ಸಾರಾಂಶ
ಮಲೇಬೆನ್ನೂರು: ಮೊಬೈಲ್‌ಗಳಿಗೆ ದಾಸರಾಗಿರುವ ಇಂದಿನ ಯುವಜನತೆಗೆ ಲಿಂಗಾಯತ ಧರ್ಮದ ಅಧ್ಯಯನ ಶಿಬಿರಗಳು ಅಗತ್ಯವಿದೆ ಎಂದು ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಮಲೇಬೆನ್ನೂರು: ಮೊಬೈಲ್‌ಗಳಿಗೆ ದಾಸರಾಗಿರುವ ಇಂದಿನ ಯುವಜನತೆಗೆ ಲಿಂಗಾಯತ ಧರ್ಮದ ಅಧ್ಯಯನ ಶಿಬಿರಗಳು ಅಗತ್ಯವಿದೆ ಎಂದು ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.ಸಮೀಪದ ಹರಿಹರ ಬೈಪಾಸ್‌ನಲ್ಲಿನ ಕೃಷ್ಣಪ್ಪ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಾನವ ಬಂಧುತ್ವ ವೇದಿಕೆ ಹಮ್ಮಿಕೊಂಡ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಮತ್ತು ಸಂಘಟನೆ ಕುರಿತ ಅಧ್ಯಯನ ಶಿಬಿರ ಉಧ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಯುವಕರಿಗೆ ನೈತಿಕ ಶಕ್ತಿ, ಧಾರ್ಮಿಕ ಭಾವನೆ ಮೂಡಿಸಲು ಇಂಥಹ ಶಿಬಿರಗಳು ಸಹಕಾರಿಯಾಗುತ್ತವೆ, ವ್ಯಕ್ತಿಯ ಕಲ್ಯಾಣ, ನಾಡಿನ ಕಲ್ಯಾಣವೇ ಅಧ್ಯಯನ ಶಿಬಿರಗಳ ಧ್ಯೇಯವಾಗಬೇಕು ಆಗ ಜಾತಿ ಸಂಘರ್ಷ, ಬಡವ ಶ್ರೀಮಂತ, ಮೇಲು ಕೀಳು ಎಂಬ ಭಾವನೆ ದೂರವಾಗಿ ಸಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.ಸಮಾಜದಲ್ಲಿ ವೈದಿಕ ಪರಂಪರೆ ಹೆಚ್ಚಾಗಿದೆ, ಲಿಂಗಾಯತ ಸಂಘಟನೆ ಬರೀ ಸಂಖ್ಯೆಯಾಗಿ ರೂಪುಗೊಳ್ಳುತ್ತಿದೆ, ಆ ಧರ್ಮವನ್ನು ಪರಿಪಾಲನೆ ಮಾಡುವ ಲಿಂಗಾಯತರೇ ವೈರಿಗಳಾಗಿದ್ದಾರೆ. ಲಿಂಗಾಯತ ಎಂಬುದು ಬರೀ ಜಾತಿ ಅಲ್ಲ, ತತ್ವ, ಸಿದ್ಧಾಂತ, ನೀತಿ ಒಳಗೊಂಡ ಒಂದು ಧರ್ಮವಾಗಿದೆ ಎಂದು ಹೇಳಿದರು.
ಅತಿಥಿ ವೇದಿಕೆಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಬಸವಣ್ಣನವರ ಚಿಂತನೆಗಳು ದೇವರನ್ನು ಜನರ ಬಳಿ ಕರೆದೊಯ್ದವು, ಬಸವಣ್ಣನವರನ್ನು ಸರಿಯಾಗಿ ಅಭ್ಯಾಸ ಮಾಡದೇ ಜಾತಿಯಿಂದ ಗುರುತಿಸಲಾಗುತ್ತಿದೆ. ಪಠ್ಯಗಳು ಮತ್ತು ವಿಶ್ವವಿದ್ಯಾಲಯಗಳು ಬಸವಣ್ಣನವರ ಚಿಂತನೆಗಳನ್ನು ವಿಸ್ತರಿಸದೇ ದೇವರನ್ನು ಸಾಂಸ್ಥೀಕರಿಸಿ ಎಡವಿದ್ದಾವೆ ಎಂದು ಅಭಿಪ್ರಾಯಪಟ್ಟರು. ಡಾ.ಜೆ.ಎಸ್.ಪಾಟೀಲ್ ಉಪನ್ಯಾಸ ನೀಡಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಆವರಗೆರೆ ರುದ್ರಮುನಿ, ಹನಗವಾಡಿ ರುದ್ರಪ್ಪ, ರುದ್ರಗೌಡ ಗೋಪನಾಳ್, ಶಾಮನೂರು ಲಿಂಗರಾಜ್, ಅನಿಷ್ ಪಾಷಾ, ಮರುಳಸಿದ್ದಯ್ಯ, ಶಿವಮೂರ್ತಯ್ಯ, ಮುದೇಗೌಡ್ರ ನಾಗರಾಜ್, ಭರಮನಗೌಡ, ಎನ್‌ಎಸ್ ರಾಜು, ಪರಮೆಶ್ವರಪ್ಪ, ನಾಗರಾಜ್,ಯಶೋಧಾ, ಕುಸುಮಾ, ವಿಶ್ವೇಶ್ವರಯ್ಯ ಮತ್ತಿತರರಿದ್ದರು.