ಅರಣ್ಯ ಅತಿಕ್ರಮಣ ತೆರವು ಕಾರ್ಯ

| Published : Jun 08 2024, 12:31 AM IST

ಸಾರಾಂಶ

ದಿನಗಳಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸಿರದ ಹಿನ್ನೆಲೆ ನೂತನ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಕ್ರಮ ಕೈಗೊಂಡಿದ್ದಾರೆಂದು ಇಡಗುಂದಿ ವಲಯದ ವಲಯಾರಣ್ಯಾಧಿಕಾರಿ ಶಿಲ್ಪಾ ನಾಯ್ಕ ತಿಳಿಸಿದ್ದಾರೆ.

ಯಲ್ಲಾಪುರ: ತಾಲೂಕಿನ ಮಾವಿನಮನೆ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ತೆರವು ಮಾಡಲಾಯಿತು.

ಇಡಗುಂದಿ ಅರಣ್ಯ ವಲಯದ, ಬಾರೆ ಶಾಖೆಯ, ಮಾವಿನಮನೆ ಗ್ರಾಮದ ಶಿವರಾಮ ನಾರಾಯಣ ಭಟ್ಟ ಶೀಗೇಕೇರಿ ಎನ್ನುವ ವ್ಯಕ್ತಿ ೪ ಎಕರೆ ಮಾಲ್ಕಿ ಜಮೀನು ಹೊಂದಿದ್ದು, ಈಗಾಗಲೇ ಅರಣ್ಯ ಸರ್ವೇ ನಂಬರ್ ೫೩೯ರಲ್ಲಿ ೪ ಎಕರೆ ಅತಿಕ್ರಮಣ ಜಮೀನು ಹೊಂದಿದ್ದಲ್ಲದೇ, ಜಿಪಿಎಸ್ ಸಮೀಕ್ಷೆಯನ್ನೂ ಮಾಡಿಸಿಕೊಂಡಿದ್ದಾರೆ.

ಇದರ ಹೊರತಾಗಿ ಇದೀಗ ಪುನಃ ಅದೇ ಅರಣ್ಯ ಸರ್ವೇ ನಂಬರ್ ೫೩೯ರಲ್ಲಿ ಅರಣ್ಯ ಪ್ರದೇಶದಲ್ಲಿ ಹೊಸತಾಗಿ ಅತಿಕ್ರಮಣ ಮಾಡಿ, ಕಟ್ಟಡ ಕಟ್ಟಲು ಪ್ರಯತ್ನ ಮಾಡಿದ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಡೆದು, ಈ ಜಾಗದ ಕುರಿತಾಗಿ ಯಾವುದಾದರೂ ದಾಖಲೆಗಳಿದ್ದರೆ ತಂದು ಸಲ್ಲಿಸುವಂತೆ ತಿಳಿಸಿ ೨ ದಿನ ಕಾಲಾವಕಾಶ ನೀಡಿದ್ದರು.

ಆದರೆ ಅವರು ೨ ದಿನಗಳಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸಿರದ ಹಿನ್ನೆಲೆ ನೂತನ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಕ್ರಮ ಕೈಗೊಂಡಿದ್ದಾರೆಂದು ಇಡಗುಂದಿ ವಲಯದ ವಲಯಾರಣ್ಯಾಧಿಕಾರಿ ಶಿಲ್ಪಾ ನಾಯ್ಕ ತಿಳಿಸಿದ್ದಾರೆ. ಈ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಕೈಗೊಂಡ ಕಾನೂನು ಕ್ರಮದ ಕುರಿತಾಗಿ ವಿವಿಧ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳ ಬಗ್ಗೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.