್‌ಗೆ ಡಾ.ಪ್ರೀತಿ ಅಧ್ಯಕ್ಷೆ, ರೂಪಾ ಉಪಾಧ್ಯಕ್ಷೆ

| Published : Jan 10 2024, 01:45 AM IST

ರಾಣಿ ಚನ್ನಮ್ಮ ಬ್ಯಾಂಕ್‌ಗೆ ಡಾ.ಪ್ರೀತಿ ಅಧ್ಯಕ್ಷೆ, ರೂಪಾ ಉಪಾಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಡಾ.ಪ್ರೀತಿ ದೊಡವಾಡ, ಉಪಾಧ್ಯಕ್ಷರಾಗಿ ರೂಪಾ ಮುನವಳ್ಳಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಡಾ.ಪ್ರೀತಿ ದೊಡವಾಡ, ಉಪಾಧ್ಯಕ್ಷರಾಗಿ ರೂಪಾ ಮುನವಳ್ಳಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಆಶಾ ಕೋರೆ, ಸುವರ್ಣಲತಾ ಬನ್ಸೋಡೆ, ರಾಜೇಶ್ವರಿ ಕವಟಗಿಮಠ, ಅರುಂಧತಿ ಎ.ಪಟ್ಟೇದ, ದೀಪಾ ಎಸ್.ಮುನವಳ್ಳಿ, ಪೂಜಾ ಕೆ.ಸಾಧುನವರ, ಕೀರ್ತಿ ಜೆ.ಮೆಡಗುಡ್ಡ, ಸೀಮಾ ಪಿ. ಬಾಗೇವಾಡಿ, ಗಿರಿಜಾ ಎಂ.ಕೌಜಲಗಿ, ಡಾ.ಪುಷ್ಪಾ ವಿ.ಮಮದಾಪುರ ಹಾಗೂ ವೃತ್ತಿಪರ ನಿರ್ದೇಶಕರಾಗಿ ಜ್ಯೋತಿ ಮಠದ , ಬೀನಾ ಆಚಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಲಾವತಿ ಮನಗೂಳಿ ಘೋಷಿಸಿದರು.

ಕಳೆದ 27 ವರ್ಷಗಳಿಂದ ಅವಿರತವಾಗಿ ಸೇವೆಸಲ್ಲಿಸುತ್ತಿರುವ ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ಅಗಾಧವಾದ ಸಾಧನೆಯನ್ನು ಗೈದಿದೆ. ಇಂದು ಬೆಳಗಾವಿಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಸಹಕಾರಿ ಬ್ಯಾಂಕ್‌ಗಳಲ್ಲಿ ಪ್ರಚಲಿತ ಹೆಸರು ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ನಿ. ಬ್ಯಾಂಕ್‌ ಒಂದು. ಜಿಲ್ಲೆಯ ಏಕೈಕ ಮಹಿಳಾ ಬ್ಯಾಂಕ್ ಎಂಬ ಅಭಿಮಾನಕ್ಕೆ ಪಾತ್ರವಾಗಿರುವ ಬ್ಯಾಂಕ್ ಹಲವು ಹತ್ತು ಪ್ರಥಮ ಹೆಜ್ಜೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಭಾರತೀಯ ರಿಜರ್ವ್ ಬ್ಯಾಂಕಿನಿಂದ ಅನುಮತಿಯನ್ನು ಹೊಂದಿರುವ ಮಹಿಳಾ ಸಹಕಾರಿ ಬ್ಯಾಂಕ್ ಮಹಿಳೆಯರ ಸ್ವಾವಲಂಬಿ ಬದುಕನ್ನು ಪ್ರೇರೇಪಿಸಿದೆ. ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವ ಮೂಲಕ ಮಹಿಳೆಯರ ಆತ್ಮಸ್ಥೈರ್ಯ ಮತ್ತು ಬದುಕನ್ನು ಪ್ರೀತಿಸಲು ಪ್ರೇರೇಪಿಸಿದ ಶ್ರೇಯಸ್ಸು ರಾಣಿ ಚನ್ನಮ್ಮಾ ಮಹಿಳಾ ಬ್ಯಾಂಕ್‌ಗೆ ಸಲ್ಲುತ್ತದೆ. ಮಹಿಳೆಯರ ಬದುಕನ್ನು ಸದೃಢಗೊಳಿಸುವ ನಿಟ್ಟಿನಲ್ಲಿಯೇ ಅಸ್ತಿತ್ವಕ್ಕೆ ಬಂದದ್ದು ಮಹಿಳಾ ಬ್ಯಾಂಕಿನ್ ಹಿರಿಮೆಯಾಗಿದೆ. ನೂತನ ಪದಾಧಿಕಾರಗಳನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿನಂದಿಸಿದ್ದಾರೆ.