ಅರಣ್ಯ ಗ್ರಾಮದ ರಸ್ತೆಯ ಗೇಟಿಗೆ ಬೀಗ: ಪ್ರತಿಭಟನೆ

| Published : Mar 21 2024, 01:01 AM IST

ಸಾರಾಂಶ

ಸಂಜೆಯಾಗುತ್ತಿದಂತೆ ಅರಣ್ಯ ಇಲಾಖೆಯವರು ಅರಣ್ಯದೊಳಗಿನ ಗ್ರಾಮಗ‍ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗೇಟ್ ಹಾಕುವುದರಿಂದ ಗ್ರಾಮಗಳಿಗೆ ತೆರಳಲು ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಹಳೆಯೂರು ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.

ಕನ್ನಡ ಪ್ರಭ ವಾರ್ತೆ ಹನೂರುಸಂಜೆಯಾಗುತ್ತಿದಂತೆ ಅರಣ್ಯ ಇಲಾಖೆಯವರು ಅರಣ್ಯದೊಳಗಿನ ಗ್ರಾಮಗ‍ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗೇಟ್ ಹಾಕುವುದರಿಂದ ಗ್ರಾಮಗಳಿಗೆ ತೆರಳಲು ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಹಳೆಯೂರು ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು. ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ, ಮೆಂದರೆ, ನಾಗಮಲೆ, ತೇಕಣೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಗೇಟ್ ನ ಬಳಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು. ನಂತರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹದೇವಪ್ಪ ಮಾತನಾಡಿ, ವಿವಿಧ ಗ್ರಾಮಗಳಿಗೆ ತೆರಳಲು ಅರಣ್ಯ ಅಧಿಕಾರಿಗಳು ಸಿಬ್ಬಂದಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ಗೇಟ್ ನ ಬೀಗ ಜಡಿದು ಹೋಗುವ ಸಿಬ್ಬಂದಿ ವರ್ಗದವರಿಂದ ಇಲ್ಲಿನ ವಿವಿಧ ಗ್ರಾಮದ ಗರ್ಭಿಣಿ ಹೆಂಗಸರು ಮತ್ತು ವಯಸ್ಸಾದವರು ಆಸ್ಪತ್ರೆ ತುರ್ತು ಕೆಲಸಗಳಿಗೆ ಹೋಗಿ ಬರಲು ಮಲೆ ಮಾದೇಶ್ವರ ಬೆಟ್ಟದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹನೂರು ,ಕೊಳ್ಳೇಗಾಲ ಇಲ್ಲದಿದ್ದರೆ ಚಾಮರಾಜನಗರ ಅಥವಾ ತಮಿಳುನಾಡಿನ ಮೆಟ್ಟೂರಿಗೆ ಹೋಗಬೇಕಾಗಿದೆ ಈಗಾಗಿ ಬಸ್ಸಿನ ವ್ಯವಸ್ಥೆ ಇಲ್ಲದೆ ಸಂಜೆ ವೇಳೆ ತಡವಾಗಿ ಬಂದರೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಗ್ರಾಮಕ್ಕೆ ತೆರಳಲು ಅಡಚಣೆ ಉಂಟು ಮಾಡುತ್ತಿರುವುದರಿಂದ ಈ ಮಾರ್ಗದಲ್ಲಿಯೇ ಓಡಾಡುವ ನಿವಾಸಿಗಳಿಗೆ ತೊಂದರೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .ಗುಂಡಿಟ್ಟು ಸಾಯಿಸಿ ಇಲ್ಲದಿದ್ದರೆ ಬದುಕಲು ಬಿಡಿ ಗ್ರಾಮಸ್ಥರ ಅಳಲು: ಇದೇ ವೇಳೆ ಗ್ರಾಮಸ್ಥರು ಮಾತನಾಡಿ ಭಾರತೀಯ ಪ್ರಜೆಗಳಾಗಿ ನಮ್ಮನ್ನು ಬದುಕಲು ಬಿಡಿ ಇಲ್ಲದಿದ್ದರೆ ಗ್ರಾಮಸ್ಥರನ್ನು ಗುಂಡಿಟ್ಟು ಕೊಂದುಬಿಡಿ ಈ ರೀತಿ ಚಿತ್ರ ಹಿಂಸೆ ಕೊಟ್ಟು ನಿವಾಸಿಗಳಿಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಕಿರುಕುಳ ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.24 ತಾಸು ಓಡಾಡಲು ಅವಕಾಶ ಮಾಡಿಕೊಡಿ: ಅರಣ್ಯ ಅಧಿಕಾರಿಗಳು ಸಂಜೆ ಸಮಯ ಹಾಗೂ ಮಧ್ಯಾಹ್ನದ ವೇಳೆ ಗೇಟಿಗೆ ಬೀಗ ಹಾಕುವುದರಿಂದ ಸ್ಥಳೀಯರಿಗೆ ಓಡಾಡಲು ತೀವ್ರವಾದ ತೊಂದರೆಯಾಗಿದೆ ದಿನದ 24 ತಾಸು ಕೂಡ ಗ್ರಾಮಸ್ಥರು ತಮ್ಮ ವಾಹನಗಳಲ್ಲಿ ನಿರ್ಭೀತಿಯಿಂದ ಸಂಚಾರ ಮಾಡಲು ಅವಕಾಶ ಕಲ್ಪಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದರು ಪೊಲೀಸರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಮಲೆ ಮಾದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ ಸ್ಥಳೀಯರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಗೇಟಿಗೆ ಬೀಗ ಹಾಕಿ ಎಲ್ಲೋ ಹೋದರೆ ಇಲ್ಲಿನ ನಿವಾಸಿಗಳು ಏನು ಮಾಡಬೇಕು ಎಂದು ಅನುಕೂಲಕ್ಕೆ ತಕ್ಕಂತೆ ನಿರ್ವಹಿಸಿ ಎಂದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು ಭರವಸೆ:

ಪ್ರತಿಭಟನಾ ಸ್ಥಳಕ್ಕೆ ಡಿಆರ್‌ಎಫ್‌ಒ ಭೇಟಿ ನೀಡಿ ವಲಯ ಅರಣ್ಯ ಅಧಿಕಾರಿಗಳು ಮೀಟಿಂಗ್ ಗೆ ತೆರಳಿರುವುದರಿಂದ ಅವರ ಸೂಚನೆಯ ಮೇರೆಗೆ ಮುಂದೆ ಇಂತಹ ಸಮಸ್ಯೆಗಳಿಗೆ ಅವಕಾಶ ಮಾಡಿಕೊಡದೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿ ಗ್ರಾಮಸ್ಥರ ಹೋರಾಟಕ್ಕೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.