ಸಾರಾಂಶ
ಹನೂರು ತಾಲೂಕಿನ ಒಡೆಯರ್ ಪಾಳ್ಯ ಗ್ರಾಮದ ರೈತ ಬಸವರಾಜ್ ಆನೆ ದಾಳಿಯಿಂದ ಬಲಗೈ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದು.
ಕನ್ನಡಪ್ರಭ ವಾರ್ತೆ ಹನೂರುರೈತನೊಬ್ಬ ಜಮೀನಿನಲ್ಲಿದ್ದಾಗ ಆನೆ ದಾಳಿ ನಡೆಸಿದ ಪರಿಣಾಮ ಬಲಗೈ ತೀವ್ರವಾಗಿ ಪೆಟ್ಟಾಗಿರುವ ಘಟನೆ ವರದಿಯಾಗಿದೆ. ತಾಲೂಕಿನ ಒಡೆಯರಪಾಳ್ಯ ಗ್ರಾಮದ ರೈತ ಬಸವರಾಜ್ ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯಾಗಿದ್ದಾನೆ.
ಘಟನೆ ವಿವರ:ರೈತ ಬಸವರಾಜು ಒಡೆಯರಪಾಳ್ಯ ಗ್ರಾಮದ ತಮ್ಮ ಜಮೀನಿನ ತೋಟದ ಮನೆಯಲ್ಲಿ ರಾತ್ರಿ ಕಾವಲಿಗಾಗಿ ಇದ್ದಾಗ ಅರಣ್ಯ ಪ್ರದೇಶದಿಂದ ಬಂದ ಕಾಡಾನೆ ಜಮೀನಿಗೆ ನುಗ್ಗಿ ರಾತ್ರಿ 12 ಗಂಟೆ ವೇಳೆ ರೈತ ಬಸವರಾಜ್ ಮೇಲೆ ದಾಳಿ ನಡೆಸಿ ತೀವ್ರವಾಗಿ ಬಲಗೈ ಪೆಟ್ಟಾಗಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಶುಭೋದಯ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅರಣ್ಯ ಸಚಿವರ ಭರವಸೆ:
ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಸಭೆಗೆ ತೆರಳುತ್ತಿದ್ದ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಆನೆ ದಾಳಿಯಿಂದ ಗಾಯಗೊಂಡಿರುವ ರೈತ ಬಸವರಾಜ ಅವರಿಗೆ ಸಾಂತ್ವನ ಹೇಳಿ ಇಲಾಖೆ ವತಿಯಿಂದ ಸಿಗುವ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ರೈತ ಬಸವರಾಜ್‌ಗೆ ಭರವಸೆ ನೀಡಿದ್ದಾರೆ.ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯ:
ದಿನನಿತ್ಯ ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಜಮೀನುಗಳಲ್ಲಿ ಕಾಡುಪ್ರಾಣಿಗಳು ರಾತ್ರಿ ದಾಳಿ ನಡೆಸಿ ಫಸಲು ನಾಶಗೊಳಿಸಿ ಜೊತೆಗೆ ಜೀವ ಹಾನಿ ಉಂಟು ಮಾಡುವ ಮುನ್ನ ಸಂಬಂಧಪಟ್ಟ ಇಲಾಖೆ ಶಾಶ್ವತ ಪರಿಹಾರ ನೀಡುವ ಮೂಲಕ ಕಾಡುಪ್ರಾಣಿಗಳು ರೈತರ ಜಮೀನಿಗೆ ಬರದಂತೆ ತಡೆಗಟ್ಟಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಅಖಿಲ ವೀರಶೈವ ಮಹಾಸಭಾ ಹನೂರು ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್ ಒತ್ತಾಯಿಸಿದ್ದಾರೆ.