ಸಾರ್ವಜನಿಕ ರಸ್ತೆ ಜಾಗ ಒತ್ತುವರಿ ತೆರವಿಗೆ ಒತ್ತಾಯ

| Published : Mar 13 2024, 02:03 AM IST

ಸಾರ್ವಜನಿಕ ರಸ್ತೆ ಜಾಗ ಒತ್ತುವರಿ ತೆರವಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ೨ನೇ ವಾರ್ಡಿನ ಮನಿಯಾರ ಓಣಿಯಲ್ಲಿ ಸಾರ್ವಜನಿಕ ರಸ್ತೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಪಂ ಕಚೇರಿ ಮುಂದೆ ವಾರ್ಡಿನ ನಿವಾಸಿಗಳು ಧರಣಿ ಸತ್ಯಾಗ್ರಹ ನಡೆಸಿದರು.

ನಿವಾಸಿಗಳಿಂದ ಧರಣಿ ಸತ್ಯಾಗ್ರಹ, ಸ್ಥಳಕ್ಕೆ ತಹಸೀಲ್ದಾರ ಭೇಟಿ, ಮನವೊಲಿಕೆ ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪಟ್ಟಣದ ೨ನೇ ವಾರ್ಡಿನ ಮನಿಯಾರ ಓಣಿಯಲ್ಲಿ ಸಾರ್ವಜನಿಕ ರಸ್ತೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಪಂ ಕಚೇರಿ ಮುಂದೆ ವಾರ್ಡಿನ ನಿವಾಸಿಗಳು ಧರಣಿ ಸತ್ಯಾಗ್ರಹ ನಡೆಸಿದರು.

೨ನೇ ವಾರ್ಡಿನ ಸದಸ್ಯ ಅಂದಯ್ಯ ಕಳ್ಳಿಮಠ ಮಾತನಾಡಿ, ಸುಮಾರು ವರ್ಷಗಳಿಂದ ಪಟ್ಟಣದ ೨ನೇ ವಾರ್ಡಿನ ಮನಿಯಾರ ಓಣಿಯಲ್ಲಿ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ ಇದರಿಂದ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ತೀವ್ರ ಅನಾನುಕೂಲವಾಗಿದ್ದು, ಇದನ್ನು ತೆರವುಗೊಳಿಸುವಂತೆ ಕಳೆದ ಐದಾರು ತಿಂಗಳಿಂದ ಪಪಂಗೆ ನಿವಾಸಿಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಿವಾಸಿಗಳ ಜೊತೆ ಇಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗಿದೆ. ಆದರೆ ಪ್ರಭಾವಿಗಳ ಒತ್ತಡದಿಂದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

೧೫ನೇ ಪಪಂ ಸದಸ್ಯ ವಸಂತ ಭಾವಿಮನಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ಸ್ಥಳಕ್ಕೆ ತಹಸೀಲ್ದಾರ ಭೇಟಿ:

ಪಪಂ ತಾಲೂಕಾಡಳಿತಾಧಿಕಾರಿ ಹಾಗೂ ತಹಸೀಲ್ದಾರ ಬಸವರಾಜ ತೆನ್ನೆಳ್ಳಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ನನಗೆ ಒಂದು ತಿಂಗಳವರೆಗೆ ಸಮಯ ಕೊಡಿ ರಸ್ತೆ ಜಾಗ ಒತ್ತುವರಿಯಾದ್ದರೆ ಅದನ್ನು ಸರ್ವೆ ಮಾಡಿಸಿ ನ್ಯಾಯ ದೊರಕಿಸಿ ಕೊಡುವ ಕಾರ್ಯ ಮಾಡುತ್ತೇನೆ. ಹಾಗಾಗಿ ಧರಣಿ ಸತ್ಯಾಗ್ರಹ ವಾಪಸ್ ತಗೆದುಕೊಳ್ಳುವಂತೆ ಪ್ರತಿಭಟನಾಕಾರರ ಮನವೊಲಿಸಿದರು.

ಇದಕ್ಕೆ ಒಪ್ಪಿದ ಧರಣಿನಿರತರು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ತಹಸೀಲ್ದಾರ ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ಧರಣಿ ವಾಪಸ್ ಪಡೆದರು.

ಈ ಸಂದರ್ಭದಲ್ಲಿ ವಾರ್ಡಿನ ನಿವಾಸಿಗಳಾದ ಕಳಕಪ್ಪ ಹೂಗಾರ, ಮೆಹಮೂದ ಕನಕಗಿರಿ, ಅಲ್ಲಾಸಾಬ ಮನಿಯಾರ, ಯಲ್ಲಪ್ಪ ದೂರ್ಪಾತಿ, ದಾದಪ್ಪ ಕಲಾಲ, ಚಂದ್ರಪ್ಪ ಮಾರನಾಳ, ನೂರಜಾನಬೀ ರೇವಡಿ, ಯಲ್ಲಮ್ಮ ವಜ್ರಬಂಡಿ, ಬಸಮ್ಮ ವಾಲ್ಮೀಕಿ, ಹನುಮಂತಪ್ಪ ಎಮ್ಮಿಗುಡ್ಡದ, ಬುಡನಸಾಬ ಮನಿಯಾರ, ಮಂಜು, ರಾಜು, ಮಾರುತಿ ಸೂಡಿ ಮತ್ತಿತರರಿದ್ದರು.