ಸಾರಾಂಶ
ರಾಜ್ಯದಲ್ಲಿ ಈಗಾಗಲೇ ಏಪ್ರಿಲ್ ತಿಂಗಳಲ್ಲಿ ನರೇಗಾ ಕೆಲಸ ಮಾಡುವಾಗ ಇಬ್ಬರು ಸಾವನ್ನಪ್ಪಿದ್ದು, ಸರ್ಕಾರ ಕೊಡುವ 2 ಲಕ್ಷ ಸಾಲುತ್ತಿಲ್ಲ.
ಹರಪನಹಳ್ಳಿ: ತಾಲೂಕಿನ ವಿವಿಧೆಡೆ ನರೇಗಾ ಕೂಲಿ ಕೆಲಸದ ಸ್ಥಳದಲ್ಲಿ ಬುಧವಾರ ಕೂಲಿ ಕಾರ್ಮಿಕರು ಕಾರ್ಮಿಕ ದಿನಾಚರಣೆ ಮಾಡುವುದರ ಜೊತೆಗೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.ನರೇಗಾದಡಿ ಕೆಲಸ ಮಾಡಿದ ಬಾಕಿ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಿಸಿಲಿನ ಪ್ರಮಾಣ ತೀವ್ರ ಹೆಚ್ಚಿದ್ದು, ನರೇಗಾ ಎರಡು ಹಂತದ ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯ ಮಾಡಿದ್ದು, ರದ್ದು ಪಡಿಸಿ ಒಂದೇ ಹಂತ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಈಗಾಗಲೇ ಏಪ್ರಿಲ್ ತಿಂಗಳಲ್ಲಿ ನರೇಗಾ ಕೆಲಸ ಮಾಡುವಾಗ ಇಬ್ಬರು ಸಾವನ್ನಪ್ಪಿದ್ದು, ಸರ್ಕಾರ ಕೊಡುವ 2 ಲಕ್ಷ ಸಾಲುತ್ತಿಲ್ಲ. ಪರಿಹಾರವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು. ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಒಮ್ಮೆ ಹಾಜರಾತಿ ಹಾಕಿದರೆ ಡಿಲೀಟ್ ಮಾಡಲು ಅವಕಾಶವಿಲ್ಲ. ಡಿಲಿಟ್ ಆಪ್ಶನ್ ಕೊಡಬೇಕು. ನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರ ಕಾರ್ಡ್ ಕೊಡಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಕುಂಚೂರು ಪಿಡಿಒ ಮೂಲಕ ಗ್ರಾಮೀಣಾಭಿವೃದ್ದಿ ಸಚಿವರಿಗೆ ಕಳಿಸಲಾಗಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಭಾಗ್ಯಮ್ಮ ತಿಳಿಸಿದ್ದಾರೆ.ನೆರ್ಕಿ ಕಾವ್ಯ, ನೆರ್ಕಿ ಮಾಲತೇಶ, ಬಾರ್ಕಿ ಮಂಜಪ್ಪ, ಬಾರ್ಕಿ ಗಂಗಮ್ಮ, ಬಿ.ಸೋಮಪ್ಪ, ಎನ್.ಬಸವರಾಜ, ಜಿ.ಮಂಗಳಾ, ಸುನಿತಾ, ಸವಿತಾ, ಸುಧಾ, ಹೊನ್ನಪ್ಪ, ರಾಜಪ್ಪ, ರೇಖಾ ಟಿ.ನಾಗರಾಜ ಇದ್ದರು.