ತಾಲೂಕಿನ ಮಳವತ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಮಾಜಿಕ ಅರಣ್ಯ ವಲಯದ ಕಾರ್ಯಾಲಯ ಹಾಗೂ ಸಿಬ್ಬಂದಿ ವಸತಿಗೃಹವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ಸಾಮಾಜಿಕ ಅರಣ್ಯ ವಲಯದ ಕಾರ್ಯಾಲಯ, ಸಿಬ್ಬಂದಿ ವಸತಿಗೃಹ ಉದ್ಘಾಟನೆಕನ್ನಡಪ್ರಭ ವಾರ್ತೆ ಸಿದ್ದಾಪುರ
ತಾಲೂಕಿನ ಮಳವತ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಮಾಜಿಕ ಅರಣ್ಯ ವಲಯದ ಕಾರ್ಯಾಲಯ ಹಾಗೂ ಸಿಬ್ಬಂದಿ ವಸತಿಗೃಹವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.ಕಾರ್ಯಾಲಯದ ಆವರಣದಲ್ಲಿ ಗಿಡ ನೆಟ್ಟು, ಮಕ್ಕಳಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಜಾಗೃತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕರು, ಸರ್ಕಾರಿ ಕಾಮಗಾರಿಗಳೆಂದರೆ ಕಳಪೆ ಎಂಬ ಉದಾಹರಣೆಗಳ ಮಧ್ಯೆ ಇತ್ತೀಚಿನ ದಿನಗಳಲ್ಲಿ ಗುತ್ತಿಗೆದಾರರು ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ನೂತನ ಕಚೇರಿಯ ಸೌಲಭ್ಯವನ್ನು ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಲೆನಾಡು ಸೇರಿದಂತೆ ರಾಜ್ಯದ ವಿವಿಧೆಡೆ ಅರಣ್ಯ ಇಲಾಖೆ ಲಕ್ಷಾಂತರ ಗಿಡಗಳನ್ನು ನೆಟ್ಟು ಅರಣ್ಯೀಕರಣಕ್ಕೆ ಒತ್ತು ನೀಡಿದೆ. ಗೂಗಲ್ ಮ್ಯಾಪ್‌ನಲ್ಲಿ ನೋಡಿದರೂ ಹಿಂದೆ ಬಯಲಾಗಿದ್ದ ಪ್ರದೇಶಗಳು ಇಂದು ಹಸಿರಾಗಿ ಕಂಗೊಳಿಸುತ್ತಿವೆ. ಈ ಪ್ರಗತಿ ಬರೀ ಇಲಾಖೆಯದ್ದಲ್ಲ, ಸಾರ್ವಜನಿಕರ ಸಹಭಾಗಿತ್ವದಿಂದ ಸಾಧ್ಯವಾಗಿದೆ. ಅನಿವಾರ್ಯವಾಗಿ ಒಂದು ಮರ ಕಡಿದರೆ, ಅದರ ಜಾಗದಲ್ಲಿ ಹತ್ತಾರು ಗಿಡಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಿಂದೆ ಜಿಪಂ ಸದಸ್ಯನಾಗಿದ್ದಾಗ ಕಾಫಿ, ರಬ್ಬರ್ ಹಾಗೂ ಗಂಧದ ಗಿಡ ಬೆಳೆಯಲು ಉತ್ತೇಜನ ನೀಡಿದ್ದೆ. ತೋಟ ಅಥವಾ ಮನೆ ಬದಿಯಲ್ಲಿ ಗಂಧದ ಗಿಡಗಳನ್ನು ಬೆಳೆಸುವುದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ದೊಡ್ಡ ಮಟ್ಟದ ಆರ್ಥಿಕ ಭದ್ರತೆ ಸಿಗುತ್ತದೆ. ಆಸಕ್ತ ರೈತರು ಇಲಾಖೆಯಿಂದ ಉಚಿತ ಸಸಿಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಸಿಸಿಎಫ್ ಟಿ. ಹೀರಾಲಾಲ್, ಡಿಸಿಎಫ್ ಸಂದೀಪ್ ಸೂರ್ಯವಂಶಿ, ಮಂಜುನಾಥ ನಾವಿ ಹಾಗೂ ಆರ್.ಎಫ್.ಓ ಉಷಾ ಬೈಂದೂರು ಉಪಸ್ಥಿತರಿದ್ದರು.