ವನ್ಯಜೀವಿಗಳಿಗೆ ಬೇಕಿರುವ ಅರಣ್ಯ ಬೆಳಸಿ

| Published : Sep 27 2025, 12:00 AM IST

ವನ್ಯಜೀವಿಗಳಿಗೆ ಬೇಕಿರುವ ಅರಣ್ಯ ಬೆಳಸಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಲ್ಲಿ ಗುಣಮಟ್ಟದ ಮಣ್ಣು ನೀರು ಲಭ್ಯವಿದ್ದು ಅರಣ್ಯಾಧಿಕಾರಿಗಳು ವನ್ಯಜೀವಿಗಳಿಗೆ ಆಹಾರ ದೊರೆಯುವ ಗಿಡ, ಮರಗಳನ್ನು ಬೆಳೆಸುವಂತೆ ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ನಮ್ಮಲ್ಲಿ ಗುಣಮಟ್ಟದ ಮಣ್ಣು ನೀರು ಲಭ್ಯವಿದ್ದು ಅರಣ್ಯಾಧಿಕಾರಿಗಳು ವನ್ಯಜೀವಿಗಳಿಗೆ ಆಹಾರ ದೊರೆಯುವ ಗಿಡ, ಮರಗಳನ್ನು ಬೆಳೆಸುವಂತೆ ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.

ಅರಣ್ಯ ಇಲಾಖೆಯಿಂದ ತಾಲೂಕಿನ ತಿಮ್ಲಾಪುರ ಸಂರಕ್ಷಿತ ಅಭಯಾರಣ್ಯದಲ್ಲಿ ಕೆಎಂಇಆರ್‌ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ವಾತವರಣದಲ್ಲಿ ಆಮ್ಲಜನಕದ ಕೊರತೆಯಿದ್ದು, ವಿಷ ಅನಿಲಗಳ ಪ್ರಮಾಣ ಏರಿಕೆ ಆಗುತ್ತಿರುವ ಪರಿಣಾಮ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ವಾತಾವರಣದಲ್ಲಿ ಶೇ.32ರಷ್ಟು ಆಮ್ಲಜನಕ ಹಾಗೂ 68ರಷ್ಟು ವಿಷ ಅನಿಲಗಳಿವೆ. ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಹೆಚ್ಚು ಮರ ಗಿಡಗಳನ್ನು ಬೆಳಸಿ ಸಂರಕ್ಷಿಸಬೇಕು. ಕಾಡು ಬೆಳದರೆ ನಾಡು ಉಳಿದೀತು. ಅರಣ್ಯಗಳಿಂದ ಮಾನವನಿಗೆ ಮೂಲಭೂತ ಅವಶ್ಯಕತೆಗಳು ದೊರೆಯುತ್ತವೆ. ಅರಣ್ಯ ನಾಶವಾದರೆ ಮನುಕುಲವೇ ನಾಶವಾಗುತ್ತದೆ. ಮರಗಿಡ,ಬಳ್ಳಿಗಳ , ಪ್ರಾಣ ಸಂಕುಲಗಳ ಸಂರಕ್ಷಣೆಗೆ ಅಧಿಕ ಮಹತ್ವ ನೀಡಬೇಕಾಗಿದ್ದು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 500 ಸಸಿಗಳನ್ನು ನೆಟ್ಟು ಪೋಷಿಸುವ ಜೊತೆಗೆ ಸರ್ಕಾರಿ ಭೂಮಿಗಳಲ್ಲಿ ಹೆಚ್ಚು ಗಿಡ ನಡೆಸುವ ಕಾರ್ಯಕ್ರಮ ಹಮ್ಮಿಕೊಂಡು ಪೋಷಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್‌.ಶಶಿಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್, ವಲಯ ಅರಣ್ಯಾಧಿಕಾರಿ ಹೆಚ್.ಎಂ.ಸುರೇಶ್‌, ತಹಸೀಲ್ದಾರ್ ಶ್ರೀನಿವಾಸ್, ಇಒ ಲಕ್ಷ್ಮಣ್‌, ಸಿಪಿಐ ಹನುಮಂತರಾಯಪ್ಪ, ಉಪ ವಲಯ ಅರಣ್ಯಾಧಿಕಾರಿ ಎನ್‌.ಮುತ್ತುರಾಜ್‌ , ಸುದರ್ಶನ್‌, ಶ್ರೀಧರ್‌, ಪಾಪೇಗೌಡ, ಪಟೇಲ್‌ ರಾಜಣ್ಣ, ಬಸವರಾಜು ,ತುಂಗೋಟಿ ರಾಮಣ್ಣ ಮತ್ತಿತರರು ಇದ್ದರು.