ಸಾರಾಂಶ
ರಸ್ತೆಯೋ, ಕಾಲುದಾರಿಯೋ, ಇನ್ನೆಲ್ಲೋ ಧುತ್ತನೆ ಕಾಡಾನೆ ಬಂದರೆ ಏನು ಮಾಡೋದು? ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳೋದೇ ಎಲ್ಲರಿಗೂ ಸವಾಲಿನ ಸಂಗತಿ. ಇಂಥ ಆಕಸ್ಮಿಕ ಪರಿಸ್ಥಿತಿ ಸಕ್ರೆಬೈಲ್ ಆನೆ ಬಿಡಾರ ಬಳಿ ವಾಹನ ಚಾಲಕರಿಗೆ ಎದುರಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿರುವ ಸಂಗತಿ ನಡೆದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಸ್ತೆಯೋ, ಕಾಲುದಾರಿಯೋ, ಇನ್ನೆಲ್ಲೋ ಧುತ್ತನೆ ಕಾಡಾನೆ ಬಂದರೆ ಏನು ಮಾಡೋದು? ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳೋದೇ ಎಲ್ಲರಿಗೂ ಸವಾಲಿನ ಸಂಗತಿ. ಇಂಥ ಆಕಸ್ಮಿಕ ಪರಿಸ್ಥಿತಿ ಸಕ್ರೆಬೈಲ್ ಆನೆ ಬಿಡಾರ ಬಳಿ ವಾಹನ ಚಾಲಕರಿಗೆ ಎದುರಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿರುವ ಸಂಗತಿ ನಡೆದಿದೆ.ಸಮೀಪ ಸಿಗುವ ತೋಟವೊಂದರಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಮಾವುತರು, ಕಾವಾಡಿಗಳು ಕಾಡಾನೆಯನ್ನು ಬೆದರಿಸಿ ಕಾಡಿಗೆ ಓಡಿಸಿದ್ದಾರೆ.
ಇಷ್ಟು ದಿನ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಗ ಶಿವಮೊಗ್ಗ-ತೀರ್ಥಹಳ್ಳಿಯ ಹೆದ್ದಾರಿಯಲ್ಲಿಯೇ ಕಾಣಿಸಿಕೊಂಡಿವೆ. ಸಕ್ರೆಬೈಲ್ ಆನೆ ಬಿಡಾರದ ಸಮೀಪ ಸಿಗುವ ತೋಟವೊಂದರಲ್ಲಿ ಕಾಣಿಸಿಕೊಂಡ ಕಾಡಾನೆ ರೋಡಿಗೆ ಬಂದು ನಿಂತಿತ್ತು. ಹೀಗಾಗಿ ವಾಹನ ಸವಾರರು ನಿಂತಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಉಂಟಾಗಿತ್ತು. ಆನೆಯಿಂದಾಗಿ ಸುಮಾರು 1 ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಕೊನೆಗೆ ಆನೆ ರಸ್ತೆ ದಾಟಿ ಕಾಡಿಗೆ ಹೋಗಿದೆ.- - - -30ಎಸ್‌ಎಂಜಿಕೆಪಿ04:
ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರ ಸಮೀಪ ರಸ್ತೆ ದಾಟುತ್ತಿರುವ ಕಾಡಾನೆ.