ಸಾರಾಂಶ
ಮೈಸೂರು ವಿವಿ ದಲಿತ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಮಾನಸಗಂಗೋತ್ರಿ ಆವರಣದಲ್ಲಿ ಮೇಣದ ಬತ್ತಿ ಬೆಳಗಿಸಿ ಮೃತ ವಿದ್ಯಾರ್ಥಿನಿಗೆ ಶ್ರದ್ದಾಂಜಲಿ ಸಲ್ಲಿಸಿದರು
ಕನ್ನಡಪ್ರಭ ವಾರ್ತೆ ಮೈಸೂರು
ಕೊಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಪಿಯುಸಿಎಲ್ ಮತ್ತು ಪ್ರಗತಿಪರ ಸಂಘಟನೆಯವರು ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಶನಿವಾರ ಸಂಜೆ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದರು.ಈ ಘೋರಕೃತ್ಯ ಅಕ್ಷಮ್ಯ ಅಪರಾಧ ಎಸಗಿದಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಗಾಗಿ ಹಾಗೂ ತ್ವರಿತ ನ್ಯಾಯ ದೊರಕಿಸಲು ಅವರು ಒತ್ತಾಯಿಸಿದರು.
ವಿಶ್ರಾಂತ ಕುಲಪತಿ ಪ್ರೊ. ಶಬಿಹಾ ಭೂಮಿಗೌಡ, ಡಾ.ಇ. ರತಿರಾವ್, ಪ್ರೊ. ಪಂಡಿತಾರಾಧ್ಯ, ಪ್ರೊ.ಕೆ. ಕಾಳಚನ್ನೇಗೌಡ,ಪ್ರೊ. ಲತಾ ಕೆ. ಬಿದ್ದಪ್ಪ, ಪ್ರೊ.ಪಿ.ಎನ್. ಶ್ರೀದೇವಿ, ನಾ. ದಿವಾಕರ್, ಕೆ.ಆರ್. ಸುಮತಿ, ಎಂ.ಎನ್. ಸುಮನಾ, ಜಿ.ಎಸ್. ಸೀಮಾ ಮೊದಲಾದವರು ಇದ್ದರು.
ಶ್ರದ್ಧಾಂಜಲಿಮೈಸೂರು ವಿವಿ ದಲಿತ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಮಾನಸಗಂಗೋತ್ರಿ ಆವರಣದಲ್ಲಿ ಮೇಣದ ಬತ್ತಿ ಬೆಳಗಿಸಿ ಮೃತ ವಿದ್ಯಾರ್ಥಿನಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ಅಪ್ತಾಲ್ ಮೆಡಿಕಲ್ ರೆಪ್ಸ್ ಸಂಘಟನೆಯ ಸದಸ್ಯರು ಸಿದ್ದಪ್ಪ ಚೌಕದಿಂದ ನ್ಯಾಯಾಲಯದ ಮುಂಭಾಗದವರೆಗೆ ಮೇಣದ ಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.