ಸಾರಾಂಶ
ಕೆಲಸಬೇಕಾದ ಬಂದು ಕಾಲು ಹಿಡಿಯುತ್ತಾರೆ. ಕೆಲಸ ಆದಮೇಲೆ ಕಾಲು ಎಳೆಯುತ್ತಾರೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಜಿಪಂ ಮಾಜಿ ಸದಸ್ಯೆ ಶಾಂತಲಾ ರಾಜಣ್ಣ ಶಾಸಕರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಕೆಲಸಬೇಕಾದ ಬಂದು ಕಾಲು ಹಿಡಿಯುತ್ತಾರೆ. ಕೆಲಸ ಆದಮೇಲೆ ಕಾಲು ಎಳೆಯುತ್ತಾರೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಜಿಪಂ ಮಾಜಿ ಸದಸ್ಯೆ ಶಾಂತಲಾ ರಾಜಣ್ಣ ಶಾಸಕರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.ಸೋಮವಾರ ತಾಲೂಕಿನ ಚೇಳೂರಿನ ಕಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಸಚಿವ ರಾಜಣ್ಣ ಅವರ 75ನೇ ವರ್ಷದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ಸಮುದಾಯದವರಿಂದ ನಾನು ಶಾಸಕನಾದೆ ಎಂದು ಈ ಕ್ಷೇತ್ರದ ಶಾಸಕರು ಹೇಳುತ್ತಾರೆ. ನಾವೆಲ್ಲ ಸಹಕಾರ ಕೊಟ್ಟಿಲ್ಲ ಅಂಥ ಹೇಳಲಿ. ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಪಕ್ಷಕ್ಕೆ ಬಂದಾಗ ನಾವು ಎಲ್ಲರೂ ಸಹಕಾರ ಮಾಡಿದ್ದೇವೆ. ರಾಜೇಂದ್ರ ಸಹ ಸಹಕಾರ ಕೊಟ್ಟಿದ್ದರು. ನಾವು ಸಹ ನಮ್ಮ ಕಾರ್ಯಕರ್ತರಿಗೆ ಹೇಳಿದ್ದಕ್ಕೆ ಅವರು ಶಾಸಕರಾಗಿದ್ದಾರೆ. ಕೆಲವೊಂದು ಜನರಿಗೆ ಅಪಪ್ರಚಾರ ಮಾಡಿಕೊಂಡು ಓಡಾಡುವುದೇ ದೊಡ್ಡ ವೃತ್ತಿಯಾಗಿದೆ ಎಂದು ಶಾಸಕ ಶ್ರೀನಿವಾಸ್ ವಿರುದ್ಧ ಹರಿಹಾಯ್ದರು. ನಮಗೂ ನೋವಾಗಿದೆ. ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು ಎಂದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ವರ್ಷದ ಜನ್ಮ ದಿನದ ಅಂಗವಾಗಿ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಮೇ.13ರಂದು ತುಮಕೂರಿನಲ್ಲಿ ನಡೆಯಲಿದ್ದು, ಎಲ್ಲಾ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುತ್ತಿದ್ದು ಸಿಎಂ ಸಿದ್ದರಾಮಯ್ಯನವರು ಅಭಿನಂದನಾ ಗ್ರಂಥ ಬಿಡುಗಡೆ ಮಾಡುತ್ತಿದ್ದು ಜತೆಗೆ ಹಲವಾರು ಸಚಿವರು ಭಾಗಿಯಾಗುತಿದ್ದಾರೆ. ವಾಲ್ಮೀಕಿ ಸಮಾಜದವರು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸಹಕಾರಿ ಕ್ಷೇತ್ರಕ್ಕೆ ರಾಜಣ್ಣ ಅವರು ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ ಕೆಲಸ ಮಾಡುತ್ತಿದ್ದು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನ ಕೊಡುತ್ತಿದ್ದಾರೆ. ಇದರಿಂದ ಸಾಕಷ್ವು ರೈತರಿಗೆ ಅನುಕೂಲವಾಗಿದೆ. ರಾಜಣ್ಣ ಅವರು ಬೆಳ್ಳಾವಿ ಹಾಗೂ ಮಧುಗಿರಿ ಕ್ಷೇತ್ರದಲ್ಲಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಪ್ರತಿ ರೈತರಿಗೂ ಕೂಡ ಸಾಲ ಸೌಲಭ್ಯವನ್ನು ನೀಡಿದ್ದು ಇದರಿಂದ ರೈತರಿಗೆ ಅನುಕೂಲವಾಗಿದೆ. ಮೇ13ರಂದು ರಾಜಣ್ಣ ಅವರ ಅಮೃತ ಮಹೋತ್ಸವಕ್ಕೆ ದೊಡ್ಡ ಮಟ್ಟದಲ್ಲಿ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಸಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಹಾರನಹಳ್ಳಿ ಫ್ರಭಾಕರ್ , ಮಾಜಿ ಎಪಿಎಂಸಿ ಅಧ್ಯಕ್ಷ ಲಕ್ಷ್ಮೀರಂಗಯ್ಯ , ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ನರಸಿಂಹಮೂರ್ತಿ , ವಿ.ಎಸ್.ಎಸ್ ಎನ್ ನಿರ್ದೇಶಕ ನಾಗೇನಹಳ್ಳಿ ಯೋಗೀಶ್ ಮುಖಂಡರಾದ ಯಲ್ಲಪ್ಪ, ನರಸಿಂಹಮೂರ್ತಿ , ವಿಶ್ವ ,ತಿರ್ಥೇಶ್ ಸೋಮಣ್ಣ ,ಶಿವಣ್ಣ , ಸೌಭಾಗ್ಯಮ್ಮ ಹಾಗೂ ಸಮಜದ ಮುಖಂಡರು ಭಾಗವಹಿಸಿದ್ದರು.