ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಅಂಬೇಡ್ಕರ್ ವೃತ್ತದಲ್ಲಿ ರೂಟ್ಸ್ ಪಾರ್ ಫ್ರೀಡಂ ಜೀವಿಕಾ ಸಂಘಟನೆಯಿಂದ ಜೀತದಾಳುಗಳಿಗೆ ಬಿಡುಗಡೆ ಪತ್ರ ಮತ್ತು ಸಮಗ್ರ ಪುನರ್ ವಸತಿ ವಿಳಂಬ ನೀತಿ ಖಂಡಿಸಿ ಜೀತದಾಳುಗಳಿಂದ ಬೃಹತ್ ಪ್ರತಿಭಟನೆ ಅಯೋಜನೆ ಮಾಡಲಾಗಿತ್ತು.ಇದೇ ವೇಳೆಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕಿ ಡಾ ರತ್ನಮ್ಮ ಮಾತನಾಡಿ ತಾಲೂಕಿನಲ್ಲಿ ೫೧೯ ಜೀತದಾಳುಗಳಿಗೆ ಜಿಲ್ಲಾ ಅಡಳಿತ ಬಿಡುಗಡೆ ಪತ್ರ ನೀಡಿಲ್ಲ ಅವರ ಸಮಗ್ರ ಪುನರ್ ವಸತಿ ಮಾಡಿಲ್ಲ ಜೀತದಾಳುಗಳಿಗೆ ಕೃಷಿ ಭೂಮಿ ನೀಡಿಲ್ಲ ಮಾಸಿಕ ೨ ಸಾವಿರ ನೀಡಲು ರಾಜ್ಯ ಸರ್ಕಾರ ಅದೇಶ ನೀಡಿದೆ ಅದರೆ ಅದೂ ಜಾರಿ ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಆಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಅವರು ಜಾಣ ಕುರುಡು ನೀತಿ ಅನುಸರಣೆ ಮಾಡಿ ನಮ್ಮ ಬದುಕಿಗೆ ಕಂಟಕರಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಬೇಡಿಕೆಗಳುಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಲ್ಲ ಸಂದ್ರ ಕೃಷ್ಣಪ್ಪ ಮಾತನಾಡಿ ತಮಟೆ ಕಲಾವಿದರಿಗೆ ಮಾಸನ ನೀಡಿಲ್ಲ,ಜೀತದಾಳುಗಳಿಗೆ ನೀವೇಶನ ನೀಡಬೇಕು ಅವರಿಗೆ ಶಾಶ್ವತ ಪರಿಹಾರ ನೀಡಬೇಕು ಸಾಗುವಳಿ ಚೀಟಿ ಅಡಿಯಲ್ಲಿ ಪ್ರತಿಯೊಬ್ಬರಿಗೂ ಭೂಮಿ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು.
ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಕಚೇರಿ ವರಿಗೂ ಸುಮಾರು ನಾಲ್ಕು ಕಿ,ಮೀ ಕಾಲ್ನಡಿಗೆ ಜಾಥ ಮಾಡಿ ತಹಸೀಲ್ದಾರ್ ಮಹೇಶ್ ಪತ್ರಿ ಅವರಿ ಮನವಿ ಪತ್ರ ನೀಡಿದರು, ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ನಿಮ್ಮ ಬೇಡಿಕೆಗಳು ನ್ಯಾಯುತವಾಗಿದೆ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸುವೆ ಎಂದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಚಂದ್ರಣ್ಣ, ತಾಲ್ಲೂಕು ಸಂಚಾಲಕ ,ಕಲ್ಯಾಣಕುಮಾರ್.ಗೋಪಿ ತಾಲ್ಲೂಕು ಒಕ್ಕೂಟ ಪಿಕೆ ಗಂಗಾಧರಪ್ಪ ಮಹಿಳಾ ಸಂಚಾಲಕಿ ತಿಪ್ಪಕ್ಕ,ಜೀತದಾಳುಗಳು ಭಾಗವಹಿಸಿದ್ದರು.