ಸಾರಾಂಶ
ಬಿಜೆಪಿಯಿಂದ ಸ್ಥಳೀಯರಿಗೆ ಟಿಕೇಟ್ ನೀಡುವಂತೆ ಕೋರಿ ಹಲವು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ ಅವರಿಗೆ ಮನವಿ ಸಲ್ಲಿಸಿದರು.
ಸಂಡೂರು: ವಿಧಾನಸಭಾ ಕ್ಷೇತ್ರದ ಶಾಸಕರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು, ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಥಳೀಯರಿಗೆ ಟಿಕೇಟ್ ನೀಡುವಂತೆ ಕೋರಿ ಹಲವು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ, ಕುರೆಕುಪ್ಪ ಪುರಸಭೆ ಸದಸ್ಯರಾದ ತೋರಣಗಲ್ಲಿನ ಎನ್.ರಾಮಕೃಷ್ಣ, ಸಂಡೂರು ಮಂಡಲ ಪ್ರಧಾನ ಪ್ರಧಾನ ಕಾರ್ಯದರ್ಶಿ ಆರ್.ಟಿ. ರಘುನಾಥ್, ಕಾರ್ಯದರ್ಶಿ ಡಿ. ಪ್ರಹ್ಲಾದ್, ಸಂಡೂರು, ಚೋರುನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹುಚ್ಚೇನಹಳ್ಳಿಯ ಕೆ.ಮಲ್ಲಿಕಾರ್ಜುನ, ಅಂಕಮ್ಮನಹಾಳ್ ಗ್ರಾಮದ ಗಂಡಿ ಮಾರೆಪ್ಪ, ತಾರಾನಗರದ ಬಿ. ಮಂಜುನಾಥ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ. ಅಂತಾಪುರ ಗ್ರಾಮದ ವಿ.ಎಸ್. ಶಂಕರ್ ಹಾಗೂ ಚೋರುನೂರಿನ ಅಡಿವೆಪ್ಪ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್‌ನ ಸ್ಥಳೀಯ ಆಕಾಂಕ್ಷಿಗಳು, ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಸಂಡೂರು ಕ್ಷೇತ್ರದಲ್ಲಿ ೭೫೦೦೦ ಮತಗಳನ್ನು ಪಡೆದಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಥಳೀಯರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ದರೋಜಿ ರಮೇಶ್, ಕೊಂಚಿಗೇರಿ ಹರೀಶ್, ಚಿರಂಜೀವಿ ಉಪಸ್ಥಿತರಿದ್ದರು.