ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು, ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಉತ್ತಾರಾಧಿಮಠ ಸಮರ್ಪಿಸಿರುವ ವಜ್ರಗಳಿಂದ ನಿರ್ಮಿಸಿರುವ ವಿಶೇಷ ಅಭರಣಗಳಿಂದ ಅಲಂಕರಿಸಿ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣಗಂಧೋತ್ಸವ ನಡೆಸಿದ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಗೋದುಳಿ ಲಗ್ನದಲ್ಲಿ ಜರಗುವ ಶ್ರೀ ಹನುಮಂತ್ಯುತ್ಸವ ಪ್ರಯುಕ್ತ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥ ಬೀದಿಯಲ್ಲಿ ಉತ್ಸವ ನಡೆಸಿದ ನಂತರ ಶ್ರೀ ಹನುಮಂತನ ಮೂರ್ತಿಯ ಮೇಲೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗುರುವಾರ ರಾತ್ರಿ ಶ್ರೀ ಹನುಮಂತ್ಯುತ್ಸವ ವೈಭವದಿಂದ ನಡೆಯಿತು.

ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು, ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಉತ್ತಾರಾಧಿಮಠ ಸಮರ್ಪಿಸಿರುವ ವಜ್ರಗಳಿಂದ ನಿರ್ಮಿಸಿರುವ ವಿಶೇಷ ಅಭರಣಗಳಿಂದ ಅಲಂಕರಿಸಿ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣಗಂಧೋತ್ಸವ ನಡೆಸಿದ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಗೋದುಳಿ ಲಗ್ನದಲ್ಲಿ ಜರಗುವ ಶ್ರೀ ಹನುಮಂತ್ಯುತ್ಸವ ಪ್ರಯುಕ್ತ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥ ಬೀದಿಯಲ್ಲಿ ಉತ್ಸವ ನಡೆಸಿದ ನಂತರ ಶ್ರೀ ಹನುಮಂತನ ಮೂರ್ತಿಯ ಮೇಲೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಕಡ್ಲೆಕಾಯಿಯನ್ನು ದೇವರ ಮೂರ್ತಿಯ ಮೇಲೆ ಎರಚುತ್ತಾ. ಶ್ರೀ ಸ್ವಾಮಿಯ ಅಡ್ಡೆಯನ್ನು ಹೊತ್ತು ನೂರಾರು ಭಕ್ತರು ಹನುಮಂತನ ಮೂರ್ತಿಯನ್ನು ಮೆರೆಸುತ್ತ ರಥಬೀದಿಯಲ್ಲಿ ಸಾಗಿದರು. ಉತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ಕಡ್ಲೆಕಾಯಿಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.

ಎಸ್‌ಎಲ್‌ಎನ್‌ಸಿ ಸಂಘದ ಯುವಕರು ಪೂಜಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಪುರಸಭೆ ಮಾಜಿ ಸದಸ್ಯ ಎಚ್. ಕೆ. ಗಂಗಾಧರ್‌ (ಕ್ಯಾಪ್ಟನ್ ಗಂಗಾಧರ್‌), ಪುರಸಭೆ ಮಾಜಿ ಅಧ್ಯಕ್ಷ ಎಚ್. ಕೆ. ಪ್ರಸನ್ನ, ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್, ಚಲುವರಾಜು, ಪ್ರವೀಣ್, ರಾಘವೇಂದ್ರ, ರಾಜು, ಚಲುವ, ಗುರು, ಮಹೇಶ್, ಸುಬ್ಬು, ಬಾಬು, ರಾಜೇಶ್, ಸುನೀಲ್, ಮಧು, ಅಭಿ, ಸೇರಿದಂತೆ ಸಾವಿರಾರು ಭಕ್ತರು ಹನುಂಮಂತ್ಯತ್ಸುವದಲ್ಲಿ ಭಾಗಿಗಳಾಗಿ ಸಂಭ್ರಮಿಸಿದರು.