ಸಾರಾಂಶ
ಗುಂಡ್ಲುಪೇಟೆ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಬಿಜೆಪಿ ಹಿರಿಯ ನಾಯಕ ಕೊಡಸೋಗೆ ಶಿವಬಸಪ್ಪ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿಬಿ) ನೂತನ ಅಧ್ಯಕ್ಷರಾಗಿ ಹಿರಿಯ ಬಿಜೆಪಿ ನಾಯಕ ಕೊಡಸೋಗೆ ಶಿವಬಸಪ್ಪ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಸಭಾಂಗಣದಲ್ಲಿ ಶುಕ್ರವಾರ ನಡೆದ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಿರಿಯ ಸಹಕಾರಿ ಧುರೀಣ ಕೊಡಸೋಗೆ ಶಿವಬಸಪ್ಪ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನದ ಚುನಾವಣೆಗೆ ಇತರೆ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳಾದ ಸಹಕಾರ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಅವರು ನೂತನ ಅಧ್ಯಕ್ಷರಾಗಿ ಕೊಡಸೋಗೆ ಶಿವಬಸಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.ನೂತನ ಅಧ್ಯಕ್ಷ ಕೊಡಸೋಗೆ ಶಿವಬಸಪ್ಪ ಮಾತನಾಡಿ ನನ್ನ ರಾಜಕೀಯ ಜೀವನ ಅರಂಭ ಈ ಪಿಎಲ್‌ಡಿ ಬ್ಯಾಂಕ್‌ನ ಮೂಲಕ ಆರಂಭಗೊಂಡು ೧೯೮೬ ರಿಂದ ಇಂದಿನ ತನಕ ಸಹಕಾರ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದೇನೆ ಎಂದರು. ಸಹಕಾರ ಕ್ಷೇತ್ರದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬಂದು ೧೯೮೫, ೧೯೮೬, ೨೦೧೫, ೨೦೦೭ ಮತ್ತು ಇಂದು (೨೦೨೫) ಅಧ್ಯಕ್ಷ ಸ್ಥಾನ ಐದು ಬಾರಿ ಅಧ್ಯಕ್ಷನಾಗಿದ್ದೇನೆ. ನಿರ್ದೇಶಕರಾಗಿ ೫೦ ವರ್ಷಗಳು ಕಳೆದಿದೆ. ಈಗ ಅಧ್ಯಕ್ಷ ಸ್ಥಾನ ಒದಗಿ ಬಂದಿದೆ ಇದು ಸಂತಸ ತಂದಿದೆ ಎಂದರು. ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಅಯ್ಕೆ ಮಾಡಲು ಸಹಕಾರ ನೀಡಿದ ಬ್ಯಾಂಕ್‌ನ ಎಲ್ಲ ನಿರ್ದೇಶಕರು ಹಾಗೂ ಸಹಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೂಸಯ್ಯ ಹಂಗಳ, ಮಾಜಿ ಅಧ್ಯಕ್ಷರಾದ ಎಚ್.ಎಂ.ಮಹೇಶ್, ಎನ್.ಮಲ್ಲೇಶ್, ಚನ್ನಮಲ್ಲೀಪುರ ಬಸವಣ್ಣ, ಎಸ್.ಎಂ. ಮಲ್ಲಿಕಾರ್ಜುನ, ಶ್ಯಾನಡ್ರಹಳ್ಳಿ, ಡಿ.ಮಹೇಶ್, ವಿ.ಬಸವರಾಜು, ಈಶ್ವರಪ್ಪ,ಡಿ.ಎಸ್. ಶಿವಸ್ವಾಮಿದೇಪಾಪುರ, ಜಿ.ಸಿ.ನಾಗೇಂದ್ರ, ಗೌರಮ್ಮ ಹಂಗಳಪುರ, ಚಿರಕನಹಳ್ಳಿ ದೇವಮ್ಮ, ಶಿವಣ್ಣ ಚಿರಕನಹಳ್ಳಿ, ನಾಮ ನಿರ್ದೇಶನ ಸದಸ್ಯ ಆರ್.ಶಂಭುಲಿಂಗಸ್ವಾಮಿ ಇತರರು ಇದ್ದರು. ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್, ಮುಖಂಡರಾದ ಎಚ್.ಎಂ.ಮಹದೇವಪ್ಪ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.