ಸಾಣಾಪುರದಲ್ಲಿ ವಿದೇಶಿಯರಿಂದ ಸಂಭ್ರಮ ಹೋಳಿ

| Published : Mar 16 2025, 01:45 AM IST

ಸಾಣಾಪುರದಲ್ಲಿ ವಿದೇಶಿಯರಿಂದ ಸಂಭ್ರಮ ಹೋಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಣಾಪುರ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಿದೇಶಿ ಮಹಿಳೆ ಸೇರಿ ಇಬ್ಬರ ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣದಿಂದ ವಿದೇಶಿಗರು ಆನೆಗೊಂದಿ, ಹಂಪಿ, ಸಾಣಾಪುರ ವ್ಯಾಪ್ತಿಯ ಪ್ರದೇಶದಿಂದ ಕಾಲ್ಕಿತ್ತಿದ್ದರು. ಆದರೆ, ಇದೀಗ ಪೊಲೀಸರು ಸೂಕ್ತ ಬಂದೋಬಸ್ತ್‌ ಒದಗಿಸಿದ ಪರಿಣಾಮ ಶನಿವಾರ ಸಾಣಾಪುರ, ಕಿಷ್ಕಿಂದೆ, ಹನುಮನಹಳ್ಳಿ, ಜಂಗ್ಲಿ, ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದೇಶಿಗರು ಸಂಭ್ರಮದಿಂದ ಬಣ್ಣದೋಕುಳಿಯಲ್ಲಿ ಪಾಲ್ಗೊಂಡು ಹೋಳಿ ಆಡಿದರು.

ಗಂಗಾವತಿ:

ನಗರ ಪ್ರದೇಶ ಹಾಗೂ ಸಾಣಾಪುರ ವ್ಯಾಪ್ತಿಯಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲಾಯಿತು.

ಸಾಣಾಪುರದಲ್ಲಿ ವಿದೇಶಿಗರು ಬಣ್ಣದೋಕುಳಿಯಲ್ಲಿ ಮಿಂದೆದ್ದ ಸಂಭ್ರಮಿಸಿದರೆ, ತಾಲೂಕು ಕ್ರೀಡಾಂಗಣದಲ್ಲಿ 1000ಕ್ಕೂ ಹೆಚ್ಚು ಜನರು ಪಾಲ್ಗೊಂಡು ಪರಿಸ್ಪರ ಬಣ್ಣ ಎರಚಿಕೊಂಡರು.

ಸಾಣಾಪುರ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಿದೇಶಿ ಮಹಿಳೆ ಸೇರಿ ಇಬ್ಬರ ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣದಿಂದ ವಿದೇಶಿಗರು ಆನೆಗೊಂದಿ, ಹಂಪಿ, ಸಾಣಾಪುರ ವ್ಯಾಪ್ತಿಯ ಪ್ರದೇಶದಿಂದ ಕಾಲ್ಕಿತ್ತಿದ್ದರು. ಆದರೆ, ಇದೀಗ ಪೊಲೀಸರು ಸೂಕ್ತ ಬಂದೋಬಸ್ತ್‌ ಒದಗಿಸಿದ ಪರಿಣಾಮ ಶನಿವಾರ ಸಾಣಾಪುರ, ಕಿಷ್ಕಿಂದೆ, ಹನುಮನಹಳ್ಳಿ, ಜಂಗ್ಲಿ, ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದೇಶಿಗರು ಸಂಭ್ರಮದಿಂದ ಬಣ್ಣದೋಕುಳಿಯಲ್ಲಿ ಪಾಲ್ಗೊಂಡು ಹೋಳಿ ಆಡಿದರು.

ತಾಲೂಕು ಕ್ರೀಡಾಂಗಣ:

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಹೋಳಿ ಸಂಭ್ರಮಾಚರಣೆಯಲ್ಲಿ ಸಹಸ್ರರಾರು ಜನರು ಪಾಲ್ಗೊಂಡು ಹೋಳಿ ಆಚರಿಸಿದರು. ಅಬಾಲವೃದ್ಧರಾಗಿ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ಯುವಕರು, ಮಕ್ಕಳು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸಿದ್ದರಿಂದ ಶಾಂತಿಯುತವಾಗಿ ಹಬ್ಬ ಆಚರಿಸಲಾಯಿತು. ನಗರದ ಸತ್ಯಾನಾರಾಯಣ ಪೇಟೆ, ಕುವೆಂಪು ನಗರ, ಸಿದ್ದಾಪುರ ಬಡಾವಣೆ, ವಿವೇಕಾನಂದ ಕಾಲನಿ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ನಾಗರಿಕರು ಹೋಳಿ ಆಚರಿಸಿದರು.