ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಒತ್ತಾಯ

| Published : May 21 2024, 12:39 AM IST

ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮೀಟರ್‌ ಬಡ್ಡಿ ದಂಧೆ ನಡೆಸುತ್ತ ಹಿಂಸೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮುಸ್ಲಿಂ ಸಮಾಜದ ಮುಖಂಡ ಶೆಫಿ ಬೆಣ್ಣಿ ಹಾಗೂ ಸಿಪಿಐ ಮುಖಂಡ ಗೈಬು ಜೈನ್‌ಖಾನ್‌ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮೀಟರ್‌ ಬಡ್ಡಿ ದಂಧೆ ನಡೆಸುತ್ತ ಹಿಂಸೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮುಸ್ಲಿಂ ಸಮಾಜದ ಮುಖಂಡ ಶೆಫಿ ಬೆಣ್ಣಿ ಹಾಗೂ ಸಿಪಿಐ ಮುಖಂಡ ಗೈಬು ಜೈನ್‌ಖಾನ್‌ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಕೆಲವರ ಬಡ್ಡಿ ಹಣ ವಸೂಲಾತಿ ದೌರ್ಜನ್ಯದಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಿ ತಾಲೂಕಿನಲ್ಲಿ ಯಥೇಚ್ಚವಾಗಿರುವ ಕಾನೂನು ಬಾಹಿರ ಬಡ್ಡಿ ದಂಧೆಗೆ ವಿರಾಮ ಹೇಳಬೇಕು ಎಂದು ಒತ್ತಾಯಿಸಿದರು. ರೇಶನ್ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಅಕ್ರಮ ಮರಳು ಸಾಗಾಣಿಕೆಯಂತಹ ಕಾನೂನು ಬಾಹಿರ ಚಟುವಟಿಕೆಯಲ್ಲಿಯೂ ಅವರು ತೊಡಗಿದ್ದಾರೆ. ಹಾಗಾಗಿ ಇವರನ್ನು ತಾಲೂಕಿನಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಸಿಪಿಐ ಮುಖಂಡ ಗೈಬು ಜೈನ್‌ಖಾನ್‌ ಮಾತನಾಡಿ, ಪಟ್ಟಣದಲ್ಲಿ ಬಡಕುಟುಂಗಳಿಗೆ ಬಡ್ಡಿ ಹಣ ನೀಡಿ ದುಪ್ಪಟ್ಟು ಹಣ ವಸೂಲಿ ಮಾಡುವ ದಂಧೆಗೆ ತಿಲಾಂಜಲಿ ಹೇಳಲು ಕಾನೂನು ಕ್ರಮ ಕೈಕೊಳ್ಳಬೇಕು. ಇದರಿಂದ ಹಲವಾರು ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳಿವೆ ಎಂದು ತಿಳಿಸಿದರು.ಈ ವೇಳೆ ಸುಭಾಸ ಘೋಡಕೆ, ಎಂ.ಎ.ಬೆಣ್ಣಿ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚೆನ್ನಬಸವರಾಜ ಕುಲಕರ್ಣಿ, ಕಮರು ಪಂಡಾರಿ ಹಾಗೂ ಇತರರು ಇದ್ದರು.

-----------ಕೊಲೆ ಆರೋಪಿ ವಿರುದ್ಧ ಸೂಕ್ತಕ್ರಮಕ್ಕೆ ಆಗ್ರಹ

ರಾಮದುರ್ಗ:

ಬೆಳ್ಳಂಬೆಳಗ್ಗೆಯೇ ಮನೆಗೆ ನುಗ್ಗಿ ರಾಜಾರೋಷವಾಗಿ ಕೊಲೆ ಮಾಡುತ್ತಾರೆ ಎಂದರೆ ಹೇಗೆ?. ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಬಗ್ಗೆ ಜನರು ವ್ಯಕ್ತಪಡಿಸುತ್ತಿದ್ದಾರೆ ಎಂದು ಗಂಗಾವತಿ ತಾಲೂಕು ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಹನಮೇಶ ಬಟಾರಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ಗಂಗಾಮತಸ್ಥರ ಸಮಾಜ ಸಂಘದಿಂದ ತಹಸೀಲ್ದಾರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನೇಹ ಹಿರೇಮಠ ಕೊಲೆಯಾಗಿ ಕೆಲವೇ ದಿನಗಳು ಕಳೆಯುವಷ್ಟರಲ್ಲಿ ಅಂಜಲಿ ಅಂಬಿಗೇರ ಹತ್ಯೆಯಾಗಿರುವುದು ದುರದುಷ್ಟಕರ ಸಂಗತಿ. ಇದು ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ ಎಂದರು.ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಅಂಜಲಿ ಕೊಲೆ ಖಂಡನೀಯ. ಶೀಘ್ರದಲ್ಲಿಯೇ ಆರೋಪಿ ಬಂಧಿಸಿ ಕಾನೂನು ಕ್ರಮ ಕೈಕೊಳ್ಳಬೇಕು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದ್ದು, ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.ಈ ವೇಳೆ ಬಿಜೆಪಿ ಅಧ್ಯಕ್ಷ ರಾಜೇಶ ಬೀಳಗಿ, ತಾಲೂಕು ಗಂಗಾಮತಸ್ಥರ ಸಮಾಜ ಸಂಘದ ಉಪಾಧ್ಯಕ್ಷ ಯಲ್ಲಪ್ಪ ಬಾರ್ಕಿ, ರವಿಂದ್ರ ಬಿಷ್ಟನ್ನವರ, ಉದಯ ಸುಣಗಾರ, ಪ್ರಧಾನ ಕಾರ್ಯದರ್ಶಿ ಫಕೀರಪ್ಪ ಹೊಳೆಪ್ಪನವರ ಕೋಶಾಧ್ಯಕ್ಷ ಗೋಪಾಲ ಸುಣಗಾರ ಹಾಗೂ ಇತತರು ಇದ್ದರು.