ಸೂಕ್ಷ್ಮ-ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ

| Published : Apr 26 2024, 12:45 AM IST

ಸೂಕ್ಷ್ಮ-ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚುಣವಣೆಯಲ್ಲಿ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಾಡಾನೆ ಹಾಗೂ ವನ್ಯಪ್ರಾಣಿಗಳಿಂದ ಯಾವುದೇ ಹಾನಿಯಾಗದಂತೆ ಸೂಕ್ತ ಕ್ರಮವಹಿಸುವ ನಿಟ್ಟಿನಲ್ಲಿ ಮತಗಟ್ಟೆಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚುಣವಣೆಯಲ್ಲಿ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಾಡಾನೆ ಹಾಗೂ ವನ್ಯಪ್ರಾಣಿಗಳಿಂದ ಯಾವುದೇ ಹಾನಿಯಾಗದಂತೆ ಸೂಕ್ತ ಕ್ರಮವಹಿಸುವ ನಿಟ್ಟಿನಲ್ಲಿ ಮತಗಟ್ಟೆಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಚುನಾವಣೆ ಪೂರ್ವ ಅವಧಿ ಹಾಗೂ ಚುನಾವಣೆ ದಿನದಂದು ಪ್ರಾಣಿಗಳ ಹಾವಳಿ ಇರುವ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಸಾರ್ವಜನಿಕರು ಓಡಾಡುವ ಸಾಧ್ಯತೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಸ್ತ್ರ ಸಜ್ಜಿತ ಸಿಬ್ಬಂದಿ, ವಾಹನ ಮತ್ತು ಅವಶ್ಯಕ ಪರಿಕರಗಳ ಸಮೇತ ಗಸ್ತು ತಿರುಗಿ ಸಾರ್ವಜನಿಕರಿಗೆ ಕಾಡಾನೆ ಹಾಗೂ ಸಾರ್ವಜನಿಕರು ಎಚ್ಚರವಾಗಿರುವಂತೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದು ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರಮೇಶ್ ಬಾಬು ತಿಳಿಸಿದ್ದಾರೆ.ಸಾರ್ವಜನಿಕರು, ಚುನಾವಣಾ ಅಧಿಕಾರಿಗಳು, ವನ್ಯಪ್ರಾಣಿಗಳು ಹಾಗೂ ಕಾಡಾನೆಗಳು ಕಂಡು ಬಂದಲ್ಲಿ ಸ್ಥಳೀಯ ಸಮೀಪದ ಅರಣ್ಯ ಕಚೇರಿಗಳಿಗೆ ತುರ್ತಾಗಿ ಮಾಹಿತಿ ಒದಗಿಸಲು ಕೋರಿದೆ. ಆನೆ ಕಾರ್ಯಪಡೆ ತಂಡಗಳು, 24/7 ಕರ್ತವ್ಯ ನಿರ್ವಹಿಸುತ್ತಿದ್ದು, ಮೂಡಿಗೆರೆ, ಆಲ್ದೂರು, ಮುತ್ತೋಡಿ ಹಾಗೂ ಚಿಕ್ಕಮಗಳೂರು ವಲಯಗಳಲ್ಲಿ ಲೋಕಸಭಾ ಚುನಾವಣೆ ಗೆ ಯಾವುದೇ ಅಡಚಣೆ ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ 08262-238800, ಮೊ. ಸಂಖ್ಯೆ 94819 90802, ಚಿಕ್ಕಮಗಳೂರು ಜಿಲ್ಲಾ ಚುನಾವಣಾ ನಿಯಂತ್ರಣ ವಿಭಾಗ ದೂ. ಸಂಖ್ಯೆ 1950, ಚಿಕ್ಕಮಗಳೂರು ತಾಲೂಕು ಚುನಾವಣಾ ನಿಯಂತ್ರಣ ವಿಭಾಗ ದೂ.ಸಂ. 18004256130, ಮೂಡಿಗೆರೆ ತಾಲೂಕು ಚುನಾವಣಾ ನಿಯಂತ್ರಣ ವಿಭಾಗ ದೂ.ಸಂ. 18004256114, ಚಿಕ್ಕಮಗಳೂರು ವಲಯ ದೂ.ಸಂ. 08262-238808, ಮೊ.ಸಂಖ್ಯೆ 9181990807, ಮುತ್ತೋಡಿ ವಲಯ ದೂ.ಸಂ. 08262-248395, ಮೊ.ಸಂ. . 9481990811, ಆಲ್ದೂರು ವಲಯ ದೂ.ಸಂ. 08262-250007, ಮೊಬೈಲ್‌ ಸಂಖ್ಯೆ 9481990812, ಮೂಡಿಗೆರೆ ವಲಯ ದೂ.ಸಂ. 08263-220438, ಮೊ.ಸಂಖ್ಯೆ 9481990813, 7204004261 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪೋಟೋ ಫೈಲ್‌ ನೇಮ್‌ 25 ಕೆಸಿಕೆಎಂ 4