ಕನಕಪುರದಲ್ಲಿ ಅರಣ್ಯ ಮಾದರಿ ಮತಗಟ್ಟೆ!

| Published : Apr 26 2024, 12:45 AM IST

ಸಾರಾಂಶ

ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಪ್ರಮಾಣ ಹೆಚ್ಚಿಸಲು ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರಸಭೆ ಅರಣ್ಯ ಮಾದರಿ ವಿಶೇಷ ಮತಗಟ್ಟೆ ಸ್ಥಾಪಿಸಿ ಮತದಾರರ ಗಮನ ಸೆಳೆಯುತ್ತಿದೆ.

ರಾಮನಗರ ಜಿಲ್ಲಾಧಿಕಾರಿಗಳು, ತಾಲೂಕು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಮಾರ್ಗದರ್ಶನದಲ್ಲಿ ನಗರಸಭಾ ಆಯುಕ್ತ ಮಹದೇವ್ ಅವರು, ಅಡವಿ ಹೆಸರಿನಲ್ಲಿ ಅರಣ್ಯ ಮಾದರಿಯ ಮತಗಟ್ಟೆ ಸ್ಥಾಪಿಸಿದ್ದು ಈ ಮತಗಟ್ಟೆಯಲ್ಲಿ ಮತದಾನಕ್ಕೆ ಬರುವ ಮೊದಲ ಐನೂರು ಮತದಾರರಿಗೆ ಉಚಿತ ಸಸಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಕನಕಪುರದ ಹಲಸಿನ ಮರದ ದೊಡ್ಡಿ ಸಂಗಮ ರಸ್ತೆಯಲ್ಲಿರುವ ಜಿಟಿಟಿಸಿ ಕಾಲೇಜಿನ ಮತಗಟ್ಟೆ ಸಂಖ್ಯೆ-79ರಲ್ಲಿ ಅರಣ್ಯ ಮಾದರಿಯ ಮತಗಟ್ಟೆ ಸ್ಥಾಪಿಸಿದ್ದು ಈ ಮತಗಟ್ಟೆಯೊಳಗೆ ಮತದಾರರಿಗೆ ಕಾಡಿನ ಅನುಭವ ನೀಡಲಿದೆ. ಮತಗಟ್ಟೆ ಮುಂಭಾಗ ಚಪ್ಪರ, ಕಾಡಿನ ವಿಶೇಷ ಹೂಗಳು, ತಳಿರು-ತೋರಣ, ಗಿಡಗಳನ್ನಿಟ್ಟು ಅಲಂಕರಿಸುವ ಮೂಲಕ ಮತದಾರರನ್ನ ಸೆಳೆದು ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.ಕೆ ಕೆ ಪಿ ಸುದ್ದಿ1 (1):ಕನಕಪುರದ ಮತಗಟ್ಟೆ ಸಂಖ್ಯೆ 79ರಲ್ಲಿ ನಗರಸಭೆಯಿಂದ ಮತದಾರರನ್ನ ಆಕರ್ಷಿಸಲು ಅರಣ್ಯ ಮಾದರಿಯ ಮತಗಟ್ಟೆ ಸ್ಥಾಪಿಸಿರುವುದು.