ಚಿಕ್ಕಮಗಳೂರು ಕೊಪ್ಪ ತಾಲೂಕಿನ ಅಸಗೋಡು ಗ್ರಾಪಂ ವ್ಯಾಪ್ತಿಯ ಹೊಸ ಕೊಪ್ಪ, ತಮ್ಮಡಹಳ್ಳಿ, ಮೇಲುಬಿಳ್ರೆ, ಕುಣಿಮಕ್ಕಿ ಅಬ್ಬಳಿ, ಬರ‍್ಕೊಡಿಗೆ ಸೇರಿದಂತೆ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯನ್ನು ಅರಣ್ಯ ಇಲಾಖೆ ಕೆಸರು ಗದ್ದೆಯನ್ನಾಗಿ ಮಾಡಿದ್ದು, ಸಂಚರಿಸಲು ಜನರು ಪರದಾಡುವಂತಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕೊಪ್ಪ ತಾಲೂಕಿನ ಅಸಗೋಡು ಗ್ರಾಪಂ ವ್ಯಾಪ್ತಿಯ ಹೊಸ ಕೊಪ್ಪ, ತಮ್ಮಡಹಳ್ಳಿ, ಮೇಲುಬಿಳ್ರೆ, ಕುಣಿಮಕ್ಕಿ ಅಬ್ಬಳಿ, ಬರ‍್ಕೊಡಿಗೆ ಸೇರಿದಂತೆ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯನ್ನು ಅರಣ್ಯ ಇಲಾಖೆ ಕೆಸರು ಗದ್ದೆಯನ್ನಾಗಿ ಮಾಡಿದ್ದು, ಸಂಚರಿಸಲು ಜನರು ಪರದಾಡುವಂತಾಗಿದೆ.ಶೃಂಗೇರಿ, ಕೊಪ್ಪ ತಾಲೂಕಿನಲ್ಲಿ ಮಳೆ ಬಿಡುವು ಕೊಡದೆ ಸುರಿಯುತ್ತಿದ್ದು, ಇದೇ ಸಮಯದಲ್ಲಿ ಅರಣ್ಯ ಇಲಾಖೆ ಕೊಪ್ಪ ತಾಲೂಕಿನ ಹೊಸ ಕೊಪ್ಪ ವ್ಯಾಪ್ತಿ ಅರಣ್ಯದಲ್ಲಿ ಕಡಿತಲೆ ಮಾಡಿದ ಮರದ ದಿಮ್ಮಿಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ಸಂಚರಿಸು ತ್ತಿರುವುದರಿಂದ ಇಡೀ ರಸ್ತೆ ಕೆಸರು ಹೊಂಡವಾಗಿ ಮಾರ್ಪಟ್ಟಿದೆ.
ಈ ರಸ್ತೆ ಮಾರ್ಗವಾಗಿಯೇ ನ್ಯಾಯ ಬೆಲೆ ಅಂಗಡಿ, ದೇವಸ್ಥಾನ, ಶಾಲೆಗಳಿಗೆ ಜನರು, ವಿದ್ಯಾರ್ಥಿಗಳು ಸಂಚರಿಸ ಬೇಕಾಗಿದೆ. ಅರಣ್ಯ ಇಲಾಖೆ ಅವಿವೇಕತನದಿಂದ ಮಳೆಗಾಲದಲ್ಲಿ ಅರಣ್ಯದಿಂದ ಟಿಂಬರ್ ಸಾಗಣೆ ಮಾಡುತ್ತಿದ್ದು, ಈ ರಸ್ತೆ ಯಲ್ಲಿ ಮನಯಷ್ಯರಿರಲಿ ದನಕರು ಸಂಚರಿಸುವುದು ಕಷ್ಟದ ಕೆಲಸ. ಈ ರಸ್ತೆಯಲ್ಲಿ ಸಂಚರಿಸುವ ಜನರಲ್ಲಿ ಹೆಚ್ಚಿನವರು ಮೈ ಕೈ ಕೆಸರು ಮಾಡಿಕೊಂಡು ಓಡಾಡುತ್ತಿದ್ದಾರೆ.ದ್ವಿಚಕ್ರಗಳಲ್ಲಿ ಓಡಾಡುವವರ ಸ್ಥಿತಿ ಹೇಳಲಾಗದಷ್ಟು ಕೆಟ್ಟದಾಗಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ತರಲು ಜನರು ನಿತ್ಯ ಪರದಾಡುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳ ಸ್ಥಿತಿಯಂತೂ ಚಿಂತಾಜನಕ. ಬೇಸಿಗೆ ಕಾಲದಲ್ಲಿ ಮರ ಸಾಗಿಸದೆ ಮಳೆಗಾಲದಲ್ಲಿ ಸಾಗಾಣೆ ಮಾಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಎಂಬುದು ಇಲ್ಲವೆ ? ಉತ್ತಮವಾಗಿದ್ದ ರಸ್ತೆ ಪೂರ್ಣ ಹಾನಿಗೊಳ್ಳುವಂತೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಮ್ಮ ಕಷ್ಟ ಗೊತ್ತಾಗು ತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು, ಮಳೆ ಗಾಲದಲ್ಲಿ ಟಿಂಬರ್ ಸಾಗಿಸುತ್ತಿರುವ ಹಿಂದೆ ಭ್ರಷ್ಟಾಚಾರ ನಡೆಸುವ ಉದ್ದೇಶ ಇರಬಹುದು ಎಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಟಿಂಬರ್ ಸಾಗಣೆ ಮಾಡುತ್ತಿರುವುದನ್ನು ಸ್ಥಗಿತಗೊಳಿಸಬೇಕು. ಹಾನಿಗೊಂಡ ರಸ್ತೆ ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಈ ಪ್ರದೇಶದ ಎಲ್ಲಾ ಹಳ್ಳಿಗಳ ಜನರು ಒಗ್ಗಟ್ಟಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಫೋಟೋ
ಕೊಪ್ಪ ತಾಲೂಕಿನ ಅಸಗೋಡು ಗ್ರಾಪಂ ವ್ಯಾಪ್ತಿಯ ಹೊಸ ಕೊಪ್ಪ ಪ್ರದೇಶದಲ್ಲಿ ಅರಣ್ಯ ಇಲಾಖೆ ಟಿಂಬರ್ ಸಾಗಣೆ ಮಾಡುತ್ತಿರುವುದರಿಂದ ಹಾನಿಗೊಂಡು ಕೆಸರು ಗದ್ದೆಯಾಗಿರುವ ರಸ್ತೆ.ಫೋಟೋಕೊಪ್ಪ ತಾಲೂಕಿನ ಅಸಗೋಡು ಗ್ರಾಪಂ ವ್ಯಾಪ್ತಿಯ ಹೊಸ ಕೊಪ್ಪ ಪ್ರದೇಶದಲ್ಲಿ ಅರಣ್ಯ ಇಲಾಖೆ ಟಿಂಬರ್ ಸಾಗಣೆ ಯಿಂದ ಹಾನಿಗೊಂಡ ರಸ್ತೆಯಲ್ಲಿ ಸಂಚರಿಸಲು ಜನರ ಪರದಾಟ.
