ಶಿರಸಂಗಿ ಪಿಕೆಪಿಎಸ್‌ಗೆ ಮಹಾಂತೇಶ ಅಧ್ಯಕ್ಷ, ಶಿವಾನಂದ ಉಪಾಧ್ಯಕ್ಷ

| Published : Jan 07 2025, 12:34 AM IST

ಶಿರಸಂಗಿ ಪಿಕೆಪಿಎಸ್‌ಗೆ ಮಹಾಂತೇಶ ಅಧ್ಯಕ್ಷ, ಶಿವಾನಂದ ಉಪಾಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

2025ರ ಜನವರಿ 03 ರಂದು ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಮಹಾಂತೇಶ ಶಿದ್ದಪ್ಪ ಪಂಚೆನ್ನವರ ಮತ್ತು ಉಪಾಧ್ಯಕ್ಷರಾಗಿ ಶಿವಾನಂದ ಶಿವಲಿಂಗಪ್ಪ ಹರ್ಲಾಪೂರ ನೂತನವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸವದತ್ತಿ ತಾಲೂಕಿನ ಶಿರಸಂಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಾಗಾರ ಮತಕ್ಷೇತ್ರದಿಂದ ಆಯ್ಕೆಯಾದ ಕಲ್ಲನಗೌಡ ಬಸನಗೌಡ ಪಾಟೀಲ, ನಾಗಪ್ಪ ಬಸಪ್ಪ ಹೂಲಿ, ಬಸಯ್ಯ ಚಂದ್ರಯ್ಯ ಶಿರಕೋಳಮಠ, ಮಲ್ಲಿಕಾರ್ಜುನ ಹನುಮಂತಪ್ಪ ಪೂಜಾರ, ಮಹಾಂತೇಶ ಶಿದ್ದಪ್ಪ ಪಂಚೆನವರ ಮತ್ತು ಸಾಮಾನ್ಯ ಸಾಲಗಾರರ ಮಹಿಳಾ ಮತ ಕ್ಷೇತ್ರದಿಂದ ಮಹಾದೇವಿ ನೀಲಪ್ಪ ಬೆನಕಟ್ಟಿ, ಮತ್ತು ಸುಮಿತ್ರಾ ಮಲ್ಲಿಕಾರ್ಜುನ ಗೊರವನಕೊಳ್ಳ ಹಾಗೂ ಸಾಮಾನ್ಯ ಸಾಲಗಾರರ ಹಿಂದುಳಿದ ಅ ವರ್ಗಕ್ಕೆ ಕಲ್ಲಪ್ಪ ಗದಿಗೆಪ್ಪ ಕಣವಿ ಮತ್ತು ಸಾಮಾನ್ಯ ಸಾಲಗಾರರ ಹಿಂದುಳಿದ ಬ ವರ್ಗಕ್ಕೆ ಶಿವಾನಂದ ಶಿ.ಹರ್ಲಾಪೂರ ಮತ್ತು ಸಾಮಾನ್ಯ ಸಾಲಗಾರರ ಪರಿಶಿಷ್ಟ ಪಂಗಡದಿಂದ ರಾಮಚಂದ್ರ ಗದಿಗೆಪ್ಪ ಪರ್ಶಿ ಮತ್ತು ಸಾಮಾನ್ಯ ಸಾಲಗಾರರ ಪರಿಶಿಷ್ಟ ಜಾತಿಯ ಕ್ಷೇತ್ರದಿಂದ ಲಕ್ಷ್ಮಣ ಮಹಾದೇವಪ್ಪ ಭಜಂತ್ರಿ ಮತ್ತು ಬಿನ್ ಸಾಲಗಾರ (ಸಾಲೇತರ) ಕ್ಷೇತ್ರದಿಂದ ಬಸಪ್ಪ ಸಹದೇವಪ್ಪ ಇದ್ಲಿ ಅವರು ಸಂಘದ ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

2025ರ ಜನವರಿ 03 ರಂದು ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಮಹಾಂತೇಶ ಶಿದ್ದಪ್ಪ ಪಂಚೆನ್ನವರ ಮತ್ತು ಉಪಾಧ್ಯಕ್ಷರಾಗಿ ಶಿವಾನಂದ ಶಿವಲಿಂಗಪ್ಪ ಹರ್ಲಾಪೂರ ನೂತನವಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ ಶಿರಸಂಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಉಳಿದ ನಿರ್ದೇಶಕರು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಮತ್ತು ಸಹಕಾರಿ ಸಂಘದಿಂದ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಂಘದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಸರ್ವ ಸದಸ್ಯರು ಶುಭಕೋರಿದ್ದಾರೆ.