ಮೂರು ಎಕರೆಗಿಂತ ಕಡಿಮೆ ಇರುವ ರೈತರಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಮಂತ್ರಿಗಳ ಬಳಿಯೂ ಚರ್ಚಿಸಿ ತೀರ್ಮಾನಿಸಲಾಗಿದೆ, ಮಂತ್ರಿಗಳೇ ರೈತರಿಗೆ ತೊಂದರೆ ನೀಡಬಾರದು ಎಂದರೂ ಅಧಿಕಾರಿಗಳು ರೈತರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಅರಣ್ಯ ಇಲಾಖೆಗೆ ಸೇರಿದ ಜಮೀನು ವಶಪಡಿಸಿಕೊಳ್ಳಲು ನಮ್ಮ ವಿರೋಧವಿಲ್ಲ. ಅದರೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿ ಅರಣ್ಯ ಇಲಾಖೆ ಮಂತ್ರಿಗಳ ಗಮನ ಸೆಳೆದರು.ಶ್ರೀನಿವಾಸಪುರ ತಾಲೂಕಿನಲ್ಲಿ ರೈತರಿಂದ ಅರಣ್ಯ ಇಲಾಖೆ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ, ಆದರೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯದಿಂದ ರೈತರ ಪರ ಯಥಾಸ್ಥಿತಿ ಕಾಯ್ದುಗೊಳ್ಳಬೇಕು ಎಂದು ಆದೇಶವಿದೆ. ಇದನ್ನು ಇತ್ತೀಚೆಗೆ ಉಸ್ತುವಾರಿ ಸಚಿವ ಭೈರತಿ ಸುರೇಶ್‌ರ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ.

ಕೆಡಿಪಿ ಸಭೆಯಲ್ಲಿ ನ್ಯಾಯಾಲಯದಿಂದ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಆದೇಶವಿದೆ ಡಿಎಫ್‌ ತಿಳಿಸಿದ್ದಾರೆ. ಆದರೆ ಇಂದು ಆ ಜಮೀನು ಅರಣ್ಯ ಇಲಾಖೆ ಸ್ವಾಧೀನದಲ್ಲಿದ್ದೇವೆ ಎನ್ನುತ್ತಾರೆ. ಆದರೆ ರೈತರಿದ್ದ ಜಮೀನನ್ನು ವಶಕ್ಕೆ ಪಡೆದಿದ್ದು ಅದನ್ನು ಮನಗಂಡು ರೈತರ ಸ್ವಾಧಿನಕ್ಕೆ ತೊಂದರೆ ನೀಡಬಾರದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಮಧ್ಯಂತರ ಆದೇಶವಿದೆ ಎಂದು ಸ್ಪಷ್ಟಪಡಿಸಿದರು.

ಮೂರು ಎಕರೆಗಿಂತ ಕಡಿಮೆ ಇರುವ ರೈತರಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಮಂತ್ರಿಗಳ ಬಳಿಯೂ ಚರ್ಚಿಸಿ ತೀರ್ಮಾನಿಸಲಾಗಿದೆ, ಮಂತ್ರಿಗಳೇ ರೈತರಿಗೆ ತೊಂದರೆ ನೀಡಬಾರದು ಎಂದರೂ ಅಧಿಕಾರಿಗಳು ರೈತರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ವಿವರಿಸಿದರು. ಶ್ರೀನಿವಾಸಪುರ ತಾಲೂಕಿನ ಗ್ರಾಮವೊಂದರಲ್ಲಿ ೩೦೦ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಹೋಗಿ ರೈತರ ಮನೆ ಬಳಿ ಇರುವ ಟ್ಯಾಕ್ಟರ್‌ಗಳನ್ನ ಅರಣ್ಯ ಇಲಾಖೆ ಜಾಗ ಉಳುಮೆ ಮಾಡುತ್ತಿದ್ದೀರಿ ಎಂದು ಸೀಜ್ ಮಾಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖೆ ಮಂತ್ರಿ ಈಶ್ವರ್ ಬೀಮಣ್ಣ ಖಂಡ್ರೆ ಉತ್ತರಿಸಿ, ಕೋಲಾರ ಜಿಲ್ಲೆಯೊಂದರದ್ದೆ ಹೈಕೋರ್ಟಿನಲ್ಲಿ ೧೫೦ ಪ್ರಕರಣಗಳಿವೆ ಉಳಿದ ೫೦ ಪ್ರಕರಣ ಸ್ಥಳಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಅದರೆ ನ್ಯಾಯಲಯದ ಅದೇಶ ಪ್ರತಿಯೊಬ್ಬರು ಪಾಲನೇ ಮಾಡಬೇಕಾಗಿದೆ. ಅಧಿಕಾರಿಗಳಿಗೆ ನ್ಯಾಯಾಲಯ ಅದೇಶ ಪಾಲನೆಗೆ ಸೂಚಿಸುವುದಾಗಿ ಭರವಸೆ ನೀಡಿದರು.