ನಿವಾಸಿಗಳಿಗೆ ನೀಡಿದ ನೋಟಿಸ್ ಹಿಂಪಡೆಯಲು ಒತ್ತಾಯ

| Published : Dec 15 2023, 01:30 AM IST

ನಿವಾಸಿಗಳಿಗೆ ನೀಡಿದ ನೋಟಿಸ್ ಹಿಂಪಡೆಯಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟ್‌ ಚಂದ್ರಮಾವಿನಕೊಪ್ಪಲು ಬಡಾವಣೆಯು ಬಫರ್‌ ಝೋನ್‌ನಲ್ಲಿ ಬರುವುದರಿಂದ ಲೈಸೆನ್ಸ್ ಕೊಡಲು ಸಾಧ್ಯವಿಲ್ಲ. ಸದ್ಯ ಅಗತ್ಯ ಹಣಕಾಸಿನ ಅಲಭ್ಯತೆಯಿಂದ ತಡೆಗೋಡೆ ನಿರ್ಮಿಸಲು ಆಗುವುದಿಲ್ಲ. ಈ ಭಾಗದಲ್ಲಿ ಒತ್ತುವರಿ ಮಾಡಿಕೊಂಡಿರುವ ವಿಚಾರವಾಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಸಾರ್ವಜನಿಕರಿಗೆ ನೋಟೀಸ್ ನೀಡಿ ಎಚ್ಚರಿಸಲಾಗಿದೆ - ಎಚ್.ಕೆ.ನಾಗಪ್ಪ, ಪೌರಾಯುಕ್ತ, ಸಾಗರ

ಸಾಗರ: ನಗರಸಭೆಯಿಂದ ಇತ್ತೀಚೆಗೆ ಪಟ್ಟಣದ ವರದಾನದಿ ಪಕ್ಕದ ಚಂದ್ರಮಾವಿನಕೊಪ್ಪಲು ಬಡಾವಣೆ ನಿವಾಸಿಗಳಿಗೆ ನೋಟೀಸ್ ನೀಡಿ, ಯಾರೂ ಮನೆ ಕಟ್ಟಬಾರದು, ರಿಪೇರಿ ಮಾಡಬಾರದು ಮತ್ತು ಮನೆ ಕಟ್ಟಬಾರದು ಎಂದು ತಿಳಿಸಲಾಗಿದೆ. ಈ ಹಿನ್ನೆಲೆ ಭಯಗೊಂಡ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಸಮಸ್ಯೆಗೆ ಪರಿಹಾರ ಕೊಡುವಂತೆ ಪೌರಾಯುಕ್ತ ನಾಗಪ್ಪನವರಿಗೆ ಮನವಿ ಸಲ್ಲಿಸಿದರು.

ಚಂದ್ರಮಾವಿನಕೊಪ್ಪಲಿನಲ್ಲಿ ಹಾಲಿ ವಾಸವಿರುವ ಮನೆಗಳಿಗೆ ಸುಮರು 59-60 ವರ್ಷಗಳ ಹಿಂದೆಯೇ ಅಂದಿನ ಪುರಸಭೆ ವತಿಯಿಂದ ಹಕ್ಕುಪತ್ರ ನೀಡಿದ್ದು, ಈವರೆಗೆ ಕಂದಾಯ ಕಟ್ಟಿಕೊಂಡು ಬರಲಾಗುತ್ತಿದೆ. ಎಲ್ಲರೂ ತಮ್ಮ ಸ್ವಂತ ಶಕ್ತಿಯಿಂದ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ಯಾರೊಬ್ಬರೂ ಒತ್ತುವರಿ ಮಾಡಿಕೊಂಡಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ನೋಟೀಸ್ ನೀಡಿರುವುದು ಎಲ್ಲರಿಗೂ ಗಾಭರಿಯಾಗಿದೆ. ಕೂಡಲೇ ಅಧಿಕಾರಿಗಳು ಸ್ಪಷ್ಟೀಕರಣ ನೀಡಬೇಕು. ಶಿವಮೊಗ್ಗದಲ್ಲಿ ತುಂಗಾ ನದಿಗೆ 3 ಕಿ.ಮೀ. ತಡೆಗೋಡೆ ನಿರ್ಮಿಸಿದಂತೆಯೇ ಇಲ್ಲೂ ಸಿಮೆಂಟ್ ತಡೆಗೋಡೆ ನಿರ್ಮಿಸಿ, ನಿವಾಸಿಗಳಿಗೆ ಸುರಕ್ಷಿತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಒತ್ತಾಯಿಸಿದರು.

- - -ಟಾಪ್‌ ಕೋಟ್‌ ಚಂದ್ರಮಾವಿನಕೊಪ್ಪಲು ಬಡಾವಣೆಯು ಬಫರ್‌ ಝೋನ್‌ನಲ್ಲಿ ಬರುವುದರಿಂದ ಲೈಸೆನ್ಸ್ ಕೊಡಲು ಸಾಧ್ಯವಿಲ್ಲ. ಸದ್ಯ ಅಗತ್ಯ ಹಣಕಾಸಿನ ಅಲಭ್ಯತೆಯಿಂದ ತಡೆಗೋಡೆ ನಿರ್ಮಿಸಲು ಆಗುವುದಿಲ್ಲ. ಈ ಭಾಗದಲ್ಲಿ ಒತ್ತುವರಿ ಮಾಡಿಕೊಂಡಿರುವ ವಿಚಾರವಾಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಸಾರ್ವಜನಿಕರಿಗೆ ನೋಟೀಸ್ ನೀಡಿ ಎಚ್ಚರಿಸಲಾಗಿದೆ

- ಎಚ್.ಕೆ.ನಾಗಪ್ಪ, ಪೌರಾಯುಕ್ತ, ಸಾಗರ

- - -

-14ಕೆ.ಎಸ್.ಎ.ಜಿ.1: