ದೇವನಹಳ್ಳಿ ರೈತರ ಜಮೀನು ಬಲವಂತದ ಸ್ವಾಧೀನ ಕೈಬಿಡಬೇಕು: ವಿನಯಕುಮಾರ

| Published : Jul 05 2025, 12:18 AM IST

ದೇವನಹಳ್ಳಿ ರೈತರ ಜಮೀನು ಬಲವಂತದ ಸ್ವಾಧೀನ ಕೈಬಿಡಬೇಕು: ವಿನಯಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಬಲವಂತವಾಗಿ ಭೂ ಸ್ವಾಧೀನ ಮಾಡಬಾರದು ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಸ್ವನಿರ್ಧಾರ ಕೈಗೊಳ್ಳುವವರೆಗೂ ಕಾಯುವಂತೆ ಸಲಹೆ - - -

ದಾವಣಗೆರೆ: ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಬಲವಂತವಾಗಿ ಭೂ ಸ್ವಾಧೀನ ಮಾಡಬಾರದು ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೈಗಾರಿಕೆ ಬೆಳೆದರೆ ಅಭಿವೃದ್ಧಿಯಾಗುತ್ತದೆ. ಕೈಗಾರಿಕಾ ಉದ್ದೇಶಕ್ಕೆ ಯೋಜನೆ ಮಾಡುವುದು ತಪ್ಪಲ್ಲ. ಆದರೆ, ರಾಜ್ಯ ಸರ್ಕಾರ ರೈತರ ಭೂಮಿಯನ್ನು ಬಲವಂತವಾಗಿ ಭೂ ಸ್ವಾಧೀನ ಮಾಡಬಾರದು. ರೈತರೇ ಸ್ವಯಂಪ್ರೇರಿತವಾಗಿ ಭೂಮಿ ಕೊಡುವ ನಿರ್ಧಾರ ಕೈಗೊಳ್ಳುವವರೆಗೂ ಭೂ ಸ್ವಾಧೀನ ಕಾರ್ಯ ಹಿಂಪಡೆಯಬೇಕು ಎಂದಿದ್ದಾರೆ.

ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ ಹಾಗೂ ಚನ್ನರಾಯಪಟ್ಟಣದ ಮಧ್ಯೆ ಬರುವ 1777 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿ ಭೂ ಸ್ವಾಧೀನಪಡಿಸಿಕೊಳ್ಳಲು ನೋಟಿಸ್ ನೀಡಿದೆ. ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಏರೋ ಸ್ಪೇಸ್‌ಗಾಗಿ ಸಮೀಪದಲ್ಲಿ ಭೂಮಿ ಇರುವ ಕಾರಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ. ಆದರೆ, ರೈತರನ್ನು ಒಕ್ಕಲೆಬ್ಬಿಸಿ, ಬಲವಂತದಿಂದ ಭೂ ಸ್ವಾಧೀನಪಡಿಸಿಕೊಂಡಿರುವುದು ಘೋರ ಅನ್ಯಾಯ. ಇಂತಹ ಕ್ರಮದಿಂದ ಸರ್ಕಾರದ ಮೇಲಿರುವ ವಿಶ್ವಾಸ ಕಳೆದು ಹೋಗುತ್ತದೆ ಎಂದಿದ್ದಾರೆ.

ಭೂ ಸ್ವಾಧೀನ ವಿರೋಧಿಸಿ, ದೇವನಹಳ್ಳಿ ಸಮೀಪ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿಯೂ ಹೋರಾಟ ನಡೆಯುತ್ತಿದೆ. ಇದಕ್ಕೆ ಎಲ್ಲರ ಬೆಂಬಲವೂ ವ್ಯಕ್ತವಾಗುತ್ತಿದೆ. ಭೂ ಸ್ವಾಧೀನ ಬಳಿಕ ಪರಿಹಾರ, ಪುನರ್ವಸತಿ ಕಲ್ಪಿಸುವ ಬಗ್ಗೆ ಅನೇಕ ಪ್ರಕರಣಗಳಲ್ಲಿ ಗಮನಿಸಿದ್ದೇವೆ. ಸಮರ್ಪಕ ಅನುಷ್ಠಾನ ತುಂಬಾ ಕಡಿಮೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಮಣಿದು ರೈತರ ಜಮೀನು ಕಸಿದಲ್ಲಿ ಸಮಾಜದಲ್ಲಿ ಅಸಮಾನತೆ ಹುಟ್ಟಿಕೊಳ್ಳುತ್ತದೆ. ಸಂತ್ರಸ್ಥ ಜಮೀನು ಮಾಲೀಕರು, ಕುಟುಂಬಗಳು ಯಾರ ಬಳಿ ನೋವು, ಸಂಕಟ ಹೇಳಿಕೊಳ್ಳಬೇಕು ಎಂದಿರುವ ವಿನಯಕುಮಾರ ಅವರು, ಜಮೀನು ಭೂ ಸ್ವಾಧೀನ ದೊಡ್ಡ ತಪ್ಪು ಎಂದಿದ್ದಾರೆ.

- - -

-4ಕೆಡಿವಿಜಿ1.ಜೆಪಿಜಿ: ಜಿ.ಬಿ.ವಿನಯಕುಮಾರ